

ರಾಂಚಿ: ಮದ್ಯದಂಗಡಿಗೆ ನುಗ್ಗಿದ ಕೋತಿಯೊಂದು ಕೈಗೆ ಸಿಕ್ಕ ಬಾಟಲಿ ತೆಗೆದುಕೊಂಡು ಕಂಠಪೂರ್ತಿ ಕುಡಿದು ಪ್ರಜ್ಞೆ ತಪ್ಪಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಓರ್ಮಾಂಝಿ ಪ್ರದೇಶದ ವೈನ್ ಶಾಪ್‌ವೊಂದಕ್ಕೆ ಕೋತಿಯೊಂದು ನುಗ್ಗಿ, ಬಾಟಲಿಯಲ್ಲಿದ್ದ ಮದ್ಯವನ್ನು ಕುಡಿದಿದೆ.
ಅಂಗಡಿಯೊಳಗೆ ನುಗ್ಗಿದ ಕೋತಿ, ಅಲ್ಲಿದ್ದ ಮದ್ಯದ ಬಾಟಲಿಯಿಂದ ಮದ್ಯ ಸೇವಿಸಿದೆ. ಬಳಿಕ ಮತ್ತೇರಿದಂತೆ ಕಂಡುಬಂದ ಕೋತಿ ಅಂಗಡಿಯಲ್ಲೇ ಮಲಗಿ ನಿದ್ರೆಗೆ ಜಾರಿದೆ.
ಕೋತಿ ಅಂಗಡಿಯೊಳಗೆ ಇರುವುದನ್ನು ಗಮನಿಸಿದ ಬಳಿಕ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ, ಯಾವುದೇ ಅಪಾಯವಾಗದಂತೆ ಕೋತಿಯನ್ನು ಸುರಕ್ಷಿತವಾಗಿ ರಕ್ಷಿಸಿ ಅಲ್ಲಿಂದ ಕರೆದೊಯ್ದಿದೆ.
ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈನ್ ಶಾಪ್‌ಗೆ ನುಗ್ಗಿದ ಕೋತಿ ಮದ್ಯ ಕುಡಿದು ಅಲ್ಲೇ ಮಲಗಿದ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.