Video: ತುಂಬಿದ ಸಭೆಯಲ್ಲಿ ''ಎಣ್ಣೆ'' ಹೊಡೆದು ನಟಿಯ ತಳ್ಳಿದರೇ ಬಾಲಯ್ಯ..?; 'Gangs of Godavari' ಚಿತ್ರದ ಕಾರ್ಯಕ್ರಮದಲ್ಲಿ ನಟ Balakrishna ಅನುಚಿತ ವರ್ತನೆ
ಹೈದರಾಬಾದ್: ಖ್ಯಾತ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ತಮ್ಮ ಅನುಚಿತ ವರ್ತನೆ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ತುಂಬಿದ ಸಭೆಯಲ್ಲಿ ಮದ್ಯ ಸೇವಿಸಿ ನಟಿಯನ್ನು ತಳ್ಳಿದರು ಎಂಬ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.
ಇತ್ತೀಚೆಗೆ ನಟ ವಿಶ್ವಕ್ ಸೇನ್ (Vishwak Sen), ಅಂಜಲಿ (Actress Anjali) ಮತ್ತು ನೇಹಾ ಶೆಟ್ಟಿ (Neha Shetty) ನಟಿಸಿರುವ ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ನಟ ಬಾಲಕೃಷ್ಣ (Nandamuri Balakrishna) ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ನೇಹಾ ಶೆಟ್ಟಿ, ನಟಿ ಅಂಜಲಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು.
ಇದೇ ಸಂದರ್ಭದಲ್ಲಿ ಫೋಟೋಗೆ ಪೋಸ್ ನೀಡಲು ಬಾಲಯ್ಯ ಪಕ್ಕಕ್ಕೆ ಸರಿದಿದ್ದು, ನಟಿ ಅಂಜಲಿ ಮಾತ್ರ ಪಕ್ಕಕ್ಕೆ ಸರಿದಿಲ್ಲ. ನಟ ಬಾಲಯ್ಯ ಪಕ್ಕಕ್ಕೆ ಸರಿಯುವಂತೆ ಹೇಳಿದರೂ ಅದು ಕೇಳಿಸದ ನಟಿ ಅಂಜಲಿ ಅಲ್ಲಿಯೇ ನಿಂತಿದ್ದರು. ಇದರಿಂದ ಆಕ್ರೋಶಗೊಂಡ ನಟ ಬಾಲಕೃಷ್ಣ ಏಕಾಏಕಿ ನಟಿಯನ್ನು ತಳ್ಳಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ತುಂಬಿದ ಸಭೆಯಲ್ಲಿ ''ಎಣ್ಣೆ'' ಹೊಡೆದ ಬಾಲಯ್ಯ?
ಇದೇ ಸಮಾಂರಭದಲ್ಲಿ ನಟ ಬಾಲಕೃಷ್ಣ ಮದ್ಯಪಾನ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ನಟ ಕುಳಿತಿದ್ದ ಕುರ್ಚಿಯ ಕೆಳಗೆ ನೀರಿನ ಬಾಟಲಿ ಹಿಂದೆ ಮದ್ಯವಿರುವ ಬಾಟಲಿ ಕೂಡ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಹೀಗಾಗಿ ಅವರು ಸಮಾರಂಭದಲ್ಲಿ ಕುಡಿದು ಭಾಗಿಯಾಗಿದ್ದರು ಎಂದು ಆರೋಪಿಸಲಾಗುತ್ತಿದೆ. ಬಾಲಯ್ಯ ಅವರ ವೇದಿಕ ಮೇಲಿನ ಅನುಚಿತ ವರ್ತನೆಗೆ ಅವರು ಮದ್ಯಪಾನ ಮಾಡಿದ್ದೇ ಕಾರಣ ಎಂದೂ ಹೇಳಲಾಗುತ್ತಿದೆ.
ವಿಡಿಯೊದಲ್ಲಿ ಏನಿದೆ?
ವೈರಲ್ ಆದ ವಿಡಿಯೊದಲ್ಲಿ ನಂದಮೂರಿ ಕೃಷ್ಣ ಅವರು ಚೈತನ್ಯ ಅವರ ಮುಂಬರುವ ತೆಲುಗು ಆಕ್ಷನ್ ಚಿತ್ರ ಗ್ಯಾಂಗ್ಸ್ ಆಫ್ ಗೋದಾವರಿಯ ಪ್ರಚಾರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಬಿಳಿ ಶೆರ್ವಾನಿ ಧರಿಸಿದ್ದರು. ವೇದಿಕೆಯ ಮೇಲೆ ನೇಹಾ ಶೆಟ್ಟಿ ಮತ್ತು ಅಂಜಲಿ ಅಕ್ಕ ಪಕ್ಕ ನಿಂತಿದ್ದರು. ನೇಹಾ ಅವರಿಗೆ ನಯವಾಗಿ ಪಕ್ಕಕ್ಕೆ ಸರಿಯಲು ಕೇಳುತ್ತಾರೆ.
ಕೆಲವು ಕ್ಷಣಗಳ ನಂತರ, ಬಾಲಯ್ಯ ಅವರು ಅಂಜಲಿಯನ್ನು ದೂರ ತಳ್ಳುತ್ತಾರೆ, ಬಹುತೇಕ ನಟಿ ಅಂಜಲಿ ಬಿದ್ದೇ ಬಿಡುವಂತಿದ್ದರು. ಆಗ ನೇಹಾ ಅವರು ಅಂಜಲಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ನಟಿಯರು ತಮಾಷೆಯಾಗಿ ಬಾಲಯ್ಯ ನೋಡಿ ನಕ್ಕಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಾಲಯ್ಯ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಬರುತ್ತಿವೆ.
ಬಾಲಯ್ಯ ಅನುಚಿತ ವರ್ತನೆ ಇದೇ ಮೊದಲೇನಲ್ಲ!
ಇನ್ನು ನಟ ಬಾಲಯ್ಯ ಅವರ ಅನುಚಿತ ವರ್ತನೆ ಇದೇ ಮೊದಲೇನಲ್ಲ.. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ತಮ್ಮ ಅನುಚಿತ ವರ್ತನೆಯಿಂದಲೇ ಬಾಲಯ್ಯ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ. ಕಾರ್ಯಕ್ರಮಗಳಲ್ಲಿ ತಮ್ಮನ್ನು ಕಾಣಲು ಬಂದ ಅಭಿಮಾನಿಗಳಿಗೇ ಕಪಾಳ ಮೋಕ್ಷ ಮಾಡಿದ್ದರು. ಆದರೆ ಅಭಿಮಾನಿಗಳು ಕೂಡ ಅವರ ವಿರುದ್ಧ ಸಿಟ್ಟುಗೊಳ್ಳದೇ ತಮ್ಮ ನೆಚ್ಚಿನ ನಟ ತಮ್ಮನ್ನು ತಾಕಿದರು ಎಂದು ಖುಷಿಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ