16 ಲಕ್ಷ ಪಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್, ಮಾಡೆಲ್ ನಿಧಿ ತಿವಾರಿ ಆತ್ಮಹತ್ಯೆ; ಕೊನೆಯ ಫೇಸ್‌ಬುಕ್ ಪೋಸ್ಟ್ ವೈರಲ್!

2024ರಲ್ಲಿ ನಿಧಿ 'ಮಿಸ್ ಪ್ರೆಟಿ ಇಂಡಿಯಾ' ಪ್ರಶಸ್ತಿಯನ್ನು ಗೆದ್ದಿದ್ದರು; ಆ ನಂತರ ಅವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
Influencer Nidhi Tiwari With 16 Lakh Followers Dies By Suicide
ನಿಧಿ ತಿವಾರಿ
Updated on: 

ಭೋಪಾಲ್: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಸುಮಾರು 9 ಲಕ್ಷ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷ ಫಾಲೋವರ್ಸ್ ಹೊಂದಿದ್ದ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ 30 ವರ್ಷದ ಕಂಟೆಂಟ್ ಕ್ರಿಯೇಟರ್ ಹಾಗೂ ಮಾಡೆಲ್ ನಿಧಿ ತಿವಾರಿ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಧಿ ಅವರು, ವಿಂಧ್ಯ ಪ್ರದೇಶದ ಅತ್ಯಂತ ಪ್ರಮುಖ ಸಾಮಾಜಿಕ ಜಾಲತಾಣ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದರು. ಅವರ ಪೋಸ್ಟ್‌ಗಳು ನಿಯಮಿತವಾಗಿ ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದವು ಮತ್ತು ಅವರ ವಿಡಿಯೋಗಳು ಲಕ್ಷಾಂತರ ವೀಕ್ಷಕರನ್ನು ತಲುಪುತ್ತಿದ್ದವು.

Influencer Nidhi Tiwari With 16 Lakh Followers Dies By Suicide
ಬೇರೆ ಹುಡುಗನ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ; ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಲೆಕ್ಚರರ್ ಬಂಧನ!

2024ರಲ್ಲಿ ನಿಧಿ 'ಮಿಸ್ ಪ್ರೆಟಿ ಇಂಡಿಯಾ' ಪ್ರಶಸ್ತಿಯನ್ನು ಗೆದ್ದಿದ್ದರು; ಆ ನಂತರ ಅವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಶನಿವಾರ ಭುಸಾ ಮೋಡ್‌ನಲ್ಲಿರುವ ಅವರ ಮನೆಯಲ್ಲಿ ನಿಧಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.

ನಿಧಿ ಮಾಡೆಲಿಂಗ್, ಈವೆಂಟ್ ನಿರ್ವಹಣೆ ಹಾಗೂ ವಿಡಿಯೋ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕುಟುಂಬದ ಮೂಲಗಳ ಪ್ರಕಾರ, ಶನಿವಾರ ಸಂಜೆ ದೆಹಲಿ ಮೂಲದ ವ್ಯಕ್ತಿಯೊಬ್ಬರ ಜೊತೆ ನಿಧಿ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂಭಾಷಣೆಯ ವೇಳೆ ಗಲಾಟೆಯಾಗಿದ್ದು, ತಕ್ಷಣವೇ ನಿಧಿ ತಮ್ಮ ಕೊಠಡಿಯನ್ನು ಲಾಕ್ ಮಾಡಿಕೊಂಡರು. ರಾತ್ರಿಯ ಊಟವನ್ನೂ ಮಾಡದೆ, ತಾಯಿಯ ಬಳಿ ತಮ್ಮನ್ನು ಒಂಟಿಯಾಗಿ ಬಿಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.

ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಸಂಬಂಧ ಮೊರ್ವಾ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿಧಿ ಅವರು ತಾಯಿ ಮತ್ತು ತಂಗಿಯೊಂದಿಗೆ ಸಿಂಗ್ರೌಲಿಯಲ್ಲಿ ವಾಸಿಸುತ್ತಿದ್ದರು.

ಕೊನೆಯ ಪೋಸ್ಟ್ ವೈರಲ್

ನಿಧಿ ಅವರು ಸಾವಿಗೂ ಮುನ್ನ ಫೇಸ್ ಬುಕ್ ನಲ್ಲಿ ಮಾಡಿದ್ದ ಕೊನೆಯ ಪೋಸ್ಟ್ ಇದೀಗ ವೈರಲ್ ಆಗಿದೆ. ತಮ್ಮ ಕೊನೆಯ ಪೋಸ್ಟ್‌ನಲ್ಲಿ ಅವರು, “ಈ ಅಪೂರ್ಣ ಹೃದಯವನ್ನು ಯಾರೂ ಪೂರ್ಣಗೊಳಿಸಲಿಲ್ಲ, ನಾನೇ ಸ್ವತಃ ಪೂರ್ಣಗೊಳಿಸಿದೆ. ಅದಕ್ಕಾಗಿಯೇ ಹೇಳುವುದು ಬೇರಾರನ್ನೋ ಪ್ರೀತಿಸುವ ಬದಲು ನಿಮ್ಮನ್ನು ನೀವೇ ಪ್ರೀತಿಸಿಕೊಳ್ಳಿ. ಕೊನೆಗೆ ಎಷ್ಟು ದಿನ ಅಂತ ಬೇರೆಯವರಲ್ಲಿ ನಿಮ್ಮನ್ನು ಹುಡುಕುತ್ತೀರಿ, ನಿಮ್ಮಲ್ಲೇ ನಿಮ್ಮನ್ನು ಹುಡುಕಿಕೊಳ್ಳಿ” ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com