ಭಾರತದಲ್ಲೆಲ್ಲೂ ಕಾಣದ ಒರಾಂಗುಟನ್‌ಗಳು ಒಡಿಶಾದ ಅರಣ್ಯದಲ್ಲಿ ಪತ್ತೆ; 5 ಮರಿಗಳ ರಕ್ಷಣೆ, ಕಳ್ಳಸಾಗಣೆ ಶಂಕೆ!

ಬಾಲಸೋರ್ ಜಿಲ್ಲೆಯ ಭೋಗರೈ ಬ್ಲಾಕ್‌ನಲ್ಲಿರುವ ಉದಯಪುರ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ 2 ಹೆಣ್ಣು, 3 ಗಂಡು ಒರಾಂಗುಟನ್ ಮರಿಗಳು ಕಂಡುಬಂದಿವೆ.
Five baby orangutans found abandoned in Odisha forest
ಒಡಿಶಾದಲ್ಲಿ ಕಂಡುಬಂದಿರುವ 5 ಒರಾಂಗುಟನ್ ಮರಿಗಳುonline desk
Updated on

ಬಾಲಸೋರ್: ಇಂಡೋನೇಷ್ಯಾ ಮತ್ತು ಮಲೇಷ್ಯಾಗಳಲ್ಲಿ ಸ್ವಾಭಾವಿಕ ವಾಸಸ್ಥಾನಗಳನ್ನು ಹೊಂದಿರುವ ಒರಾಂಗುಟನ್‌ಗಳು ಒಡಿಶಾದ ರಾಂಕೋಥಾ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಬಾಲಸೋರ್ ಜಿಲ್ಲೆಯ ಭೋಗರೈ ಬ್ಲಾಕ್‌ನಲ್ಲಿರುವ ಉದಯಪುರ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ 2 ಹೆಣ್ಣು, 3 ಗಂಡು ಒರಾಂಗುಟನ್ ಮರಿಗಳು ಕಂಡುಬಂದಿವೆ.

ಉದಯಪುರ ಅರಣ್ಯ ಇಲಾಖೆ, 5 ಒರಾಂಗುಟನ್‌ಗಳನ್ನು ರಕ್ಷಿಸಿದ್ದು, ಪ್ರಸ್ತುತ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವುಗಳನ್ನು ನಂದಂಕನನ್‌ಗೆ ತರಲಾಗುವುದು ಎಂದು ಅರಣ್ಯ ಸಚಿವ ಗಣೇಶ್ ರಾಮ್ ಸಿಂಗ್ ಖುಂಟಿಯಾ ನಂತರ ತಿಳಿಸಿದ್ದಾರೆ. ಇಲ್ಲಿ ಒರಾಂಗುಟನ್ ಪತ್ತೆಯಾಗಿರುವುದಕ್ಕೂ ಅಂತಾರಾಷ್ಟ್ರೀಯ ಕಳ್ಳಸಾಗಣೆಗೂ ಸಂಬಂಧವಿದೆ ಎಂದು ಸಚಿವರು ಶಂಕಿಸಿದ್ದಾರೆ.

ಮಾಹಿತಿ ಪಡೆದ ನಂತರ ಉದಯಪುರ ಅರಣ್ಯ ಇಲಾಖೆಯ ತಂಡ ಇಂದು ಬೆಳಗ್ಗೆ ಬಡಪಹಿ ಪ್ರದೇಶಕ್ಕೆ ತಲುಪಿತು. ನಂತರ ಅವರು ಐದು ಒರಾಂಗುಟನ್‌ಗಳನ್ನು ರಕ್ಷಿಸಿದೆ. ಮಾಹಿತಿ ಪಡೆದ ನಂತರ ವೈದ್ಯಕೀಯ ತಂಡವು ಸ್ಥಳಕ್ಕೆ ತಲುಪಿ ಒರಾಂಗುಟನ್‌ಗಳಿಗೆ ಚಿಕಿತ್ಸೆ ನೀಡುತ್ತಿದೆ. ಈ ಒರಾಂಗುಟನ್‌ಗಳು ಎಲ್ಲಿಂದ ಬಂದವು ಮತ್ತು ಅವು ಈ ಪ್ರದೇಶವನ್ನು ಹೇಗೆ ತಲುಪಿದವು ಎಂಬ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಒರಾಂಗುಟನ್‌ಗಳು ಪತ್ತೆಯಾದ ಬಗ್ಗೆ ಪಿಸಿಸಿಎಫ್ ಪ್ರೇಮ್ ಝಾ ಮಾತನಾಡಿ, ವಿದೇಶಗಳಲ್ಲಿ ಎರಡರಿಂದ ಮೂರು ಸ್ಥಳಗಳಲ್ಲಿ ಒರಾಂಗುಟನ್‌ಗಳು ಕಂಡುಬರುತ್ತವೆ ಎಂದು ಹೇಳಿದರು. ಅರಣ್ಯ ಇಲಾಖೆಯ ವನ್ಯಜೀವಿ ಶಾಖೆಯು ಒರಾಂಗುಟನ್​ಗಳು ಒಡಿಶಾಗೆ ಹೇಗೆ ಬಂದವು ಎಂಬುದರ ಕುರಿತು ತನಿಖೆ ನಡೆಸುತ್ತಿದೆ. ಅವುಗಳ ವಯಸ್ಸು ಒಂದು ಮತ್ತು ಎರಡು ವರ್ಷಗಳ ನಡುವೆ ಇದೆ. ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

Five baby orangutans found abandoned in Odisha forest
ಯಲ್ಲಾಪುರದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಭಾರೀ ಪ್ರಮಾಣದ ವನ್ಯಜೀವಿ ವಸ್ತುಗಳ ವಶ, ಇಬ್ಬರ ಬಂಧನ! Video

ಈ ಒರಾಂಗುಟನ್‌ಗಳು ಮಲೇಷ್ಯಾ, ಇಂಡೋನೇಷ್ಯಾ ಮತ್ತು ಚೀನಾದಂತಹ ವಿದೇಶಗಳಲ್ಲಿ ಕಂಡುಬರುತ್ತವೆ ಎಂದರು. ಈ ಅಪರೂಪದ ಪ್ರಭೇದ ಇಲ್ಲಿ ಕಂಡು ಬಂದಿರುವುದು ಒಡಿಶಾಗೆ ಅದೃಷ್ಟ. ಬಹುಶಃ ಅಂತಾರಾಷ್ಟ್ರೀಯ ಮಾಫಿಯಾ ಇವುಗಳ ಕಳ್ಳಸಾಗಣೆ ಮಾಡುತ್ತಿದೆ. ಒರಾಂಗುಟನ್‌ನ ಮಾರುಕಟ್ಟೆ ಬೆಲೆ 25 ಲಕ್ಷ ರೂಪಾಯಿಗಳು. ಕಳ್ಳಸಾಗಣೆ ಶಂಕಿಸಲಾಗಿದೆ, ಎಸಿಸಿಎಸ್​​ ತನಿಖೆಯ ನಂತರ ಇದು ಪತ್ತೆಯಾಗಲಿದೆ ಎಂದು ಹೇಳಿದರು.

ಈ ಪ್ರಭೇದ ಭಾರತದಲ್ಲಿಲ್ಲ. ಅವುಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿತ್ತು. ಒರಾಂಗುಟನ್‌ಗಳು ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ಅವು ಶಾಂತಿಯುತವಾಗಿವೆ. ಅವು ಮಾನವರ ಪೂರ್ವಜರು ಎಂದು ಇತಿಹಾಸ ಹೇಳುತ್ತದೆ. ಒರಾಂಗುಟನ್‌ಗಳ ಬಗ್ಗೆ ಸಂಶೋಧನೆ ನಡೆಸಲಾಗುವುದು. ಜಪಾನ್‌ನಿಂದ ಕೆಲವು ಪ್ರಾಣಿಗಳನ್ನು ನಂದಂಕನನ್‌ಗೆ ತರಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com