ದಯವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬನ್ನಿ; ಮಾಜಿ ನಾಯಕರಿಗೆ ಮನವಿ ಮಾಡಿದ ಡಿಸಿಎಂ

ನಾಯಕತ್ವದ ಬಿಕ್ಕಟಿನ ಕಾರಣದಿಂದ ಈಗಾಗಲೇ ಹಲವು ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಇದರ ನಡುವೆಯೇ, ಡಿಸಿಎಂ ಮಲ್ಲು ಭಟ್ಟಿ, ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಎಲ್ಲಾ ಹಳೆಯ ನಾಯಕರಿಗೆ ಮರಳಿ ಪಕ್ಷಕ್ಕೆ ಬರುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Come Back Home: Telangana Deputy CM Mallu Bhatti Appeals to Former Congress Leaders to Rejoin
ಕಾಂಗ್ರೆಸ್ ಪಕ್ಷದ ಸಮಾವೇಶ (ಸಾಂದರ್ಭಿಕ ಚಿತ್ರ)Online Desk
Updated on: 

ಕೊಚ್ಚಿ (ಕೇರಳಂ): ನಾಯಕತ್ವದ ಬಿಕ್ಕಟಿನ ಕಾರಣದಿಂದ ಈಗಾಗಲೇ ಹಲವು ರಾಜ್ಯಗಳಲ್ಲಿ ಪ್ರಮುಖ ನಾಯಕರಾಗಿದ್ದವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಇದರ ನಡುವೆಯೇ, ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಎಲ್ಲಾ ಹಳೆಯ ನಾಯಕರಿಗೆ ಮರಳಿ ಪಕ್ಷಕ್ಕೆ ಬರುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕೊಚ್ಚಿಯಲ್ಲಿ ನಡೆದ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು, ಕೇವಲ ಆಂಧ್ರಪ್ರದೇಶ ಅಥವಾ ತೆಲಂಗಾಣ ಮಾತ್ರವಲ್ಲದೆ, ದೇಶಾದ್ಯಂತ ಕಾಂಗ್ರೆಸ್ ಸಿದ್ಧಾಂತವನ್ನು ನಂಬಿ, ನಂತರದ ದಿನಗಳಲ್ಲಿ ಪಕ್ಷ ತೊರೆದ ಎಲ್ಲ ಹಳೆಯ ನಾಯಕರಿಗೂ ಮರಳಿ ಬರುವಂತೆ ಕರೆ ನೀಡಿದ್ದಾರೆ. ಹಳೆಯ ನಾಯಕರು ಒಟ್ಟಾಗಿ ಬಂದರೆ ದೇಶವನ್ನು ಮತ್ತಷ್ಟು ಬಲಪಡಿಸಲು ಮತ್ತು ಪಕ್ಷದ ಸಿದ್ಧಾಂತವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಮತಾ, ಶರದ್ ಕೂಡ ಕಾಂಗ್ರೆಸ್ ಸೇರಲಿ

ಮುಂದುವರೆದು, ತಮ್ಮ ಹಳೆಯ ರಾಜಕೀಯ ದಿನಗಳನ್ನು ನೆನಪಿಸಿಕೊಂಡ ಭಟ್ಟಿ ವಿಕ್ರಮಾರ್ಕ, "ನಾನು ದಿವಂಗತ ಮುಖ್ಯಮಂತ್ರಿ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಅವರ ಮಗ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಕೆಲಸ ಮಾಡಿಲ್ಲ. ಆದಾಗ್ಯೂ, ಒಬ್ಬ ನಿಜವಾದ ಕಾಂಗ್ರೆಸ್ಸಿಗನಾಗಿ, ಹಳೆಯ ಕಾಂಗ್ರೆಸ್ ನಾಯಕರಾದ ಮಮತಾ ಬ್ಯಾನರ್ಜಿ, ಶರದ್ ಪವಾರ್ ಅಥವಾ ವೈಎಸ್‌ಆರ್ ಕುಟುಂಬದವರೇ ಆಗಿರಲಿ, ಎಲ್ಲರೂ ಮರಳಿ ಕಾಂಗ್ರೆಸ್‌ಗೆ ಸೇರಿದರೆ ನಾನೇ ಅತ್ಯಂತ ಸಂತೋಷ ಪಡುವ ವ್ಯಕ್ತಿಯಾಗುತ್ತೇನೆ" ಎಂದು ಹೇಳಿದ್ದಾರೆ.

Come Back Home: Telangana Deputy CM Mallu Bhatti Appeals to Former Congress Leaders to Rejoin
ರಾಹುಲ್‌ಗೆ ಮಾನಸಿಕ ದಿವಾಳಿತನ; ಅಧಿಕಾರ ಸಿಗದಿದ್ದರೆ ದೇಶ ಬಿಟ್ಟು ಓಡಿಹೋಗುತ್ತಾರೆ: ಗಿರಿರಾಜ್ ಸಿಂಗ್

ಇದೇ ವೇಳೆ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಲ್ಲು, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ನಂಬಿಕೆ ಉಳಿಯಬೇಕಾದರೆ ಮತಪತ್ರಗಳ ಮೂಲಕವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com