

ಮಧುರೈ: ತಮಿಳುನಾಡಿನ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಪೆರಿಯಾರ್ ರಾಮಸ್ವಾಮಿ ಅವರ ಸಾಮಾಜಿಕ ಸುಧಾರಣೆಗಳು ಮತ್ತು ಮೂಲ ಸಿದ್ಧಾಂತಗಳ ನಡುವೆ ವ್ಯತ್ಯಾಸವಿದೆ ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಪೆರಿಯಾರ್ ಅವರು ಮಹಿಳಾ ಸಬಲೀಕರಣ ಹಾಗೂ ಜಾತಿ ಪದ್ಧತಿ ನಿರ್ಮೂಲನೆಗೆ ನೀಡಿದ ಕೂಡುಗೆಯನ್ನು ಶ್ಲಾಘಿಸಿದ ಅಣ್ಣಾಮಲೈ, ನಾಸ್ತಿಕ ನಿಲುವು ಮತ್ತು ಬ್ರಾಹ್ಮಣ ವಿರೋಧಿ ಸಿದ್ದಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ವೈಗೈ ನದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸ್ವಯಂ ಸೇವಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಸ್ವಾತಂತ್ರ್ಯದ ಪರ ಅವರ ಧ್ವನಿ ಎತ್ತಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ಜಾತಿ ಪದ್ದತಿ ನಿರ್ಮೂಲನೆಗೂ ಅವರು ಶ್ರಮಿಸಿದ್ದರು ಎಂದರು.
ಅದೇ ರೀತಿ ಅವರ ನಾಸ್ತಿಕ ನಿಲುವು ಮತ್ತು ಬ್ರಾಹ್ಮಣ ವಿರೋಧಿ ಸಿದ್ಧಾಂತವನ್ನು ಖಂಡಿತಾ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.