ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಭೀಕರ ಬಸ್ ಅಪಘಾತ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಬಸ್ ಉರುಳಿ ಬಿದ್ದು ಕನಿಷ್ಠ ಐವರು ಸಾವಿಗೀಡಾಗಿ 25ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆಯ ಸಮೀಪ ಶನಿವಾರ ಬೆಳಗ್ಗೆ ವೈ ಎನ್ ಹೊಸಕೋಟೆಯಿಂದ ಪಾವಗಡಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ಸುಮಾರು 30 ಮಂದಿ ಗಾಯಗೊಂಡಿದ್ದಾರೆ.

Updated on
ಖಾಸಗಿ ಬಸ್ ನಲ್ಲಿ ಮಿತಿಮೀರಿದ ಪ್ರಯಾಣಿಕರು ಬಸ್ಸಿನ ಬಾಗಿಲಿನಲ್ಲಿ ನಿಂತು, ಟಾಪ್ ನಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದಾಗ ಚಾಲಕ ವೇಗವಾಗಿ ಚಲಾಯಿಸಿ ಪಳವಳ್ಳಿ ಕಟ್ಟೆಯ ತಿರುವಿನಲ್ಲಿ ಪಲ್ಟಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳದಿಂದ ಚಾಲಕ-ನಿರ್ವಾಹಕ ಪಾರಾರಿಯಾಗಿದ್ದಾರೆ.

ಬಸ್ ಅಪಘಾತದ ನಂತರ ದಿಗ್ಬ್ರಾಂತರಾದ ಪ್ರಯಾಣಿಕರು

ಮರದ ಕೊಂಬೆಯೊಳಗೆ ಸಿಲುಕಿದ ಜನರನ್ನು ರಕ್ಷಿಸುತ್ತಿರುವುದು

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಗಳು ಸೇರಿದ್ದಾರೆ. ಬಸ್ಸಿನಿಂದ ಬಿದ್ದ ತೀವ್ರತೆಗೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಪ್ರಯಾಣಿಕರು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಕಾಣಬಹುದು.

ಎಸ್ ವಿಟಿ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಪಲ್ಟಿಯಾಗಿ ಬಿದ್ದಿರುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com