ಬಿಜೆಪಿಯಿಂದ ನನಗೆ ಏನೂ ಸಿಕ್ಕಿಲ್ಲ ಎಂದ ಕ್ಯಾಪ್ಟನ್; ಪಕ್ಷ ತೊರೆಯುತ್ತಾರ ಮಾಜಿ ಸಿಎಂ?

2027ರ ಪಂಜಾಬ್ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳಷ್ಟೇ ಬಾಕಿ ಇದೆ. ಇದರ ನಡುವೆಯೇ ಬಿಜೆಪಿಯಲ್ಲಿ ಭಿನ್ನಗಾಳಿ ಬಿಸಿದ್ದು, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
BJP
ಬಿಜೆಪಿOnline Desk
Updated on: 

ನವದೆಹಲಿ: 2027ರ ಪಂಜಾಬ್ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳಷ್ಟೇ ಬಾಕಿ ಇದೆ. ಇದರ ನಡುವೆಯೇ ಬಿಜೆಪಿಯಲ್ಲಿ ಭಿನ್ನಗಾಳಿ ಬಿಸಿದ್ದು, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಅವರು ಪಕ್ಷ ತೊರೆಯುವ ವದಂತಿಗಳು ಪ್ರರಂಭವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ಯಾಪ್ಟನ್, ತಾವು ಪಕ್ಷ ತೊರೆಯುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಮರಿಂದರ್ ಸಿಂಗ್ ಅಸಮಾಧಾನಕ್ಕೆ ಕಾರಣಗಳೇನು?

ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮರಿಂದರ್ ಸಿಂಗ್ ಅವರು, ಕಳೆದ 60 ವರ್ಷಗಳಿಂದ ಪಂಜಾಬ್ ರಾಜಕೀಯದಲ್ಲಿದ್ದೇನೆ. ಪಂಜಾಬ್ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ನನ್ನದಾಗಿದೆ. ಆದರೆ, ಪಂಜಾಬ್ ರಾಜಕೀಯ ಹಾಗೂ ಚುನಾವಣಾ ಕಾರ್ಯತಂತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ನನ್ನೊಂದಿಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ, ನನ್ನ ಅಭಿಪ್ರಾಯವನ್ನೂ ಕೇಳಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸದ್ಯ ಪಂಜಾಬ್‌ನ ಬಿಜೆಪಿ ಉಸ್ತುವಾರಿಗಳನ್ನು ಹೊತ್ತಿರುವ ಕೆಲವು ನಾಯಕರು ರಾಜ್ಯ ರಾಜಕೀಯಕ್ಕೆ ಬಂದು ಇನ್ನೂ ಒಂದು ವರ್ಷವೂ ಆಗಿಲ್ಲ. ಅಂತಹ ನಾಯಕರ ನಿರ್ಧಾರಗಳ ಮುಂದೆ ದಶಕಗಳ ಕಾಲ ರಾಜ್ಯವನ್ನು ಹತ್ತಿರದಿಂದ ನೋಡಿರುವ ತಮ್ಮಂತಹ ಹಿರಿಯ ನಾಯಕರ ಅಭಿಪ್ರಾಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನೂ ಪ್ರಯೋಜನವಾಗಿಲ್ಲ...

ಬಿಜೆಪಿಗೆ ಬಂದು 4 ವರ್ಷಗಳಾಗುತ್ತಾ ಬಂದರೂ ತಾವು ಪಕ್ಷದಿಂದ ವೈಯಕ್ತಿಕವಾಗಿ ಅಥವಾ ರಾಜಕೀಯವಾಗಿ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅವರು ತಮ್ಮ ಆಪ್ತರ ವಲಯದಲ್ಲಿ ಕಳವಳ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

BJP
ಭಾರತದ ಭಜನೆ, ಭಕ್ತಿ ಪರಂಪರೆಗೆ ಅಪಹಾಸ್ಯ: ಜೂನಿಯರ್ ಖರ್ಗೆಯಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ! ಬಿಜೆಪಿ

ಏತನ್ಮಧ್ಯೆ, ಅಮರಿಂದರ್ ಸಿಂಗ್ ಅಸಮಾಧಾನದ ಬೆನ್ನಲ್ಲೇ, ಅವರು ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡಲಾರಂಭಿಸಿದ್ದವು. ಇದಕ್ಕೆ ತಕ್ಷಣವೇ ಸ್ಪಷ್ಟನೆ ನೀಡಿರುವ ಕ್ಯಾಪ್ಟನ್, ನನ್ನ ರಾಜ್ಯದ ಕುರಿತು ನನ್ನ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪಕ್ಷಕ್ಕೆ ತಿಳಿಸುವುದು ನನ್ನ ಕರ್ತವ್ಯ. ಹಾಗೆಂದ ಮಾತ್ರಕ್ಕೆ ನಾನು ಬಿಜೆಪಿ ತೊರೆಯುತ್ತಿದ್ದೇನೆ ಎಂದಲ್ಲ. ಈ ಹಿಂದೆಯೂ ನಾನು ಆಪರೇಷನ್ ಬ್ಲೂ ಸ್ಟಾರ್ ವೇಳೆ ಕಾಂಗ್ರೆಸ್ ತೊರೆದು ಅಕಾಲಿದಳ ಸೇರಿ, ನಂತರ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದೆ. ರಾಜಕೀಯದಲ್ಲಿ ಪಕ್ಷಗಳು ಬದಲಾಗುತ್ತಿರುತ್ತವೆ. ಆದರೆ ಸದ್ಯಕ್ಕೆ ನಾನು ಬಿಜೆಪಿ ಬಿಡುವ ಯಾವುದೇ ಆಲೋಚನೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಅಮರಿಂದರ್ ಸಿಂಗ್ ಅವರ ಹೇಳಿಕೆಯನ್ನು ಟೀಕಿಸಿದ ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ, "ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕೇವಲ ಅಧಿಕಾರಕ್ಕಾಗಿ ಪಕ್ಷ ಬದಲಾಯಿಸುವ ಅವಕಾಶವಾದಿ ರಾಜಕಾರಣಿ. ಜನರೇ ಅವರನ್ನು ತಿರಸ್ಕರಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪಂಜಾಬ್‌ಗೆ ಏನೂ ಮಾಡದ ಅವರು ಈಗ ಬಿಜೆಪಿಯಿಂದ ತಮಗೆ ಏನೂ ಸಿಕ್ಕಿಲ್ಲ ಎಂದು ದೂರುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

BJP
'ಪದ್ಮಭೂಷಣ ಸಣ್ಣ ವಿಷಯ, ಅವರನ್ನು ಪ್ರಧಾನಿಯನ್ನಾಗಿ ಮಾಡಿ': ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿಕೆಗೆ ಕಾಂಗ್ರೆಸ್ ಲೇವಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com