ದೆಹಲಿ ವಿವಿ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಸ್ ಕಂಡಕ್ಟರ್ ಮಗ; ಗೆಲುವಿಗೆ ಕಾರಣ ಬಿಚ್ಚಿಟ್ಟ ದೀಪಾಂಶು!

NSUIನ ಮಾಜಿ ಸದಸ್ಯರಾದ ದೀಪಾಂಶು ಶೋಕೀನ್ ಅವರು ತಮ್ಮ ಪ್ರತಿಸ್ಪರ್ಧಿಗಳನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಇತಿಹಾಸದಲ್ಲೇ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
Deepanshu Shokeen, Bus Conductor's Son, Makes History In Delhi University Polls
ದೀಪಾಂಶು
Updated on

ನವದೆಹಲಿ: 20 ಸುತ್ತುಗಳ ಮತ ಎಣಿಕೆಯ ನಂತರ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ(DUSU) ಚುನಾವಣೆಯ ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಗಿದ್ದು, ದೀಪಾಂಶು ಶೋಕೀನ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಉಪಾಧ್ಯಕ್ಷ ಸ್ಥಾನವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

NSUIನ ಮಾಜಿ ಸದಸ್ಯರಾದ ದೀಪಾಂಶು ಶೋಕೀನ್ ಅವರು ತಮ್ಮ ಪ್ರತಿಸ್ಪರ್ಧಿಗಳನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಇತಿಹಾಸದಲ್ಲೇ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ದೀಪಾಂಶು ಶೋಕೀನ್ ಅವರು 30,615 ಮತಗಳೊಂದಿಗೆ ಉಪಾಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಪ್ರತಿಸ್ಪರ್ಧಿಗಳಾದ ABVPಯ ಇಶು ಮೌರ್ಯ 16,910 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, NSUIನ ವಿರ್ ಛತ್ರತ್ 4,313 ಮತಗಳನ್ನು ಪಡೆದಿದ್ದಾರೆ.

Deepanshu Shokeen, Bus Conductor's Son, Makes History In Delhi University Polls
ದೆಹಲಿ ವಿವಿ ಚುನಾವಣೆ ಫಲಿತಾಂಶ ಪ್ರಕಟ: 4 ಹುದ್ದೆಗಳ ಪೈಕಿ 3ರಲ್ಲಿ ABVP ಭರ್ಜರಿ ಜಯ; ಉಪಾಧ್ಯಕ್ಷ ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದ ಪಕ್ಷೇತರ!

ಗೆಲುವಿನ ಬಳಿಕ ಎನ್‌ಡಿಟಿವಿ (NDTV) ಜೊತೆ ಮಾತನಾಡಿದ ಶೋಕೀನ್, ವಿವಿಧ ಕಾಲೇಜುಗಳಿಂದ ತಮಗೆ ಸಿಕ್ಕ ಬೆಂಬಲವನ್ನು ಗಮನಿಸಿದಾಗ ಈ ಫಲಿತಾಂಶ ನಿರೀಕ್ಷಿಸಿದ್ದೆ ಎಂದು ಹೇಳಿದ್ದಾರೆ.

ರಾಜಕೀಯವಾಗಿ ಸಕ್ರಿಯವಾಗಿರುವವರು, ತಟಸ್ಥ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ರಾಜಕೀಯದಲ್ಲಿ ಭಾಗಿಯಾಗದವರು ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಂದ ತಮಗೆ ಬೆಂಬಲ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

"ನಾನು ಇಂತಹ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೆ. ಎಲ್ಲಾ ಕಾಲೇಜುಗಳಲ್ಲಿ ನನಗೆ ಉತ್ತಮ ಬೆಂಬಲ ಸಿಗುತ್ತಿತ್ತು. ಮುಖ್ಯವಾಗಿ, ಸಾಮಾನ್ಯ ವಿದ್ಯಾರ್ಥಿಗಳು ನನ್ನೊಂದಿಗಿದ್ದರು. ಕೇವಲ ರಾಜಕೀಯದಲ್ಲಿ ತೊಡಗಿಸಿಕೊಂಡವರಷ್ಟೇ ಅಲ್ಲ, ರಾಜಕೀಯೇತರ ಅಥವಾ ತಟಸ್ಥ ವಿದ್ಯಾರ್ಥಿಗಳೂ ನನಗೆ ಬೆಂಬಲ ನೀಡಿದರು. ರಾಜಕೀಯ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದ ತಟಸ್ಥ ವಿದ್ಯಾರ್ಥಿಗಳನ್ನು ತಲುಪುವುದು ಬಹಳ ಕಷ್ಟದ ಕೆಲಸವಾಗಿತ್ತು. ಆದರೆ ಅವರು ನನ್ನೊಂದಿಗೆ ಇರುವುದು ಮತ್ತು 'ವಾಯ್ಸ್ ಆಫ್ ಡೆಲ್ಲಿ ವಿವಿ' (Voice of DUSU) ಅನ್ನು ಬೆಂಬಲಿಸುತ್ತಿರುವುದು ನನಗೆ ಸಂತೋಷ ತಂದಿದೆ," ಎಂದಿದ್ದಾರೆ.

ಶೋಕೀನ್ ಅವರ ತಂದೆ ವೃತ್ತಿಯಲ್ಲಿ ಬಸ್ ಕಂಡಕ್ಟರ್ ಆಗಿದ್ದು, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.

ಭಗತ್ ಸಿಂಗ್ ಕಾಲೇಜಿನ ಪದವೀಧರರಾದ ಶೋಕೀನ್, ತಮ್ಮ ತಂದೆ ತಮಗೆ ಯುಪಿಎಸ್‌ಸಿ(UPSC) ಪರೀಕ್ಷೆಗಳಿಗೆ ತಯಾರಿ ನಡೆಸಬೇಕೆಂದು ಬಯಸಿದ್ದರೂ, ಆದರೆ ಅವರು ವಿದ್ಯಾರ್ಥಿ ರಾಜಕೀಯಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿದ್ದರು.

ದೆಹಲಿಯ ಸತ್ಯ ನಿಕೇತನದಲ್ಲಿ ಪಿಜಿ (PG) ವಸತಿ ಕಟ್ಟಡ ಕುಸಿದುಬಿದ್ದ ಘಟನೆಯ ನಂತರ ಈ ವಿದ್ಯಾರ್ಥಿ ನಾಯಕ, ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com