ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ; ಕರ್ನಾಟಕಕ್ಕೆ ಹೊಸ ಉಸ್ತುವಾರಿ ನೇಮಕ; ರಾಧಾಮೋಹನ್‌ ದಾಸ್‌ಗೆ ಕೊಕ್!

ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿದ್ದು, ರಾಧಮೋಹನ್ ದಾಸ್ ಅವರಿಗೆ ಕೊಕ್ ನೀಡಿ, ಹರೀಶ್ ದ್ವಿವೇದಿ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
BJP reshuffles state in-charges, gives Karanataka charge to Harish Dwivedi, Haryana to Smriti Irani
ಹರೀಶ್ ದ್ವಿವೇದಿ
Updated on

ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) ಬುಧವಾರ ತನ್ನ ರಾಜ್ಯ ಸಂಘಟನಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದು, ಕರ್ನಾಟಕ ಸೇರಿದಂತೆ ಎಲ್ಲಾ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಉಸ್ತುವಾರಿಗಳು ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿದೆ.

ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿದ್ದು, ರಾಧಮೋಹನ್ ದಾಸ್ ಅವರಿಗೆ ಕೊಕ್ ನೀಡಿ, ಹರೀಶ್ ದ್ವಿವೇದಿ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ಹಾಗೂ ಸಹ ಉಸ್ತುವಾರಿಯಾಗಿ ಡಾ.ಕಸಂ ವೆಂಕಟೇಶ್ವರಲು ಅವರನ್ನು ನೇಮಕ ಮಾಡಲಾಗಿದೆ. ಹರೀಶ್ ದ್ವಿವೇದಿ ಉತ್ತರ ಪ್ರದೇಶ ಮೂಲದ ಬಿಜೆಪಿ ನಾಯಕರಾಗಿದ್ದರೆ, ಕಸಂ ವೆಂಕಟೇಶ್ವರಲು ತೆಲಂಗಾಣ ಮೂಲದ ಬಿಜೆಪಿ ನಾಯಕ.

BJP reshuffles state in-charges, gives Karanataka charge to Harish Dwivedi, Haryana to Smriti Irani
ಸರ್ಕಾರದ ಖಜಾನೆ ಖಾಲಿ: ಚೊಂಬು, ಚಿಪ್ಪು ಹಿಡಿದು ಸರ್ಕಾರದ ವಿರುದ್ದ ಬಿಜೆಪಿ-ಜೆಡಿಎಸ್ ಪ್ರತಿಭಟನೆ! Video

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ ಚುನಾವಣೆ ಗೆಲ್ಲಲು ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಅವರಿಗೆ ಹರಿಯಾಣ ಮತ್ತು ಛತ್ತೀಸ್‌ಗಢದ ಉಸ್ತುವಾರಿ ನೀಡಲಾಗಿದ್ದು, ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್ ಅವರನ್ನು ತಮಿಳುನಾಡು ಮತ್ತು ಉತ್ತರಾಖಂಡದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

2027ರಲ್ಲಿ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷವು ತನ್ನ ಸಂಘಟನಾ ರಚನೆಯನ್ನು ಪುನರ್ವ್ಯವಸ್ಥಿತಗೊಳಿಸುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಈ ನೇಮಕಾತಿಗಳನ್ನು ಘೋಷಿಸಿದ್ದಾರೆ.

ಕೇರಳ ಬಿಜೆಪಿ ಉಸ್ತುವಾರಿಯನ್ನು ಬದಲಾಯಿಸಲಾಗಿದ್ದು, ಪ್ರೊ ಎಂ ನಾಗರಾಜ್‌ ಅವರು ಕೇರಳ ಉಸ್ತುವಾರಿಯಾಗಿ ನೇಮಕಗೊಂಡರೆ, ಸಹ ಉಸ್ತುವಾರಿಯಾಗಿ ಎಂ ವೆಂಕಟೇಶನ್‌ ಅವರಿಗೆ ಜವಾಬ್ದಾರಿ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com