'ಗುಜರಾತ್ ಪಾಕಿಸ್ತಾನದಲ್ಲಿದೆಯೇ?': ರಾಜಕೀಯ ವಿವಾದದ ನಡುವೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಸಮರ್ಥಿಸಿಕೊಂಡ ಪರೇಶ್ ರಾವಲ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯಿಂದ ಗುಜರಾತ್‌ನ ಕೆವಾಡಿಯಾಗೆ ಸ್ಥಳಾಂತರಗೊಳ್ಳಲಿದ್ದು, ಸೆಪ್ಟೆಂಬರ್ 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
Paresh Rawal
ಪರೇಶ್ ರಾವಲ್
Updated on

ಈ ತಿಂಗಳು ದೆಹಲಿ ಬದಲಿಗೆ ಗುಜರಾತ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ರಾಜಕೀಯ ವಿವಾದವೊಂದಕ್ಕೆ ಕಾರಣವಾಗಿದೆ. ಈ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ, ನಟ ಪರೇಶ್ ರಾವಲ್ ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

'ಗುಜರಾತ್ ಪಾಕಿಸ್ತಾನದಲ್ಲಿದೆಯೇ? ಅಥವಾ ಬಾಂಗ್ಲಾದೇಶದಲ್ಲಿದೆಯೇ? ಗುಜರಾತ್ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ಖಂಡಿತವಾಗಿಯೂ ಈ ಸಮಾರಂಭ ನಡೆಯಬೇಕು' ಎಂದು ಪರೇಶ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ ವಿಚಾರದ ಸುತ್ತ ಎದ್ದಿರುವ ರಾಜಕೀಯ ವಿವಾದದ ಕುರಿತು ಕೇಳಿದಾಗ ಪರೇಶ್ ರಾವಲ್, 'ರಾಜಕಾರಣಿಗಳ ಕೆಲಸವೇ ಪ್ರಶ್ನೆಗಳನ್ನು ಎತ್ತುವುದು. ಜನವರಿ 26ರ ಪರೇಡ್ ದೆಹಲಿಯಲ್ಲಿ ನಡೆಯುತ್ತದಲ್ಲವೇ? ಹಾಗಾಗಿ ಪ್ರತಿಯೊಂದು ಕಾರ್ಯಕ್ರಮವೂ ಎಲ್ಲ ರಾಜ್ಯಗಳಲ್ಲಿಯೂ ನಡೆಯಬೇಕು' ಎಂದರು.

ಜುಲೈನಲ್ಲಿ ಘೋಷಿಸಲಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಆವೃತ್ತಿಯು ಎಂದಿನ ಸಂಪ್ರದಾಯಕ್ಕಿಂತ ಭಿನ್ನವಾಗಿರಲಿದೆ; ಆದಾಗ್ಯೂ, ಈ ಹಿಂದೆ ದೆಹಲಿಯ ಹೊರಗೆ ಸಮಾರಂಭ ನಡೆದ ನಿದರ್ಶನಗಳೂ ಇವೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯಿಂದ ಗುಜರಾತ್‌ನ ಕೆವಾಡಿಯಾಗೆ ಸ್ಥಳಾಂತರಗೊಳ್ಳಲಿದ್ದು, ಸೆಪ್ಟೆಂಬರ್ 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

Paresh Rawal
72 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್: ಇದೇ ಮೊದಲ ಬಾರಿಗೆ ದೆಹಲಿ ಬದಲು ಗುಜರಾತ್‌ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ!

ಕೆವಾಡಿಯಾ (ಇದೀಗ 'ಏಕ್ತಾ ನಗರ' ಎಂದು ಮರುನಾಮಕರಣಗೊಂಡಿದೆ) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆ ಇರುವ ತಾಣವಾಗಿದೆ. 597 ಅಡಿ ಎತ್ತರದ 'ಸ್ಟ್ಯಾಚ್ಯೂ ಆಫ್ ಯೂನಿಟಿ'ಯನ್ನು (ಏಕತೆಯ ಪ್ರತಿಮೆ) 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

1954ರ ಮೊದಲ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಅಂದಿನಿಂದೀಚೆಗೆ ಹೆಚ್ಚಿನ ಪ್ರಶಸ್ತಿ ಪ್ರದಾನ ಸಮಾರಂಭಗಳು ಅಲ್ಲಿಯೇ ನಡೆದಿವೆ.

17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ 1971ರಲ್ಲಿ ಚೆನ್ನೈನಲ್ಲಿ ನಡೆಯಿತು. 'ಆರ್ಟಿಕಲ್ 370' ಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಅದರ ಚಿತ್ರದ ನಟಿ ಯಾಮಿ ಗೌತಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ ಮತ್ತು ಬಾಲಿವುಡ್ ತಾರೆ ಕಾರ್ತಿಕ್ ಆರ್ಯನ್ ಕ್ರಮವಾಗಿ 'ಬ್ರಮಯುಗಂ' ಮತ್ತು 'ಚಂದು ಚಾಂಪಿಯನ್' ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.

ವಿನಾಯಕ ದಾಮೋದರ್ ಸಾವರ್ಕರ್ ಅವರ ಜೀವನಚರಿತ್ರೆಯನ್ನಾಧರಿಸಿದ 'ಸ್ವಾತಂತ್ರ್ಯವೀರ್ ಸಾವರ್ಕರ್' ಚಿತ್ರಕ್ಕಾಗಿ, ನಟ ಹಾಗೂ ನಿರ್ದೇಶಕ ರಣದೀಪ್ ಹೂಡಾ ಅವರಿಗೆ 'ಅತ್ಯುತ್ತಮ ಚೊಚ್ಚಲ ನಿರ್ದೇಶಕ' ಪ್ರಶಸ್ತಿಯನ್ನು ಘೋಷಿಸಲಾಗಿದೆ.

ತೆಲುಗು ವೈಜ್ಞಾನಿಕ ಕಾದಂಬರಿ ಆಧಾರಿತ ಮಹಾಕಾವ್ಯ 'ಕಲ್ಕಿ 2898 ಎಡಿ' ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಪಡೆಯಲಿದೆ; ಹಾಗೆಯೇ, ಅರುಣ್ ಮಥೇಶ್ವರನ್ ನಿರ್ದೇಶನದಲ್ಲಿ ಹಾಗೂ ಧನುಷ್ ಅಭಿನಯದಲ್ಲಿ ಮೂಡಿಬಂದ ತಮಿಳು ಚಿತ್ರ 'ಕ್ಯಾಪ್ಟನ್ ಮಿಲ್ಲರ್', 'ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು' ಉತ್ತೇಜಿಸುವ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com