
ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಬಾರಿ ತಾಯಿಯಾಗಿದ್ದು, ಇಂದು (ಫೆ.21) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
1 / 7

2020ರ ಆಗಸ್ಟ್‌ನಲ್ಲಿ ಕರೀನಾ ಅವರು ಗರ್ಭಿಣಿ ವಿಚಾರ ಬಹಿರಂಗವಾಗಿತ್ತು. ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಗೆ ಕರೀನಾ ದಾಖಲಾಗಿದ್ದ ಕರೀನಾ ಇಂದು ಮುಂಜಾನೆ 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. (ಟ್ವಿಟರ್ ಚಿತ್ರ)
2 / 7

ಈಗಾಗಲೇ ಕರೀನಾ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ತೈಮೂರ್ ಎಂಬ ಮಗನಿದ್ದಾರೆ. (ಟ್ವಿಟರ್ ಚಿತ್ರ)
3 / 7

2016ರಲ್ಲಿ ಕರೀನಾ ತೈಮೂರ್ ಗೆ ಜನ್ಮ ನೀಡಿದ್ದರು. ತೈಮೂರ್ ಯಾವ ಮಟ್ಟಿಗೆ ಖ್ಯಾತಿ ಗಳಿಸಿದ್ದ ಎಂದರೆ ಆತನನ್ನೇ ಹೋಲುವ ಗೊಂಬೆಗಳನ್ನೂ ಕೂಡ ತಯಾರಿಸಿ ಮಾರಾಟ ಮಾಡಲಾಗಿತ್ತು.
4 / 7

ಅಲ್ಲದೆ ತೈಮೂರ್ ಹೆಸರು ಕೂಡ ಭಾರಿ ವಿವಾದ, ಸುದ್ದಿ-ವಿವಾದಕ್ಕೆ ಗ್ರಾಸವಾಗಿತ್ತು.
5 / 7

ತೈಮೂರ್ ಭಾರತವನ್ನು ಆಕ್ರಮಿಸಿದ ಟರ್ಕಿಶ್ ರಾಜನ ಹೆಸರಾಗಿದ್ದು, ಈ ಹೆಸರು ಮಗುವಿಗೆ ಇಡಬಾರದಿತ್ತು ಎಂದು ಟ್ವಿಟರ್ ನಲ್ಲಿ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿತ್ತು.
6 / 7

ಇನ್ನು ಕರೀನಾ ಅವರು ಆಮೀರ್ ಖಾನ್ ಅವರ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಶೂಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದರು.
7 / 7
Stay up to date on all the latest ಸಿನಿಮಾ news