ಈ ಗ್ರಾಮೀಣ ವಿದ್ಯಾರ್ಥಿಗಳಿಗೆ ಇ-ಕಲಿಕೆ ಎಂದರೆ ಬೆಟ್ಟ-ಗುಡ್ಡ ಹತ್ತಿಳಿಯುವ ಸಾಹಸ!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಕೇಳಬೇಕೆಂದರೆ ಮನೆಯ ಹತ್ತಿರ ಇರುವ ಬೆಟ್ಟ-ಗುಡ್ಡ ಹತ್ತಿ ಹೋಗಬೇಕು. ಎಲ್ಲಿ ನೆಟ್ ವರ್ಕ್ ಸಿಗುತ್ತದೆ ಎಂದು ನೋಡಿಕೊಂಡು ಅಲ್ಲಿ ಕುಳಿತು ಮೊಬೈಲ್ ನಲ್ಲಿ ಪಾಠ ಕೇಳಬೇಕು.
ಶಿಕ್ಷಣ ತರಗತಿ ಕೊಠಡಿಗೆ ಸೀಮಿತವಾಗಿಲ್ಲ ಎಂಬ ಮಾತಿದೆ. ಈಗ ಕೊರೋನಾ ಕಾರಣದಿಂದ ಒಂದು ವರ್ಷದಿಂದ ಶಾಲೆ-ಕಾಲೇಜುಗಳು ತರಗತಿಯಲ್ಲಿ ಭೌತಿಕವಾಗಿ ನಡೆಯುತ್ತಿಲ್ಲ. ಬದಲಿಗೆ ನಡೆಯುತ್ತಿರುವುದು ಆನ್ ಲೈನ್ ಕ್ಲಾಸು.

Updated on
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕೋವಿಡ್ ಎರಡನೇ ಅಲೆಯ ಮಧ್ಯೆ ಆನ್ ಲೈನ್ ಪಾಠ ಕೇಳಬೇಕೆಂದರೆ ಮನೆಯ ಹತ್ತಿರ ಇರುವ ಬೆಟ್ಟ-ಗುಡ್ಡ ಹತ್ತಿ ಹೋಗಬೇಕು. ಎಲ್ಲಿ ನೆಟ್ ವರ್ಕ್ ಸಿಗುತ್ತದೆ ಎಂದು ನೋಡಿಕೊಂಡು ಅಲ್ಲಿ ಕುಳಿತು ಮೊಬೈಲ್ ನಲ್ಲಿ ಪಾಠ ಕೇಳಬೇಕು. ನಿತ್ಯವೂ ವಿದ್ಯಾರ್ಥಿಗಳಿಗೆ ಇಲ್ಲಿ ಸವಾಲ

ಸಾಗರ ತಾಲ್ಲೂಕಿನ ತುಮರಿ, ಬೈಕೋಡು, ಕಾಲೂರು, ಕರೂರು, ಕುಡುರೂರು ಮತ್ತು ಇನ್ನೂ ಹಲವು ಕುಗ್ರಾಮಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ 2-3 ಕಿಲೋ ಮೀಟರ್ ಬೆಟ್ಟದ ಪ್ರದೇಶ ಬಿಂಚ್ ಗೂಡಿಗೆ ಟ್ರಕ್ ರೀತಿ ಹತ್ತಿಹೋಗಿ ಮೊಬೈಲ್ ನಲ್ಲಿ ಪಾಠ ಕೇಳಿ ಇಳಿದು ಬರಬೇಕು.

ತಾಲ್ಲೂಕಿನ ಗ್ರಾಮಗಳಲ್ಲಿ ಹೀಗೆ ಪಾಠ ಕೇಳುವ ಸುಮಾರು 40 ಮಕ್ಕಳಿದ್ದಾರೆ. ಅಷ್ಟು ದೂರ ಹೋಗುವಾಗ ಮಕ್ಕಳನ್ನು ಮಾತ್ರ ಕಳುಹಿಸುವುದು ಹೇಗೆ ಎಂಬ ಭಯದಿಂದ ಪೋಷಕರು ಕೂಡ ಹಲವು ಬಾರಿ ಮಕ್ಕಳ ಜೊತೆ ಬೆಟ್ಟಗುಡ್ಡಕ್ಕೆ ಹೋಗುತ್ತಾರೆ.

ಬೆಟ್ಟದ ಮೇಲಿನ ಹಾದಿಯು ಕಾಡಿನ ಕಿರಿದು ಹಾದಿಯಾಗಿದೆ, ಹಾವು-ಸರೀಸೃಪಗಳು ಹರಿದಾಡುವ ದುರ್ಗಮ ಹಾದಿಯೂ ಹೌದು.

ಮಲೆನಾಡು ಭಾಗಗಳಲ್ಲಿ ಹೇಳಿಕೇಳಿ ಈಗ ಮಳೆಗಾಲ. ಸಾಕಷ್ಟು ಮಳೆ ಸುರಿಯುತ್ತದೆ. ಮಳೆ ಬರುವಾಗ ಕೊಡೆ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಪಾಠ ಕೇಳುವುದು ವಿದ್ಯಾರ್ಥಿಗಳಿಗೆ ಅನಿವಾರ್ಯ.

ಹತ್ತು ವರ್ಷಗಳಿಂದ ಒಂದು ನಿರ್ದಿಷ್ಟ ಮೊಬೈಲ್ ಟವರ್ ಹಾಕಿಸಿಕೊಡಿ ಎಂದು ನಾವು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ನಮ್ಮ ಮಕ್ಕಳಿಗೆ ಈಗ ಕಷ್ಟವಾಗುತ್ತಿದೆ ಎಂದು ಸ್ಥಳೀಯ ಗುರು ಹೇಳುತ್ತಾರೆ.

ಶಾಸಕರಿಗೆ, ಸಂಸದರಿಗೆ ಈ ಬಗ್ಗೆ ಅನೇಕ ಸಲ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com