ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು, ಭೂಕುಸಿತದಿಂದ ಸಂತ್ರಸ್ತರಾಗಿರುವ ನಿವಾಸಿಗಳ ಸುರಕ್ಷತೆ ಮತ್ತು ಕ್ಷೇಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
Mud and debris flow down through a residential area following a landslide triggered by continuous rainfall.
ಭೂಕುಸಿತವಾಗಿರುವುದು.
Updated on: 

ಗ್ಯಾಲ್ಶಿಂಗ್ (ಸಿಕ್ಕಿಂ): ಸಿಕ್ಕಿಂನ ಗ್ಯಾಲ್ಶಿಂಗ್ ಜಿಲ್ಲೆಯ ರಿಂಬಿ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದೆ.

ಗುರುವಾರ (ಸೆಪ್ಟೆಂಬರ್ 24) ತಡರಾತ್ರಿ ನಡೆದ ಪ್ರಕೃತಿ ವಿಕೋಪದಲ್ಲಿ ಹಲವಾರು ವಸತಿ ಮನೆಗಳು ಹಾಗೂ ಸರ್ಕಾರಿ ವಸತಿಗೃಹಗಳು (ಕ್ವಾರ್ಟರ್ಸ್) ಸಂಪೂರ್ಣವಾಗಿ ಧ್ವಂಸಗೊಂಡಿವೆ.

ಅದೃಷ್ಟವಶಾತ್, ಘಟನೆಯಲ್ಲಿ ಇದುವರೆಗೆ ಯಾವುದೇ ಜೀವಹಾನಿ ಅಥವಾ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು, ಭೂಕುಸಿತದಿಂದ ಸಂತ್ರಸ್ತರಾಗಿರುವ ನಿವಾಸಿಗಳ ಸುರಕ್ಷತೆ ಮತ್ತು ಕ್ಷೇಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

Mud and debris flow down through a residential area following a landslide triggered by continuous rainfall.
ಜೋರು ಮಳೆ, ಕೈಕೊಟ್ಟ ಹೆಡ್ ಲೈಟ್: ಮೊಬೈಲ್ ಟಾರ್ಚ್ ಬಳಸಿ ಕತ್ತಲು ರಸ್ತೆಯಲ್ಲಿ ಬಸ್ ಚಲಾಯಿಸಿದ KKRTC ಚಾಲಕ: Video Viral

ಸ್ಥಳೀಯ ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿರುವ ಮುಖ್ಯಮಂತ್ರಿಗಳು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ನಿವಾಸಿಗಳ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಭಾರಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಗುಡ್ಡಗಾಡು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ಅಧಿಕಾರಿಗಳು ನೀಡುವ ಮುನ್ನೆಚ್ಚರಿಕೆ ಸೂಚನೆಗಳನ್ನು ಪಾಲಿಸುವಂತೆ ತಮಾಂಗ್ ಮನವಿ ಮಾಡಿದ್ದಾರೆ. ಅಲ್ಲದೆ, ಸಂಕಷ್ಟದಲ್ಲಿರುವವರು ಪರಸ್ಪರ ನೆರವಾಗುವಂತೆ ಅವರು ಕರೆ ನೀಡಿದ್ದಾರೆ.

ರಿಂಬಿಯಲ್ಲಿ ನಿವಾಸಿಗಳ ರಕ್ಷಣೆ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com