ಐಐಟಿ-ಬಿ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಪ್ರೊ.ದೂಳ್ಲ ಸಂಪೂರ್ಣ ನಿರಪರಾಧಿ- ಹಳೆ ವಿದ್ಯಾರ್ಥಿಗಳು

ಎಎನ್‌ಐ (ANI) ಜೊತೆ ಮಾತನಾಡಿದ ಸರಫ್, ಸಾಹಿಲ್ ಅವರ ಪೋಷಕರ ಪರವಾಗಿ ವಾದಿಸುತ್ತಿರುವ ವಕೀಲರಿಗೆ ರಾಜಕೀಯ ನಂಟಿದೆ ಎಂದು ಆರೋಪಿಸಿದರು
Prof. Suryanarayana Doolla
ಪ್ರೊಫೆಸರ್ ಸೂರ್ಯನಾರಾಯಣ ದೂಳ್ಲonline desk
Updated on

ಮುಂಬೈ: ಐಐಟಿ-ಬಾಂಬೆಯ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಶರದ್ ಕುಮಾರ್ ಸರಫ್ ಮತ್ತು ಐಐಟಿ-ಬಾಂಬೆಯ ಹಳೆಯ ವಿದ್ಯಾರ್ಥಿ ದೀಪಕ್ ಬಿರೆವಾರ್ ಅವರು ಬುಧವಾರ ಪ್ರೊಫೆಸರ್ ಸೂರ್ಯನಾರಾಯಣ ದೂಳ್ಲ ಅವರನ್ನು ಸಮರ್ಥಿಸಿದ್ದಾರೆ.

ವಿದ್ಯಾರ್ಥಿ ಸಾಹಿಲ್ ರವೀಂದ್ರ ವಾಕೋಡೆ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಪ್ರೊ.ದೂಳ್ಲ ಅದನ್ನು ತಡೆದಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿ, ಆತ್ಮಹತ್ಯೆಗೆ ಶರಣಾಗಿದ್ದ. ಸಾವಿನ ನಂತರ ಪ್ರೊಫೆಸರ್ ಅವರನ್ನು ಬಂಧಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಹಳೆಯ ವಿದ್ಯಾರ್ಥಿಗಳು ಈ ಬೇಡಿಕೆಗಳನ್ನು ಪ್ರಶ್ನಿಸುವುದಲ್ಲದೆ, ಸಂಸ್ಥೆಯನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಎಎನ್‌ಐ (ANI) ಜೊತೆ ಮಾತನಾಡಿದ ಸರಫ್, ಸಾಹಿಲ್ ಅವರ ಪೋಷಕರ ಪರವಾಗಿ ವಾದಿಸುತ್ತಿರುವ ವಕೀಲರಿಗೆ ರಾಜಕೀಯ ನಂಟಿದೆ ಎಂದು ಆರೋಪಿಸಿದರು ಮತ್ತು ಆ ವಕೀಲರೇ ಈ ಬೆಳವಣಿಗೆಗಳನ್ನು "ಯೋಜಿತವಾಗಿ ನಿರ್ವಹಿಸುತ್ತಿದ್ದಾರೆ" ಎಂದು ಪ್ರತಿಪಾದಿಸಿದರು. ವಕೀಲರೊಬ್ಬರಿಗೆ ರಾಜಕೀಯ ನಂಟಿರುವುದು ತಪ್ಪಲ್ಲವಾದರೂ, ಈ ವಕೀಲರ ಭಾಗವಹಿಸುವಿಕೆಯು ಐಐಟಿ-ಬಾಂಬೆ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯನ್ನು "ಅಸ್ಥಿರಗೊಳಿಸುವ" ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದರು.

"ಇದರ ಹಿಂದೆ ವ್ಯವಸ್ಥಿತವಾದ ಪಿತೂರಿ (ಡೀಪ್ ಸ್ಟೇಟ್) ಕೆಲಸ ಮಾಡುತ್ತಿರುವಂತೆ ತೋರುತ್ತಿದೆ" ಎಂದು ಹೇಳಿದ ಸರಫ್, ಇಂತಹ ಬೆಳವಣಿಗೆಗಳು ಹೊಸದಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳು, ಹಳೆಯ ವಿದ್ಯಾರ್ಥಿಗಳ ಪ್ರತಿಷ್ಠೆ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟರು.

ಇಂತಹ ಘಟನೆಗಳು ಬೋಧಕವರ್ಗದ ಮೇಲೆ ಒತ್ತಡ ಹೇರಿದರೆ, ಅವರು ನಿರುತ್ಸಾಹಗೊಳ್ಳಬಹುದು ಮತ್ತು "ಯಾವುದೇ ಮೋಸಗಾರನನ್ನು ಹಿಡಿಯಲು ಅಥವಾ ಕ್ರಮ ಕೈಗೊಳ್ಳಲು ಭಯಪಡುವ" ಪರಿಸ್ಥಿತಿ ನಿರ್ಮಾಣವಾಗಬಹುದು ಎಂದೂ ಅವರು ಹೇಳಿದರು.

Prof. Suryanarayana Doolla
IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

ಪ್ರೊಫೆಸರ್ ದೂಳ್ಲ ಅವರಿಗೆ ಐಐಟಿ ಫ್ಯಾಕಲ್ಟಿ ಫೋರಂ ನೀಡುತ್ತಿರುವ ಬೆಂಬಲದ ಕುರಿತು ಮಾತನಾಡಿದ ಸರಫ್, ಪ್ರೊಫೆಸರ್ "ಸಂಪೂರ್ಣ ನಿರ್ದೋಷಿ" ಎಂದು ಹೇಳಿದ್ದಲ್ಲದೆ, ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದರು. ದೂಳ್ಲ ಒಬ್ಬ "ನೇರ-ನಿಷ್ಠುರ ಹಾಗೂ ಪ್ರಾಮಾಣಿಕ" ಪ್ರಾಧ್ಯಾಪಕರಾಗಿದ್ದು, ವಿದ್ಯಾರ್ಥಿ ವ್ಯವಹಾರಗಳ ಡೀನ್ (Dean of Student Affairs) ಆಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು ಎಂದು ಅವರು ತಿಳಿಸಿದರು.

ಜಾತಿ ಆಧಾರಿತ ತಾರತಮ್ಯದ ಆರೋಪಗಳನ್ನೂ ಪ್ರಶ್ನಿಸಿದ ಸರಫ್, ವಿದ್ಯಾರ್ಥಿಯ ಜಾತಿಯ ಬಗ್ಗೆ ಈ ಹಿಂದೆ ಯಾವುದೇ ಚರ್ಚೆ ನಡೆದಿರಲಿಲ್ಲ ಮತ್ತು ಆತನ ಸಾವಿನ ಎರಡು ದಿನಗಳ ನಂತರವಷ್ಟೇ ಪೋಷಕರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com