'ಮೋದಿ ಸ್ನೇಹಿತೆ ಅಲ್ವಾ, ಬುರ್ಖಾ ಎಂದರೆ ದ್ವೇಷ; ಅವರಿಗೆ ಬ್ರಾ, ಬಿಕಿನಿ ಇಷ್ಟವಿರಬಹುದು': ಮೆಲೋನಿ ವಿರುದ್ಧ ನಾಲಿಗೆ ಹರಿಬಿಟ್ಟ AIMIM ನಾಯಕ!

"ಮಹಿಳೆಯರು ಹೊರಗೆ, ಸಾರ್ವಜನಿಕವಾಗಿ ಬ್ರಾ ಮತ್ತು ಪ್ಯಾಂಟಿ ಧರಿಸುವುದರಲ್ಲಿ ಹಾಗೂ ಬಿಕಿನಿ ಧರಿಸುವುದರಲ್ಲಿ ಮೆಲೋನಿ ಅವರಿಗೆ ಹೆಚ್ಚು ಆಸಕ್ತಿಯಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Waris Pathan targets Italian Prime Minister Giorgia Meloni over burqa ban pitch, says she prefers if ‘women wear bras, panties outside’
ಮೆಲೋನಿ - ವಾರಿಸ್ ಪಠಾಣ್
Updated on

ನವದೆಹಲಿ: ಇಟಲಿ ಶಾಲೆಗಳಲ್ಲಿ ಬುರ್ಖಾ ಮತ್ತು ನಿಕಾಬ್‌ ನಿಷೇಧಿಸಲು ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಎಐಎಂಐಎಂ(AIMIM) ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್, ಮಹಿಳೆಯರು ಸಾರ್ವಜನಿಕವಾಗಿ ಬ್ರಾ, ಪ್ಯಾಂಟಿ ಮತ್ತು ಬಿಕಿನಿಗಳನ್ನು ಧರಿಸುವುದರಲ್ಲೇ ಅವರಿಗೆ ಹೆಚ್ಚು ಆಸಕ್ತಿಯಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಸ್ಲಿಮರ ವಿಷಯದಲ್ಲಿ ಭಾರತ ಸರ್ಕಾರ ಅನುಸರಿಸುವ ಧೋರಣೆಯನ್ನೇ ಇಟಲಿಯ ಪ್ರಧಾನಿಯೂ ಅಳವಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಪಠಾಣ್, "ಅವರು ಪ್ರಧಾನಿ ಮೋದಿಯವರ ಸ್ನೇಹಿತೆ ಅಲ್ವಾ. ಹೀಗಾಗಿ ಅವರೂ ಮೋದಿಯಂತೆಯೇ ಆಗಿದ್ದಾರೆ" ಎಂದು ಟೀಕಿಸಿದ್ದಾರೆ.

'ಮೆಲೋನಿ ಅವರಿಗೆ "ಮಹಿಳೆಯರು ಸಂಪ್ರದಾಯಬದ್ಧವಾಗಿ ಅಥವಾ ಮೈ ಮುಚ್ಚುವಂತೆ ಉಡುಪು ಧರಿಸುವುದು ಇಷ್ಟವಿಲ್ಲ" ಎಂದು ಪಠಾಣ್ ಹೇಳಿದ್ದಾರೆ.

Waris Pathan targets Italian Prime Minister Giorgia Meloni over burqa ban pitch, says she prefers if ‘women wear bras, panties outside’
ಇಟಲಿಯ ಶಾಲೆಗಳಲ್ಲಿ ಬುರ್ಖಾ, ನಿಕಾಬ್‌ ನಿಷೇಧ; ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ: ಇಟಾಲಿ ಪ್ರಧಾನಿ ಮೆಲೋನಿ ಸುಳಿವು

"ಮಹಿಳೆಯರು ಹೊರಗೆ, ಸಾರ್ವಜನಿಕವಾಗಿ ಬ್ರಾ ಮತ್ತು ಪ್ಯಾಂಟಿ ಧರಿಸುವುದರಲ್ಲಿ ಹಾಗೂ ಬಿಕಿನಿ ಧರಿಸುವುದರಲ್ಲಿ ಮೆಲೋನಿ ಅವರಿಗೆ ಹೆಚ್ಚು ಆಸಕ್ತಿಯಿದೆ," ಎಂದು ಹೇಳಿದ್ದಾರೆ.

ಮುಖವನ್ನು ಮುಚ್ಚಿಕೊಳ್ಳುವ ಉಡುಪುಗಳ ಮೇಲಿನ ನಿರ್ಬಂಧಗಳ ಪ್ರಸ್ತಾವನೆಯ ಕುರಿತಾಗಿಯೂ ಮೆಲೋನಿ ಟೀಕಿಸಿದ ಪಠಾಣ್, "ಮೆಲೋನಿ ಅವರಿಗೆ ಬುರ್ಖಾ ಮತ್ತು ನಿಕಾಬ್ ಎಂದರೆ ದ್ವೇಷ, ಬಹುಶಃ ಅವರಿಗೆ ಬ್ರಾ ಮತ್ತು ಬಿಕಿನಿ ಇಷ್ಟವಿರಬಹುದು. ಮಹಿಳೆಯರು ಸಾರ್ವಜನಿಕವಾಗಿ ಬ್ರಾ, ಪ್ಯಾಂಟಿ ಮತ್ತು ಬಿಕಿನಿ ಧರಿಸುವುದು ಅವರಿಗೆ ಇಷ್ಟ. ಮಹಿಳೆಯೊಬ್ಬರು ಮೈ ಮುಚ್ಚಿಕೊಂಡು ಗೌರವಾನ್ವಿತವಾಗಿ ಉಡುಪು ಧರಿಸುವುದು ಅವರಿಗೆ ಇಷ್ಟವಿಲ್ಲ; ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ತಮ್ಮ ಬ್ರದರ್ಸ್ ಆಫ್ ಇಟಲಿ ಪಕ್ಷದ ಯುವ ಘಟಕದ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ್ದ ಜಾರ್ಜಿಯಾ ಮೆಲೋನಿ, ಶಾಲೆಗಳಲ್ಲಿ ಬುರ್ಖಾ ಮತ್ತು ನಿಕಾಬ್ ಸೇರಿದಂತೆ ಮುಖವನ್ನು ಮುಚ್ಚುವ ಪರದೆಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ನಮ್ಮ ಸರ್ಕಾರ ಸಚಿವ ಸಂಪುಟದ ಮುಂದೆ ಮಂಡಿಸಲಿದೆ ಎಂದು ಹೇಳಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com