ದ್ರಾವಿಡರ ಶಿವ ಬಡವ, ಆರ್ಯರ ಶ್ರೀರಾಮ ಶ್ರೀಮಂತ: ಮೋದಿ ಏಕೆ 'ಹರ್ ಹರ್ ಮಹಾದೇವ್ ಹೇಳಲ್ಲ; ರೇವಂತ್‌ ರೆಡ್ಡಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ಬಿಜೆಪಿ ರಾಮನನ್ನು ಕಸಿದುಕೊಂಡಿದೆ. ಇದು ಒಂದು ಭಾವನೆ, ಒಂದು ಸಂವೇದನೆ. ಮೋದಿಜಿ ಏಕೆ 'ಹರ್ ಹರ್ ಮಹಾದೇವ್' ಎಂದು ಹೇಳುವುದಿಲ್ಲ? ಬಿಜೆಪಿಗರು ಎಂದಾದರೂ ವೇದಿಕೆಯ ಮೇಲೆ 'ಹರ್ ಹರ್ ಮಹಾದೇವ್' ಎಂದು ಹೇಳಿದ್ದಾರೆಯೇ?
Telangana CM Revanth Reddy
ತೆಲಂಗಾಣ ಸಿಎಂ ರೇವಂತ್ ರೆಡ್ಡಿ
Updated on: 

ಹೈದರಾಬಾದ್: ಉತ್ತರ ಭಾರತದಲ್ಲಿ ಶ್ರೀರಾಮನನ್ನು ಪೂಜಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಿವನನ್ನು ಆರಾಧಿಸಲಾಗುತ್ತದ. ಆದರೆ ಬಿಜೆಪಿ ಉತ್ತರದಲ್ಲಿ ಶ್ರೀರಾಮನನ್ನು ಕಸಿದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ದಕ್ಷಿಣದಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ದ್ರಾವಿಡರು, ಅವರು ಆರ್ಯರು. ನಾವು ಶಿವನ ಭಕ್ತರು, ಆದರೆ ಅವರು ಶ್ರೀರಾಮನ ಭಕ್ತರು. ಅವರು ಶಿವನನ್ನು ಬಡವರ ದೇವರು ಮತ್ತು ರಾಮನನ್ನು ಶ್ರೀಮಂತರ ದೇವರು ಎಂದು ಕರೆದರು. ಈ ಎರಡೂ ದೇವತೆಗಳನ್ನು ಜನರು ಗೌರವಿಸುತ್ತಾರೆ ಎಂದು ರೇವಂತ್‌ ರೆಡ್ಡಿ ಪ್ರತಿಪಾದಿಸಿದರು.

ಬಿಜೆಪಿ ರಾಮನನ್ನು ಕಸಿದುಕೊಂಡಿದೆ. ಇದು ಒಂದು ಭಾವನೆ, ಒಂದು ಸಂವೇದನೆ. ಮೋದಿಜಿ ಏಕೆ 'ಹರ್ ಹರ್ ಮಹಾದೇವ್' ಎಂದು ಹೇಳುವುದಿಲ್ಲ? ಬಿಜೆಪಿಗರು ಎಂದಾದರೂ ವೇದಿಕೆಯ ಮೇಲೆ 'ಹರ್ ಹರ್ ಮಹಾದೇವ್' ಎಂದು ಹೇಳಿದ್ದಾರೆಯೇ? ಅವರು ಕೇವಲ 'ಜೈ ಶ್ರೀರಾಮ್' ಎಂದು ಹೇಳುತ್ತಾರೆ. ನಾವು 'ಹರ್ ಹರ್ ಮಹಾದೇವ್' ಎಂದಾಗ ಅವರಿಗೆ ಅದು ಇಷ್ಟವಾಗುವುದಿಲ್ಲ, ಎಂದು ಅವರು ಆರೋಪಿಸಿದರು.

ಉತ್ತರ ಮತ್ತು ದಕ್ಷಿಣ ಭಾರತದ ರಾಜಕೀಯ ಸಂಸ್ಕೃತಿಗಳ ನಡುವೆ ವ್ಯಾಪಕ ವ್ಯತ್ಯಾಸಗಳಿವೆ ಎಂಬ ವಾದವನ್ನು ಬೆಂಬಲಿಸುವ ನಿಟ್ಟಿನಲ್ಲಿ, ತೆಲಂಗಾಣ ಮುಖ್ಯಮಂತ್ರಿಗಳಿಂದ ಈ ಹೇಳಿಕೆಗಳು ಬಂದವು.

Telangana CM Revanth Reddy
ಸಿಎಂಗೆ ಕಟ್ಟಿದ ಚಿನ್ನದ ರಾಖಿ ಕೂಡ ರಕ್ಷಿಸಲಿಲ್ಲ: Konda Surekhaಗೆ ರೇವಂತ್ ರೆಡ್ಡಿ ಶಾಕ್; ಸಂಪುಟದಿಂದ ಗೇಟ್‌ಪಾಸ್

ಉತ್ತರ ಭಾರತದಲ್ಲಿ ಪೂಜಿಸಲ್ಪಡುವ ಶ್ರೀರಾಮನನ್ನು ಬಿಜೆಪಿ ಕಸಿದುಕೊಂಡಿದೆ, ಆದರೆ ದಕ್ಷಿಣ ರಾಜ್ಯಗಳಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಹೀಗಾಗಿ ಕಾಂಗ್ರೆಸ್ ದಕ್ಷಿಣದಲ್ಲಿ ಮಾತ್ರ ಯಶಸ್ವಿಯಾಗಿದೆ ಮತ್ತು ಉತ್ತರ ರಾಜ್ಯಗಳಲ್ಲಿ ಅಲ್ಲ ಎಂದಿದ್ದಾರೆ.

ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಡೆದ 'ಸೈಮನ್ ಗೋ ಬ್ಯಾಕ್' (ಸೈಮನ್ ವಾಪಸ್ ಹೋಗಿ) ಚಳವಳಿಯಂತೆಯೇ, ದೇಶದಲ್ಲಿ ಎಸ್‌ಐಆರ್ (SIR) ವಿರುದ್ಧವೂ ಹೋರಾಟ ನಡೆಯಲಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.

ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಭಗವಾನ್ ಶಿವ ಮತ್ತು ಭಗವಾನ್ ರಾಮರ ನಡುವೆ ರಾಜಕೀಯ ವಿಭಜನೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ನಾಯಕರು ಭಗವಾನ್ ಶಿವನನ್ನು ಸ್ಮರಿಸುವುದಿಲ್ಲ ಎಂಬ ರೆಡ್ಡಿ ಅವರ ಹೇಳಿಕೆಯನ್ನು ಅಲ್ಲಗಳೆದ ಸಂಜಯ್, ಪ್ರಧಾನಿ ಮೋದಿ ಅವರಿಗೆ ಕಾಶಿ ವಿಶ್ವನಾಥ ದೇವಾಲಯದ ಜೊತೆಗಿರುವ ನಂಟನ್ನು ಹಾಗೂ ಅವರು ವೇಮುಲವಾಡಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದರು.

ವೇಮುಲವಾಡದಲ್ಲಿ 'ದಕ್ಷಿಣ ಕಾಶಿ' ಮತ್ತು ಭದ್ರಾಚಲಂನಲ್ಲಿ 'ದಕ್ಷಿಣ ಅಯೋಧ್ಯೆ'ಯನ್ನು ಹೊಂದಿರುವ ತೆಲಂಗಾಣದ ಮುಖ್ಯಮಂತ್ರಿಯಾಗಿರುವ ರೇವಂತ್ ರೆಡ್ಡಿ, ಶ್ರೀರಾಮ ಮತ್ತು ಶಿವನನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸಬಾರದು ಎಂಬ ಕನಿಷ್ಠ ತಿಳುವಳಿಕೆಯನ್ನಾದರೂ ಹೊಂದಿರಬೇಕು, ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com