ರಾಯಲಸೀಮೆ ವಿಸ್ಮಯ; ನೀರಿಲ್ಲದೇ ಗಣಪನ ವಿಸರ್ಜನೆ, ನದಿ ತಟದಲ್ಲಿ ಮೂರ್ತಿಗಳು ಅನಾಥ; ಕೊನೆಗೂ ಸುರಿದ ಮಳೆರಾಯ, Video

ಹತ್ತಾರು ಗಣೇಶ ಮೂರ್ತಿಗಳನ್ನು ನದಿ ಭಾಗದ ಕೆರೆ-ಹಳ್ಳಕೊಳ್ಳಗಳಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Ganesh Idols Left on Dry Riverbanks in Rayalaseema as Rains Finally Arrive
ರಾಯಲಸೀಮೆಯಲ್ಲಿ ಮಳೆ
Updated on

ಕಡಪ: ಮಳೆ ಅಭಾವ ಗಣಪನಿಗೂ ತಟ್ಟಿದ್ದು, ಆಂಧ್ರ ಪ್ರದೇಶದ ರಾಯಲಸೀಮೆಯಲ್ಲಿ ತೀವ್ರ ನೀರಿನ ಕೊರತೆಯಿಂದಾಗಿ ಗಣೇಶ ಮೂರ್ತಿಗಳ ವಿಸರ್ಜನೆಗೂ ಸಮಸ್ಯೆ ಎದುರಾಗಿದೆ.

ಒಣಗಿದ ನದಿ ಪಾತ್ರಗಳು ಹಾಗೂ ಖಾಲಿಯಾಗಿದ್ದ ಕೆರೆಗಳ ತಳಭಾಗಗಳಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗದೆ ಭಕ್ತರು ಅಲ್ಲಿಯೇ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹತ್ತಾರು ಗಣೇಶ ಮೂರ್ತಿಗಳನ್ನು ನದಿ ಭಾಗದ ಕೆರೆ-ಹಳ್ಳಕೊಳ್ಳಗಳಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಎಲ್‌ನಿನೊ ಪರಿಣಾಮದಿಂದ ರಾಯಲಸೀಮೆಯಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರಗೊಂಡಿದೆ, ಮಳೆ ಕೊರತೆಯಿಂದ ನದಿಗಳು ಹಾಗೂ ಜಲಾಶಯಗಳು ಬತ್ತಿಹೋಗಿದ್ದರಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಗತ್ಯ ನೀರು ಲಭ್ಯವಾಗಿರಲಿಲ್ಲ.

Ganesh Idols Left on Dry Riverbanks in Rayalaseema as Rains Finally Arrive
ಕೊನೆಗೂ ಸುರಿದ ಮಳೆರಾಯ, ನಿಟ್ಟಿಸಿರುವ ಬಿಟ್ಟ ರಾಯಲಸೀಮೆ; 43.5 ಮಿ.ಮೀ ಮಳೆ! ಹವಾಮಾನ ಇಲಾಖೆ ಹೇಳಿದ್ದೇನು?

ನದಿ ತಟದಲ್ಲಿ ಅನಾಥವಾದ ಗಣೇಶ ಮೂರ್ತಿಗಳು

ಒಣಗಿದ ನದಿಪಾತ್ರಗಳು ಮತ್ತು ಖಾಲಿ ಕೆರೆಗಳ ಒಡಲಲ್ಲಿ ವಿಸರ್ಜನೆಯಾಗದೆ ಉಳಿದಿರುವ ಗಣೇಶನ ವಿಗ್ರಹಗಳ ಈ ದೃಶ್ಯವು, ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಎದುರಾಗಿರುವ ತೀವ್ರ ಮಳೆ ಅಭಾವ ಮತ್ತು ಭೀಕರ ಬರಗಾಲದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಸಾಂಪ್ರದಾಯಿಕ ಗಣೇಶ ವಿಸರ್ಜನೆಗಾಗಿ ತೆರಳಿದ ಭಕ್ತರಿಗೆ ನೀರಿಲ್ಲದೆ ಒಣಗಿ ಬಿರುಕು ಬಿಟ್ಟಿರುವ ನದಿ ಮತ್ತು ಕೆರೆಗಳು ಎದುರಾಗಿದ್ದು, ವಿಗ್ರಹಗಳನ್ನು ನೀರಿಲ್ಲದ ಒಣ ಪಾತ್ರಗಳಲ್ಲೇ ಇಟ್ಟು ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಬತ್ತಿದ ಚಿತ್ರಾವತಿ ನದಿ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಲೂರು, ಯಲ್ಲನೂರು ಮತ್ತು ಪುತ್ತಲಪಟ್ಟು ಮುಂತಾದ ಮಂಡಲಗಳಲ್ಲಿ ಹರಿಯುವ ಚಿತ್ರಾವತಿ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಈ ಋತುಮಾನದ ನದಿ ಪಾತ್ರದಲ್ಲಿ ಸಾಲಾಗಿ ಇಡಲಾದ ಬಣ್ಣ ಬಣ್ಣದ ಗಣೇಶ ವಿಗ್ರಹಗಳ ದೃಶ್ಯಗಳು ಅನಾಥವಾಗಿವೆ.

ಇವುಗಳ ವಿಜಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೀರಿನ ಅಭಾವದ ಭೀಕರತೆಯನ್ನು ಸಾರುತ್ತಿದೆ. ಮಾತ್ರವಲ್ಲದೇ ಹಂದ್ರಿ-ನೀವಾ ಸುಜಲಾ ಸ್ರವಂತಿ (HLC) ನಾಲೆಯಂತಹ ನೀರಾವರಿ ಕಾಲುವೆಗಳು ಮತ್ತು ಸ್ಥಳೀಯ ಹಳ್ಳಿಗಳ ಕೆರೆಗಳು ಕೂಡ ಸಂಪೂರ್ಣ ಖಾಲಿಯಾಗಿದ್ದು, ಜನರು ಅನಿವಾರ್ಯವಾಗಿ ನೀರಿಲ್ಲದ ಜಾಗಗಳಲ್ಲೇ ಧಾರ್ಮಿಕ ಆಚರಣೆಗಳನ್ನು ಮುಗಿಸಿದ್ದಾರೆ.

ವಿಸ್ಮಯವೋ ಅಥನಾ ನಂಬಿಕೆಯೋ?

ಸ್ಥಳೀಯರಲ್ಲಿ ಒಂದು ನಂಬಿಕೆಯೂ ಇದೆ. ಮಳೆ ಇಲ್ಲದ ಕಾರಣ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗದೆ ಹಾಗೆಯೇ ಬಿಟ್ಟುಬಿಟ್ಟರೆ, ಬಳಿಕ ಮಳೆ ಮರಳಿ ಬರುತ್ತದೆ ಎಂಬುದು ಆ ನಂಬಿಕೆ.

ಅಚ್ಚರಿ ಎಂದರೆ ಕೆಲವೇ ಗಂಟೆಗಳ ಬಳಿಕ ರಾಯಲಸೀಮೆಯ ಹಲವು ಭಾಗಗಳಲ್ಲಿ ಮಳೆ ಸುರಿಯಲು ಆರಂಭವಾಗಿದ್ದು, ಕೆರೆ-ಕಟ್ಟೆಗಳಲ್ಲೂ ನೀರು ಹರಿದು ಬರತೊಡಗಿದೆ. ಇದರಿಂದ ಸ್ಥಳೀಯರಲ್ಲಿ ಅಚ್ಚರಿ ಮೂಡಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ.

ಇದು ಪ್ರಕೃತಿಯ ಸಹಜ ವಿದ್ಯಮಾನವೋ, ಕಾಕತಾಳೀಯವೋ, ಪವಾಡವೋ ಅಥವಾ ದೈವಿಕ ಹಸ್ತಕ್ಷೇಪವೋ ಎಂಬುದು ಚರ್ಚೆಯ ವಿಷಯವಾಗಿದ್ದರೂ, ರಾಯಲಸೀಮೆಯ ಜನರಿಗೆ ಮಾತ್ರ ಈ ಅಲ್ಪ ಮಳೆ ಬರದ ಪರಿಸ್ಥಿತಿಯಲ್ಲಿ ದೊಡ್ಡ ನೆಮ್ಮದಿ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com