Rapido ಬೈಕ್‌ಗೆ RTC ಬಸ್‌ ಡಿಕ್ಕಿ: 26 ವರ್ಷದ ಯುವತಿ ಸಾವು, ಇಬ್ಬರಿಗೆ ಗಾಯ; CCTV ದೃಶ್ಯ ವೈರಲ್‌

ತೆಲಂಗಾಣ ರಾಜಧಾನಿ ಹೈದರಾಬಾದ್ ನ ಶ್ರೀನಗರ ಕಾಲನಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.
Woman Dies after RTC bus hits Rapido bike in Hyderabad
ಬೈಕ್ ಟ್ಯಾಕ್ಸಿಗೆ ಆರ್ ಟಿಸಿ ಬಸ್ ಢಿಕ್ಕಿ
Updated on

ಹೈದರಾಬಾದ್: ಹೈದರಾಬಾದ್ ನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಟ್ಯಾಕ್ಸಿಯಲ್ಲಿ ಹೊರಟಿದ್ದ ಯುವತಿಗೆ ಆರ್ ಟಿಸಿ ಬಸ್ ಢಿಕ್ಕಿಯಾದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತೆಲಂಗಾಣ ರಾಜಧಾನಿ ಹೈದರಾಬಾದ್ ನ ಶ್ರೀನಗರ ಕಾಲನಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಟಿಜಿಎಸ್‌ಆರ್‌ಟಿಸಿ ಬಸ್‌ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಯುವತಿ ಮೃತಪಟ್ಟಿದ್ದು, ಬೈಕ್‌ ಸವಾರ ಹಾಗೂ ಸ್ಕೂಟರ್‌ ಸವಾರ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಮೃತ ಯುವತಿಯನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಹೇಮಾ ದುರ್ಗಾ ಎಂದು ಗುರುತಿಸಲಾಗಿದೆ.

Woman Dies after RTC bus hits Rapido bike in Hyderabad
ಸರ್ಕಾರಿ ಸರ್ಕ್ಯೂಟ್‌ ಹೌಸ್‌ನಲ್ಲಿ 'ನೀಲಿ ಚಿತ್ರನಟಿ' ವಾಸ; ರೂರ್ಕೆಲಾದಲ್ಲಿ ಸಂಚಲನ, ಪೊಲೀಸ್ ತನಿಖೆ

ಅವರು ಬಂಜಾರಾ ಹಿಲ್ಸ್‌ನ ಕಾರ್‌ ಶೋರೂಂನಲ್ಲಿ ಗ್ರಾಹಕ ಸಂಬಂಧ ನಿರ್ವಾಹಕಿಯಾಗಿ (ಕಸ್ಟಮರ್‌ ರಿಲೇಶನ್‌ಶಿಪ್‌ ಎಕ್ಸಿಕ್ಯೂಟಿವ್‌) ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಹೇಮಾ ದುರ್ಗಾ ರಾಪಿಡೋ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ್ದರು. ಶ್ರೀನಗರ ಕಾಲನಿ ಮಾರ್ಗದಲ್ಲಿ ವ್ಯಾಲ್ಯೂ ಝೋನ್‌ ಸ್ಟೋರ್ಸ್‌ನ ಹಿಂಭಾಗದ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಕಿರಿದಾಗಿತ್ತು. ಈ ವೇಳೆ ಟಿಜಿಎಸ್‌ಆರ್‌ಟಿಸಿ ಬಸ್‌ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಹೇಮಾ ದುರ್ಗಾ ಮೃತಪಟ್ಟಿದ್ದು, ಬೈಕ್‌ ಹಾಗೂ ಸ್ಕೂಟರ್‌ ಸವಾರರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com