ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ತೊಡಿಸಿದ ಸಿಎಂ ವಿಜಯ್! Video

ರಾಜಾಜಿ ಆಸ್ಪತ್ರೆಯಲ್ಲಿ ಸರ್ಕಾರಿ ಯೋಜನೆ ಉದ್ಘಾಟಿಸಿದ ವಿಜಯ್, ಶಿಶುಗಳನ್ನು ತಮ್ಮ ಕೈಯಲ್ಲಿ ಹಿಡಿದು ಚಿನ್ನದ ಉಂಗುರಗಳನ್ನು ವಿತರಿಸಿದರು.
cm Vijay
ಸಿಎಂ ವಿಜಯ್
Updated on: 

ಮಧುರೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಸೋಮವಾರ ಮತ್ತೊಂದು ಪ್ರಮುಖ ಚುನಾವಣಾ ಭರವಸೆಯೊಂದನ್ನು ಈಡೇರಿಸಿದ್ದಾರೆ. ನವಜಾತ ಶಿಶುಗಳಿಗಾಗಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಉಂಗುರ ನೀಡುವ ಯೋಜನೆಗೆ( Thaaimaman Thanga Mothiram Thittam)ಚಾಲನೆ ನೀಡಿದ್ದಾರೆ.

ರಾಜಾಜಿ ಆಸ್ಪತ್ರೆಯಲ್ಲಿ ಸರ್ಕಾರಿ ಯೋಜನೆ ಉದ್ಘಾಟಿಸಿದ ವಿಜಯ್, ಶಿಶುಗಳನ್ನು ತಮ್ಮ ಕೈಯಲ್ಲಿ ಹಿಡಿದು ಚಿನ್ನದ ಉಂಗುರಗಳನ್ನು ವಿತರಿಸಿದರು. ಈ ಯೋಜನೆಗಾಗಿ ಸರ್ಕಾರ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಮಾತೃತ್ವವನ್ನು ಗೌರವಿಸುವುದು, ಮಹಿಳೆಯರ ಆರೋಗ್ಯವನ್ನು ಪ್ರೋತ್ಸಾಹಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳತ್ತ ಹೆಚ್ಚಿನ ಕುಟುಂಬಗಳನ್ನು ಆಕರ್ಷಿಸುವ ಮೂಲಕ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವುದನ್ನು ಪ್ರೋತ್ಸಾಹಿಸುವುದು ಈ ಕಲ್ಯಾಣ ಉಪಕ್ರಮದ ಉದ್ದೇಶವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ ಈ ಯೋಜನೆಯನ್ನು ಆರಂಭಿಕವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಈಗಾಗಲೇ 1.28 ಲಕ್ಷ ಚಿನ್ನದ ಉಂಗುರಗಳನ್ನು ಸಂಗ್ರಹಿಸಿದೆ. ಜೂನ್ 22, 2026 ರಂದು ಅಥವಾ ನಂತರ ಜನಿಸಿದ ಅರ್ಹ ಶಿಶುಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

"ಮಗುವೊಂದು ಜನಿಸಿದಾಗ ತಕ್ಷಣವೇ ಧಾವಿಸಿ ಬರುವವರಲ್ಲಿ ತಾಯಿಯ ಸಹೋದರ (ಮಾವ) ಒಬ್ಬರು. ಅವರು ತಮ್ಮ ಸಹೋದರಿಯ ಸಂತೋಷವನ್ನು ತಮ್ಮದೇ ಸಂತೋಷವೆಂದು ಭಾವಿಸುತ್ತಾರೆ. ತಾನು ಯಾವಾಗಲೂ ಅವಳ ಮತ್ತು ಮಗುವಿನ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡುತ್ತಾ, ಪ್ರೀತಿ, ಬೆಂಬಲ ಮತ್ತು ಸುರಕ್ಷತೆಯ ಭಾವನೆಯನ್ನು ಒದಗಿಸುತ್ತಾರೆ. ಇಂದು, ನಮ್ಮ ಸಹೋದರ ವಿಜಯ್ ಅವರ ನೇತೃತ್ವದಲ್ಲಿ ತಮಿಳುನಾಡು ಸರ್ಕಾರ ತಾಯಿಯ ಸಹೋದರನ ಈ ಪವಿತ್ರ ಬಾಂಧವ್ಯವನ್ನು ಗೌರವಿಸುತ್ತಿದೆ. ಆ ಪ್ರೀತಿಯ ಸಂಕೇತವಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಒಂದು ಗ್ರಾಂ ಚಿನ್ನದ ಉಂಗುರವನ್ನು ನೀಡಲು ಮುಂದಾಗಿದೆ ಎಂದು ತಮಿಳುನಾಡು ಸಚಿವ ಅರುಣ್ ರಾಜ್ ಹೇಳಿದರು.

"ಯೋಜನೆಯನ್ನು ಘೋಷಿಸಿದಾಗ ಅದನ್ನು ಎಲ್ಲಿ ಪ್ರಾರಂಭಿಸಬೇಕು ಎಂಬ ಪ್ರಶ್ನೆ ಎದುರಾದಾಗ, ನಮ್ಮ ಮುಖ್ಯಮಂತ್ರಿಗಳು ಆಯ್ಕೆ ಮಾಡಿದ ಸ್ಥಳ ಮಧುರೈ. ಇದು ಮೀನಾಕ್ಷಿ ದೇವಿಯ ಕರುಣೆ ಮತ್ತು ಅನುಗ್ರಹದಿಂದ ಆಶೀರ್ವದಿಸಲ್ಪಟ್ಟ ಮದುರೈನ ಪವಿತ್ರ ಭೂಮಿ ಎಂದು ಸಚಿವರು ಹೇಳಿದರು.

ತಮಿಳುನಾಡು ಸರ್ಕಾರದ ಪ್ರಕಾರ, ಪ್ರತಿಯೊಂದು ಚಿನ್ನದ ಉಂಗುರವು ವಿಶಿಷ್ಟವಾದ ಕ್ರಮ ಸಂಖ್ಯೆಯನ್ನು (serial number) ಹೊಂದಿರುತ್ತದೆ ಮತ್ತು ಅದನ್ನು ಸುಲಭವಾಗಿ ಬದಲಾಯಿಸಲು ಅಥವಾ ತೆರೆಯಲು ಸಾಧ್ಯವಾಗದ (tamper-proof) ಪ್ಯಾಕೇಜಿಂಗ್‌ನಲ್ಲಿ ನೀಡಲಾಗುತ್ತದೆ.

ತಮಿಳುನಾಡಿನ ಖಾಯಂ ನಿವಾಸಿಗಳಾಗಿರುವ ಮತ್ತು 'ಪ್ರೆಗ್ನೆನ್ಸಿ ಅಂಡ್ ಇನ್ಫಾಂಟ್ ಕೋಹೋರ್ಟ್ ಮಾನಿಟರಿಂಗ್ ಅಂಡ್ ಇವ್ಯಾಲ್ಯೂಯೇಷನ್' (PICME) ಅಡಿಯಲ್ಲಿ ನೋಂದಾಯಿಸಿಕೊಂಡು, 'ರಿಪ್ರೊಡಕ್ಟಿವ್ ಅಂಡ್ ಚೈಲ್ಡ್ ಹೆಲ್ತ್' (RCH) ಐಡಿ (ID) ಪಡೆದಿರುವ ತಾಯಂದಿರು ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

ಜೂನ್ 22 ಮತ್ತು ಯೋಜನೆಗೆ ಚಾಲನೆ ನೀಡಿದ ದಿನಾಂಕದ ನಡುವೆ ಜನಿಸಿದ ಶಿಶುಗಳಿಗೆ ಬಾಕಿ ಉಳಿದಿರುವ ಉಂಗುರಗಳನ್ನು ವಿತರಿಸಲು, ಸರ್ಕಾರವು ರಾಜ್ಯಾದ್ಯಂತ 107 ಕೇಂದ್ರಗಳ (ಹಬ್‌ಗಳ) ಮೂಲಕ ವ್ಯವಸ್ಥೆ ಮಾಡಿದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಶಿಶುಗಳಂತೆ ಇಂದು ವಿತರಣೆ ಪ್ರಾರಂಭವಾಗುತ್ತದೆ. ಯೋಜನೆಗೆ ಚಾಲನೆ ನೀಡಿದ ದಿನದಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಶಿಶುಗಳಿಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಸಮಯದಲ್ಲೇ ಚಿನ್ನದ ಉಂಗುರವನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

cm Vijay
ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಜಗತ್ತಿನಲ್ಲಿರುವ ಏಕೈಕ ಉದಾಹರಣೆ ನಾನು: ಸಿಎಂ ವಿಜಯ್

ಸಾಮಾನ್ಯವಾಗಿ ಔಷಧಗಳು ಮತ್ತು ವೈದ್ಯಕೀಯ ಸಂಬಂಧಿತ ವಸ್ತುಗಳನ್ನು ಖರೀದಿಸಲು ಬಳಸಲಾಗುವ 'ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ'ದ (Tamil Nadu Medical Services Corporation) ಮೂಲಕವೇ ಚಿನ್ನದ ಉಂಗುರಗಳನ್ನು ಖರೀದಿಸುತ್ತಿರುವುದರ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

ಡಿಎಂಕೆ (DMK) ನಾಯಕ ಟಿ.ಕೆ.ಎಸ್. ಇಳಂಗೋವನ್, ಈ ಯೋಜನೆಯು ಸಾಮಾನ್ಯ ಜನರಿಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವೆಂದು ಟಿವಿಕೆ (TVK) ಸ್ಪಷ್ಟಪಡಿಸಿದೆ. ಅಲ್ಲದೆ, ಕಾನೂನು ಸಲಹೆಯನ್ನು ಪಡೆಯಲಾಗಿದೆ ಮತ್ತು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು ಎಂದು ಅದು ಪ್ರತಿಪಾದಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com