ರೈತರಿಗೆ ಕೇಂದ್ರದಿಂದ ಭರ್ಜರಿ ಸಿಹಿಸುದ್ದಿ: ಹಿಂಗಾರು ಬೆಳೆಗಳ ಬೆಂಬಲ ಬೆಲೆ ಭಾರಿ ಹೆಚ್ಚಳ

ಪ್ರಧಾನಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಹಂಗಾಮಿನ ಎಲ್ಲಾ 6 ಕಡ್ಡಾಯ ಹಿಂಗಾರು (ರಬಿ) ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲು ಮಹತ್ವದ ಅನುಮೋದನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
Cabinet Hikes MSP for Rabi Crops
ರೈತರಿಗೆ ಗುಡ್‌ನ್ಯೂಸ್‌Online Desk
Updated on: 

ನವದೆಹಲಿ: ಈ ವರ್ಷ ಮುಂಗಾರಿನಲ್ಲಿ ಮಳೆ ಕಡಿಮೆ ಆಗಿದೆ ಎನ್ನಲಾಗುತ್ತಿರುವ ನಡುವೆಯೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಹಂಗಾಮಿನ ಎಲ್ಲಾ 6 ಕಡ್ಡಾಯ ಹಿಂಗಾರು (ರಬಿ) ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲು ಮಹತ್ವದ ಅನುಮೋದನೆ ನೀಡಿದೆ. ಅದರಂತೆ, ಈ ಬಾರಿ ಕುಸುಬೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ ₹675 ಹಾಗೂ ಸಾಸಿವೆಗೆ ₹413 ಹೆಚ್ಚಳ ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ದೊರಕಿಸಿಕೊಡುವ ಹಾಗೂ ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಿತ್ತನೆ ಅವಧಿಗೂ ಮುನ್ನವೇ ಈ ಪರಿಷ್ಕೃತ ದರಗಳನ್ನು ಪ್ರಕಟಿಸಲಾಗಿದೆ ಎಂದರು.

ಹಿಂಗಾರು ಬೆಳೆಗಳ ಬೆಂಬಲ ಬೆಲೆ ವಿವರ:

Cabinet Hikes MSP for Rabi Crops
PIB X Handle

ಮುಂದುವರೆದು, ಈ ಬೆಲೆ ಪರಿಷ್ಕರಣೆಯು ಕೇಂದ್ರ ಬಜೆಟ್‌ನ ಘೋಷಣೆಯಂತೆ, ರೈತರ ಒಟ್ಟಾರೆ ದೇಶೀಯ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಅಧಿಕ ಲಾಭವನ್ನು ಖಾತರಿಪಡಿಸುತ್ತದೆ. ಜೊತೆಗೆ, ಹೊಸ ದರಗಳ ಪ್ರಕಾರ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಗೋಧಿಗೆ ಗರಿಷ್ಠ ಶೇ. 106 ರಷ್ಟು, ಸಾಸಿವೆಗೆ ಶೇ. 96 ರಷ್ಟು ಮತ್ತು ಮಸೂರ್ ಬೇಳೆಗೆ ಶೇ. 92 ರಷ್ಟು ಲಾಭದ ಮಾರ್ಜಿನ್ ಸಿಗಲಿದೆ. ಅದರಲ್ಲೂ, ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹಿಂಗಾರು ಬಿತ್ತನೆ ಆರಂಭವಾಗುತ್ತದೆ. ಬಿತ್ತನೆಗೆ ಮುಂಚಿತವಾಗಿಯೇ ಬೆಲೆ ಪ್ರಕಟಿಸಿರುವುದರಿಂದ ರೈತರು ಮಾರುಕಟ್ಟೆಯ ಏರಿಳಿತದ ಭೀತಿಯಿಲ್ಲದೆ ಲಾಭದಾಯಕ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ಪಷ್ಟತೆ ಸಿಗುತ್ತದೆ.

Cabinet Hikes MSP for Rabi Crops
Watch | ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ: ಪ್ರಹ್ಲಾದ ಜೋಶಿ ಹೇಳಿದ್ದಿಷ್ಟು...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com