ನಮೋ ಆಸ್ತಿಯಲ್ಲಿ 58 ಲಕ್ಷ ಏರಿಕೆ! ಸ್ವಂತ ಕಾರು ಇಲ್ಲ, ಭೂಮಿಯೂ ಇಲ್ಲ; ಹಾಗಾದ್ರೆ, ಪ್ರಧಾನಿ ಮೋದಿ ಆಸ್ತಿ ಎಷ್ಟು?

ಪ್ರಧಾನ ಮಂತ್ರಿ ಕಾರ್ಯಾಲಯ ಪ್ರಕಟಿಸಿರುವ, 2025-26ನೇ ಸಾಲಿನ ಕೇಂದ್ರ ಸಚಿವರ ಆಸ್ತಿ ಘೋಷಣೆ ವರದಿಯ ಪ್ರಕಾರ, ಪ್ರಧಾನಿ ಮೋದಿಯವರ ಒಟ್ಟು ಚರಾಸ್ತಿಯ ಮೌಲ್ಯವು ಕಳೆದ ಬಾರಿಯ ₹3.43 ಕೋಟಿಯಿಂದ ₹4.01 ಕೋಟಿಗೆ ತಲುಪಿದೆ. ಆ ಕುರಿತ ವರದಿ ಇಲ್ಲಿದೆ:
Narendra Modi
ಪ್ರಧಾನಿ ಮೋದಿOnline Desk
Updated on: 

ನವದೆಹಲಿ: ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ನಾಯಕನ ಆಸ್ತಿ ಎಷ್ಟಿರಬಹುದು ಎಂಬ ಕೌತುಕ ಪ್ರತಿಯೊಬ್ಬ ನಾಗರಿಕನಲ್ಲೂ ಇರುವುದು ಸಹಜ. ಯಾವುದೇ ಐಷಾರಾಮಿ ಬಂಗಲೆ ಇಲ್ಲ, ಸ್ವಂತ ಕಾರು ಕೂಡ ಹೊಂದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಹಣ? ಅವರ ಸಂಪತ್ತಿನ ಮೌಲ್ಯ ಎಷ್ಟು? ಈ ಎಲ್ಲ ಪ್ರಶ್ನೆಗಳಿಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ಬಿಡುಗಡೆ ಮಾಡಿರುವ ನೂತನ ಆಸ್ತಿ ವಿವರಗಳ ಅಧಿಕೃತ ದಾಖಲೆಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರಧಾನ ಮಂತ್ರಿ ಕಾರ್ಯಾಲಯ ಪ್ರಕಟಿಸಿರುವ 2025-26ನೇ ಸಾಲಿನ ಕೇಂದ್ರ ಸಚಿವರ ಆಸ್ತಿ ಘೋಷಣೆ ವರದಿಯ ಪ್ರಕಾರ, ಪ್ರಧಾನಿ ಮೋದಿಯವರ ಒಟ್ಟು ಚರಾಸ್ತಿಯ ಮೌಲ್ಯವು ಕಳೆದ ಬಾರಿಯ ₹3.43 ಕೋಟಿಯಿಂದ ₹4.016 ಕೋಟಿಗೆ ತಲುಪಿದೆ. ಅಂದರೆ, ಈ ಬಾರಿ ಅವರ ಆಸ್ತಿಯಲ್ಲಿ ಸುಮಾರು ₹58 ಲಕ್ಷ ಹೆಚ್ಚಳವಾಗಿದೆ. ಅದರಲ್ಲೂ, ಕೋಟ್ಯಾಧಿಪತಿಯಾಗಿದ್ದರೂ ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು, ವಾಸದ ಮನೆ ಅಥವಾ ಕೃಷಿ ಭೂಮಿ ಇಲ್ಲ.

ಎಲ್ಲಿದೆ ಪ್ರಧಾನಿ ಆಸ್ತಿ?

ಪ್ರಧಾನಿ ಮೋದಿ ಅವರ ಒಟ್ಟು ಆಸ್ತಿಯ ಬಹುಪಾಲು ಹಣ ಬ್ಯಾಂಕ್ ಠೇವಣಿ ರೂಪದಲ್ಲಿದೆ. ಅದರಂತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಾಂಧಿನಗರದ ಎನ್‌ಎಸ್‌ಸಿ ಶಾಖೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ಮತ್ತು ಎಂಒಡಿ ಠೇವಣಿಗಳ ರೂಪದಲ್ಲಿ ₹3,79,76,101 ಹಣವಿದೆ. ಜೊತೆಗೆ, ಪೋಸ್ಟ್ ಆಫೀಸ್‌ನ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ಗಳಲ್ಲಿ ₹10,24,724 ಹೂಡಿಕೆ ಹೊಂದಿದ್ದಾರೆ. ಇದರೊಂದಿಗೆ, ಪ್ರಧಾನಿ ಬಳಿ ಅಂದಾಜು 45 ಗ್ರಾಂ ತೂಕದ, ₹4,58,864 ಮೌಲ್ಯದ 4 ಚಿನ್ನದ ಉಂಗುರಗಳಿವೆ ಹಾಗೂ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ ₹3,562 ಬಾಕಿ ಇದ್ದು, ಕೈಯಲ್ಲಿ ₹34,429 ನಗದು ಇದೆ.

Narendra Modi
ಭಜನಾ ಕಾರ್ಯಕ್ರಮ: 'ಹನುಮಾನ್ ಅಂಶ್'ನ 'ಪಾರ್ವತಿ' ಹಾಡಿಗೆ ದನಿಗೂಡಿಸಿ, ಕಂಜೀರಾ ನುಡಿಸಿದ ಪ್ರಧಾನಿ ಮೋದಿ! Video

ಸ್ವಂತ ಮನೆ, ಕಾರು ಇಲ್ಲ!

ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೂ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಯಾವುದೇ ಐಷಾರಾಮಿ ವಸ್ತುಗಳಾಗಲಿ ಅಥವಾ ಸ್ಥಿರಾಸ್ತಿಗಳಾಗಲಿ ಇಲ್ಲ! ವರದಿ ಪ್ರಕಾರ, ಮೋದಿಯವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು ಅಥವಾ ಇನ್ಯಾವುದೇ ವಾಹನಗಳಿಲ್ಲ. ಜೊತೆಗೆ ಯಾವುದೇ ಕೃಷಿ ಭೂಮಿ, ವಾಣಿಜ್ಯ ಸಂಸ್ಥೆ ಅಥವಾ ಸ್ವಂತ ಮನೆ ಹೊಂದಿಲ್ಲ. ಅದರಲ್ಲೂ, ಗಾಂಧಿನಗರದಲ್ಲಿದ್ದ ಜಂಟಿ ಭೂಮಿಯಲ್ಲಿದ್ದ ತಮ್ಮ ಪಾಲನ್ನು ಅವರು ಈಗಾಗಲೇ ದಾನ ಮಾಡಿದ್ದಾರೆ. ಇದರೊಂದಿಗೆ, ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು ಅಥವಾ ಬಾಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಮಾಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com