ಕರ್ನಾಟಕದ ಐತಿಹಾಸಿಕ ಸ್ಥಳಗಳು

ಬಾದಾಮಿ: ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ.

Updated on
ಮಂಜ್ರಾಬಾದ್ ಕೋಟೆ: ಮಂಜ್ರಾಬಾದ್ ಕೋಟೆಯನ್ನು ಪಲ್ಲದ ದೊರೆ ನಿರ್ಮಿಸಿದ್ದ, ಟಿಪ್ಪು ಸುಲ್ತಾನ್ ಕಾಲಾವಧಿಯಲ್ಲಿ ಇದು ಜೈಲಾಗಿ ಮಾರ್ಪಾಡಾಗಿತ್ತು. ಸಕಲೇಶಪುರದ ಹೊರ ವಲಯದಲ್ಲಿ ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿರುವ ಮಂಜ್ರಾಬಾದ್ ಕೋಟೆ, ಆಕರ್ಷಣೀಯ ಪ್ರವಾಸಿ ತಾಣವೂ ಹೌದು.

ಮಿರ್ಜಾನ್ ಕೋಟೆ: ಉತ್ತರಕನ್ನಡದ ಗೋಕರ್ಣದಿಂದ ಸುಮಾರು ೧೧ ಕಿಮೀ ದೂರ ಹಾಗು ಹೆದ್ದಾರಿಯಿಂದ ೦.೫ ಕಿಮೀ ದೂರದಲ್ಲಿ ಮಿರ್ಜಾನ್ ಇದೆ. ನಾವು ಕಾಣಬಹುದಾದ ಉತ್ತಮ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯೂ ಒಂದು.

ಮೈಸೂರು ಅರಮನೆ: ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ.

ಪಟ್ಟದಕಲ್ಲು: ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗು೦ಪಿಗೆ ಪಟ್ಟದಕಲ್ಲು ಪ್ರಸಿದ್ಧ.

ಶ್ರವಣಬೆಳಗೊಳ: ಏಷ್ಯ ಖಂಡದಲ್ಲಿಯೇ ಅತಿ ಎತ್ತರದ(57 ಅಡಿ)ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ.

ಸತ್ಯಾಗ್ರಹ ಸೌಧ:
ಸತ್ಯಾಗ್ರಹ ಸೌಧ:

ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ 1938 ರಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು ಮತ್ತು ಮ್ಯೆಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ನಡೆಯಿತು. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಸೌಧ ಪ್ರಮುಖ ಐತಿಹಾಸಿಕ ಸ್ಥಳವಾಗಿದೆ.

ಶ್ರೀರಂಗಪಟ್ಟಣ: ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಪ್ರಮುಖ ಐತಿಹಾಸಿಕ, ಪಟ್ಟಣ, ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಟಿಪ್ಪು ಸುಲ್ತಾನ ಹಾಗು ಹೈದರಾಲಿ ಯವರ ಕಾಲದಲ್ಲಿ ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಟಿಪ್ಪು ಅರಮನೆ: ಬೆಂಗಳೂರಿನ ಕೋಟೆಯ ಆವರಣದಲ್ಲಿ 1791ರಲ್ಲಿ ನವಾಬ್ ಹೈದರಾಲಿ ಖಾನ್ ಕಾಲದಲ್ಲಿ ಮರ ಹಾಗೂ ಗಾರೆಗಚ್ಚಿನ ಈ ಅರಮನೆಯ ನಿರ್ಮಾಣ ಪ್ರಾರಂಭಗೊಂಡು ತದನಂತರ ೧೭೯೧ರಲ್ಲಿ ಟಿಪ್ಪುಸುಲ್ತಾನನ ಕಾಲದಲ್ಲಿ ಪೂರ್ಣಗೊಂಡಿತು.

ಲಾಲ್ ಬಾಗ್: ಕೆಂಪು ತೋಟ ಅಥವಾ ಲಾಲ್‌ಬಾಗ್ ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು.

ಕೋಲಾರ ಚಿನ್ನದ ಗಣಿ: ಬಂಗಾರಪೇಟೆ ತಾಲೂಕಿನ ಗಣಿಗಾರಿಕೆ ಪ್ರದೇಶ, ದಶಕದ ಹಿಂದೆ ಕೋಲಾರ ಚಿನ್ನದ ಗಣಿಯನ್ನು ಮುಚ್ಚಲಾಗಿತ್ತು.

ಕೆಳದಿ: ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ ೮ ಕಿ.ಮೀ. ದೂರದಲ್ಲಿರುವ ಗ್ರಾಮ. ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ.

ಐಹೊಳೆ: ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರ.

ಬೇಲೂರು: ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಭೋಗನಂದೀಶ್ವರ ದೇವಾಲಯ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಲ್ಪಕಲೆ ಎಂದೊಡನೆ ಚೋಳರ ಕಾಲದ ನಂದಿಯ ಭೋಗನಂದೀಶ್ವರ ದೇವಾಲಯ ನೆನಪಾಗುತ್ತದೆ. ಇದೂ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಒಂದು

ಚಿತ್ರದುರ್ಗ: ಇತಿಹಾಸದಲ್ಲಿ ಮಹತ್ತರ ಮೌಲ್ಯವಿರುವ ಚಿತ್ರದುರ್ಗ ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಒನಕೆ ಓಬವ್ವ, ಮದಕರಿ ನಾಯಕ  ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.

ಗಜೆಂದ್ರಗಡ ಕೋಟೆ: ಗಜೇಂದ್ರಗಡ ಕೋಟೆ ಗದಗ ಜಿಲ್ಲೆಯಲ್ಲಿದೆ. ಬಾದಾಮಿ ಚಾಲುಕ್ಯ ಸಾಮ್ರಾಜ್ಯದ ಇತಿಹಾಸ ಹೊಂದಿದ್ದು ರಾಜ್ಯದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ.

ಗೋಲ್ ಗುಂಬಜ್: ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು.

ಹಳೇಬೀಡು: ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು ಮತ್ತು ಐತಿಹಾಸಿಕ ಹಿನ್ನೆಲೆಯಿರುವ ಸ್ಥಳ. ಶಿಲ್ಪಕಲೆಗೆ ಹೆಸರಾಗಿದೆ.

ಹಂಪೆ: ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪಾ' ಎಂದಿತ್ತು.

ಬೆಂಗಳೂರು ಕೋಟೆ: ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ಬೆ೦ಗಳೂರಿನಲ್ಲಿ 1537ರಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ನಂತರ 1761  ರಲ್ಲಿ ಹೈದರ್ ಅಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದ

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com