10 Years Of Surgical Strike: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿ; ಭಾರತದ ದಿಟ್ಟ ನಿಲುವಿಗೆ ಹೊಸ ಉದಾಹರಣೆ: ಪ್ರಧಾನಿ ಮೋದಿ

ಇದೇ ವೇಳೆ 2016ರ ಸೆಪ್ಟೆಂಬರ್ 28-29ರಂದು ಉಗ್ರರ ನಡೆದ ಕಾರ್ಯಾಚರಣೆಯನ್ನು ಸ್ಮರಿಸಿದ ಅವರು, ಜಮ್ಮು-ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ದಾಳಿಯ ಬಳಿಕ ಭಾರತೀಯ ಸೇನೆ ನಿಯಂತ್ರಣ ರೇಖೆ ದಾಟಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತ್ತು.
PM modi
ಪ್ರಧಾನಿ ಮೋದಿ
Updated on: 

ನವದೆಹಲಿ: 2016ರ ಉರಿ ಸರ್ಜಿಕಲ್ ಸ್ಟ್ರೈಕ್ ಭಯೋತ್ಪಾದನೆಗೆ ಭಾರತದ ನಿರ್ಣಾಯಕ ಪ್ರತಿಕ್ರಿಯೆಯಾಗಿದ್ದು, ಜಗತ್ತಿನ ಮುಂದೆ ಭಾರತದ ಭಯೋತ್ಪಾದನಾ ವಿರೋಧಿ ನೀತಿಗೆ “ಹೊಸ ದಿಟ್ಟ ಉದಾಹರಣೆ”ಯನ್ನು ಸ್ಥಾಪಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿಯವರು, ಭಾರತ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದೆ. ಭಯೋತ್ಪಾದಕ ದಾಳಿಗಳಿಗೆ “ಬಲಿಷ್ಠ ಮತ್ತು ನಿರ್ಣಾಯಕ ಪ್ರತಿಕ್ರಿಯೆ” ನೀಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ 2016ರ ಸೆಪ್ಟೆಂಬರ್ 28-29ರಂದು ಉಗ್ರರ ನಡೆದ ಕಾರ್ಯಾಚರಣೆಯನ್ನು ಸ್ಮರಿಸಿದ ಅವರು, ಜಮ್ಮು-ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ದಾಳಿಯ ಬಳಿಕ ಭಾರತೀಯ ಸೇನೆ ನಿಯಂತ್ರಣ ರೇಖೆ ದಾಟಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತ್ತು.

ಸರ್ಜಿಕಲ್ ಸ್ಟ್ರೈಕ್ ಇಡೀ ಜಗತ್ತಿನ ಮುಂದೆ ಭಾರತದ ಭಯೋತ್ಪಾದನಾ ವಿರೋಧಿ ನೀತಿಗೆ ಹೊಸ ದಿಟ್ಟ ಉದಾಹರಣೆಯನ್ನು ನೀಡಿತು. ಈ ಕಾರ್ಯಾಚರಣೆಯ ಮೂಲಕ ಭಯೋತ್ಪಾದನೆಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಭಾರತದ ಸಂಕಲ್ಪವನ್ನು ಪ್ರದರ್ಶಿಸಲಾಯಿತು ಎಂದು ಹೇಳಿದರು.

ಭಯೋತ್ಪಾದಕ ದಾಳಿಗಳ ನೋವನ್ನು ಭಾರತ ದೀರ್ಘಕಾಲ ಸಹಿಸಿಕೊಂಡಿತ್ತು. ಆ “ನೋವಿಗೆ” ಸರ್ಜಿಕಲ್ ಸ್ಟ್ರೈಕ್ ನಿರ್ಣಾಯಕ ಪ್ರತಿಕ್ರಿಯೆಯಾಗಿತ್ತು ಎಂದು ಬಣ್ಣಿಸಿದರು.

ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

PM modi
ನಮೋ ಆಸ್ತಿಯಲ್ಲಿ 58 ಲಕ್ಷ ಏರಿಕೆ! ಸ್ವಂತ ಕಾರು ಇಲ್ಲ, ಭೂಮಿಯೂ ಇಲ್ಲ; ಹಾಗಾದ್ರೆ, ಪ್ರಧಾನಿ ಮೋದಿ ಆಸ್ತಿ ಎಷ್ಟು?

ಇದೇ ವೇಳೆ, ನಡೆಯುತ್ತಿರುವ ಜನಗಣತಿ ಕಾರ್ಯದಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಮೋದಿ ಮನವಿ ಮಾಡಿದರು.

ಜನಗಣತಿ ರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದರಲ್ಲಿ ಪಾತ್ರವಿದೆ ಎಂದು ಹೇಳಿದರು. ಆನ್‌ಲೈನ್ ಮೂಲಕ ಮಾಹಿತಿ ದಾಖಲಿಸುವ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು.

ಮಾದಕ ವಸ್ತುಗಳ ವಿರುದ್ಧದ ಹೋರಾಟದ ಕುರಿತು ಮಾತನಾಡಿ, ನಶಾ ಮುಕ್ತ ಯುವ ಅಭಿಯಾನ’ದ ಮೂಲಕ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ದೇಶದ ಯುವಕರು ಒಗ್ಗೂಡುತ್ತಿದ್ದಾರೆ ಎಂದು ಹೇಳಿದರು.

ಲಕ್ಷಾಂತರ ಯುವಕರು ಮಾದಕ ವಸ್ತುಗಳಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿದ್ದು, ಇತರರನ್ನೂ ಅದೇ ರೀತಿ ಮಾಡಲು ಪ್ರೇರೇಪಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ನ ದಿವಂಗತ ನಾಯಕ ಅಶೋಕ್ ಸಿಂಘಲ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಮ ಜನ್ಮಭೂಮಿ ಚಳವಳಿಗೆ ಸಿಂಘಲ್ ನೀಡಿದ ಕೊಡುಗೆಯನ್ನು ಸ್ಮರಿಸಿದ ಮೋದಿ, ಸಮಾಜದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಅವರ ಜೀವನದಲ್ಲಿ ಸನ್ಯಾಸಿಯ ಗುಣಗಳು ಎದ್ದು ಕಾಣುತ್ತಿದ್ದವು ಎಂದು ಹೇಳಿದರು.

X
Kannada Prabha
www.kannadaprabha.com