ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋ ಮುನ್ನ ಇರಲಿ ಎಚ್ಚರ: ಇನ್ಮುಂದೆ ತಪ್ಪಿಗೆ ಬೀಳುತ್ತೆ ಮೈನಸ್ ಪಾಯಿಂಟ್, ರದ್ದಾಗುತ್ತೆ ಲೈಸೆನ್ಸ್!

ವಾಹನ ಸವಾರರಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ, ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಗ್ರೇಡೆಡ್ ಪಾಯಿಂಟ್ ಸಿಸ್ಟಮ್ ಅಥವಾ ಮೈನಸ್ ಪಾಯಿಂಟ್ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಆ ಕುರಿತ ವರದಿ ಇಲ್ಲಿದೆ:
New Graded Point System for Traffic Violations: Repeat Offenders Risk Driving Licence Cancellation
ಇನ್ಮುಂದೆ ತಪ್ಪಿಗೆ ಬೀಳುತ್ತೆ ಮೈನಸ್ ಪಾಯಿಂಟ್, ರದ್ದಾಗುತ್ತೆ ಲೈಸೆನ್ಸ್!Online Desk
Updated on

ನವದೆಹಲಿ: ಅಯ್ಯೋ, ಇಲ್ಲಿಂದ ಇಲ್ಲಿಗೆ ತಾನೇ ಯಾರ್ ಹೆಲ್ಮೆಟ್ / ಸೀಟ್‌ಬೆಲ್ಟ್ ಹಾಕೋತಾರೆ, ಸಿಸಿ ಕ್ಯಾಮೆರಾ ಮೂಲಕ ಫೈನ್ ಅಲ್ಲವಾ ಬಿದರೆ ಬಿಳಲಿ ಟ್ರಾಫಿಕ್ ಪೊಲೀಸರು ಇಲ್ಲದ ಕಡೆ ಹೋದರೆ ಆಯ್ತು ಅಂತ ಅನ್ಕೊಂಡು ಹೋದರೆ ಇನ್ನಮೇಲೆ ನಿಮ್ ಕಥೆ ಅಷ್ಟೇ! ಯಾಕಂದ್ರೆ, ಕೇಂದ್ರ ಸರ್ಕಾರ, ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಗ್ರೇಡೆಡ್ ಪಾಯಿಂಟ್ ಸಿಸ್ಟಮ್ ಅಥವಾ ಮೈನಸ್ ಪಾಯಿಂಟ್ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಆ ಕುರಿತ ವರದಿ ಇಲ್ಲಿದೆ:

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ದೇಶದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಯಲು 'ಶ್ರೇಣೀಕೃತ ಪಾಯಿಂಟ್ ವ್ಯವಸ್ಥೆ' (Graded Points System / Negative Points System) ಎಂಬ ವಿನೂತನ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ. ರಸ್ತೆ ಶಿಸ್ತು ಕಾಪಾಡಲು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು, ಯುಕೆ, ಜರ್ಮನಿ ಮತ್ತು ಆಸ್ಟ್ರೇಲಿಯಾದಂತಹ ಅಭಿವೃದ್ಧಿ ಹೊಂದಿದ ದೇಶಗಳ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಭಾರತದಲ್ಲೂ ತರಲಾಗುತ್ತಿದೆ.

ಏನಿದು 'ಪಾಯಿಂಟ್ ಸಿಸ್ಟಮ್'? ಇದು ಹೇಗೆ ಕೆಲಸ ಮಾಡುತ್ತದೆ?

ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಶ್ರೇಣೀಕೃತ ಪಾಯಿಂಟ್ ವ್ಯವಸ್ಥೆ ಎಂಬ ಹೊಸ ನಿಯಮದಡಿ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣಪತ್ರ ಎರಡಕ್ಕೂ ಪಾಯಿಂಟ್‌ಗಳ ವ್ಯವಸ್ಥೆಯನ್ನು ಜೋಡಿಸಲಾಗುತ್ತದೆ. ಇದರ ಅನ್ವಯ, ನೀವು ಪ್ರತಿ ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದಾಗ (ಉದಾಹರಣೆಗೆ: ಸಿಗ್ನಲ್ ಜಂಪ್, ಅತಿ ವೇಗ, ಹೆಲ್ಮೆಟ್/ಸೀಟ್‌ಬೆಲ್ಟ್ ಇಲ್ಲದಿರುವುದು, ಮೊಬೈಲ್ ಬಳಕೆ), ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನದ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ನಿಂದ ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಈ ರೀತಿ ಕಡಿತವಾಗುತ್ತಾ ಹೋಗಿ ನಿಯಮಿತ ಮಿತಿಯನ್ನು (ಪ್ರಸ್ತಾವಿತ 12 ಪಾಯಿಂಟ್‌ಗಳು) ದಾಟಿದರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗುತ್ತದೆ. ಆದರೆ, ಪದೇ ಪದೇ ಇದೇ ತಪ್ಪುಗಳನ್ನು ಮುಂದುವರಿಸಿದರೆ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ.

ಏತನ್ಮಧ್ಯೆ, ಯಾರು ಯಾವುದೇ ತಪ್ಪು ಮಾಡದೆ ಉತ್ತಮವಾಗಿ ವಾಹನ ಚಾಲನೆ ಮಾಡುತ್ತಾರೋ ಅವರಿಗೆ 'ಮೆರಿಟ್ ಪಾಯಿಂಟ್ಸ್' (ಒಳ್ಳೆಯ ಪಾಯಿಂಟ್ಸ್) ಸಿಗಲಿವೆ. ಇಂತಹ ಸವಾರರಿಗೆ ವಾಹನ ವಿಮೆ ಪ್ರೀಮಿಯಂನಲ್ಲಿ ರಿಯಾಯಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ನಿಯಮ ಮೀರುವವರಿಗೆ ಭಾರೀ ದಂಡ ಹಾಗೂ ಶಿಕ್ಷೆ ಕಾಯಂ ಆಗಿರುತ್ತದೆ.

New Graded Point System for Traffic Violations: Repeat Offenders Risk Driving Licence Cancellation
Video: ಥಾರ್, ಫಾರ್ಚೂನರ್ ಮಾಲೀಕರಿಗೆ ರಸ್ತೆ ಸುರಕ್ಷತೆ ಪ್ರತಿಜ್ಞೆ ಮಾಡಿಸಿದ ದಮನ್ ಕಲೆಕ್ಟರ್! ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯೆ

ಮುಂದುವರೆದು, ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಬ್ಬ ಚಾಲಕನಿಗೆ 5 ಅಥವಾ ಅದಕ್ಕಿಂತ ಹೆಚ್ಚು ಇ-ಚಲನ್ ಅಥವಾ ಟ್ರಾಫಿಕ್ ಫೈನ್ ಬಿದ್ದರೆ, ಅವರ ಲೈಸೆನ್ಸ್ ತಕ್ಷಣವೇ ರದ್ದಾಗಬಹುದು. ಜೊತೆಗೆ, ಸಂಚಾರ ನಿಯಮ ಉಲ್ಲಂಘನೆಯ ಚಲನ್ ಹಣವನ್ನು 45 ದಿನಗಳ ಒಳಗಾಗಿ ಪಾವತಿಸದಿದ್ದರೆ ನಿಮ್ಮ ವಾಹನವನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲಾಗುತ್ತದೆ. ಆ ನಂತರ ನೀವು ವಾಹನ ಮಾರಾಟ ಮಾಡಲು ಅಥವಾ ಇನ್ಶೂರೆನ್ಸ್ ನವೀಕರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ,  ಈ ಹಿಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ಬ್ಲಾಕ್ ಮಾರ್ಕ್ ಹೊಂದಿರುವವರು ಲೈಸೆನ್ಸ್ ನವೀಕರಿಸಬೇಕಾದರೆ ಕಡ್ಡಾಯವಾಗಿ ಮತ್ತೊಮ್ಮೆ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಬೇಕಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com