ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಚುಟು ಚುಟು ನಟಿ ಆಶಿಕಾ ರಂಗನಾಥ್ ಅವರನ್ನು ವ್ಯಕ್ತಿಯೊರ್ವ ಎಳೆದಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಟಿ ಆಶಿಕಾ ರಂಗನಾಥ್ ರನ್ನು ಎಳೆದಾಡಿದ ವ್ಯಕ್ತಿ ವಿಡಿಯೋ ವೈರಲ್, ಅಸಲಿಗೆ ಆಗಿದ್ದೇನು?
ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಚುಟು ಚುಟು ನಟಿ ಆಶಿಕಾ ರಂಗನಾಥ್ ಅವರನ್ನು ವ್ಯಕ್ತಿಯೊರ್ವ ಎಳೆದಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಘಟನೆ ಶೂಟಿಂಗ್ ಅಥವಾ ಕಾರ್ಯಕ್ರಮದಲ್ಲಿ ಎಲ್ಲದರೂ ಆಗಿದಿಯಾ ಎಂದು ಜನರು ಗೊಂದಲಕ್ಕೆ ಬಿದ್ದಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದು ಇದು ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದ ಸಂದರ್ಭದಲ್ಲಿ ಆದ ಘಟನೆ ಎಂದು ಆದರೆ ತಪ್ಪಾಗಿ ಪ್ರಚಾರವಾಗುತ್ತಿದೆ ಎಂದು ಹೇಳಿದ್ದರು.
ಇದೀಗ ಘಟನೆ ಕುರಿತು ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಹಾಕಿದ್ದು ಜೂನಿಯರ್ ಕಲಾವಿದರೊಬ್ಬರು ಈ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವೈರಲ್ ಮಾಡಿದ್ದಾರೆ. ಇದು ನಿರ್ದೇಶಕ ಹಾಗೂ ಚಿತ್ರತಂಡದ ಗಮನಕ್ಕೂ ಬಂದಿದೆ ಎಂದು ಹೇಳಿದ್ದಾರೆ.