ಫೋಟೋ ಕ್ಲಿಕ್ ಡಿಸೆಂಬರ್ 2015

ಹ್ಯಾಪಿ ನ್ಯೂ ಇಯರ್: 2016ಕ್ಕೆ ಕ್ಷಣಗಣೆನೆ ಆರಂಭವಾಗಿದ್ದು, ಗುರುವಾರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೊರ್ದಾಬಾದ್ ಬಾಲಕಿಯರು ಪೋಸ್ ನೀಡಿದ್ದು ಹೀಗೆ.
ಹ್ಯಾಪಿ ನ್ಯೂ ಇಯರ್: 2016ಕ್ಕೆ ಕ್ಷಣಗಣೆನೆ ಆರಂಭವಾಗಿದ್ದು, ಗುರುವಾರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೊರ್ದಾಬಾದ್ ಬಾಲಕಿಯರು ಪೋಸ್ ನೀಡಿದ್ದು ಹೀಗೆ.
Updated on
<b>2016ಕ್ಕೆ ಸ್ವಾಗತ...</b> ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಗರ್ತಾಲದ ಶಾಲಾ  ವಿದ್ಯಾರ್ಥಿಗಳು 2016ಅನ್ನು ರಚಿಸಿದ್ದು ಹೀಗೆ.
2016ಕ್ಕೆ ಸ್ವಾಗತ... ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಗರ್ತಾಲದ ಶಾಲಾ  ವಿದ್ಯಾರ್ಥಿಗಳು 2016ಅನ್ನು ರಚಿಸಿದ್ದು ಹೀಗೆ.
<b>ಕೇಕ್</b> <b>ಕಲಾಂ</b>... ಬೆಂಗಳೂರಿನ ಸಂತ ಜೋಸೆಫ್ ಇಂಡಿಯನ್ ಹೈಸ್ಕೂಲ್ ನಲ್ಲಿ ಏರ್ಪಡಿಸಿರುವ ಕೇಕ್ ಪ್ರದರ್ಶನದಲ್ಲಿ ಮಾಜಿ ರಾಷ್ಟ್ರಮಾತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂರ 50 ಕೆಜಿ ತೂಕದ ಕೇಕ್ ಗಮನ ಸೆಳೆಯಿತು.
ಕೇಕ್ ಕಲಾಂ... ಬೆಂಗಳೂರಿನ ಸಂತ ಜೋಸೆಫ್ ಇಂಡಿಯನ್ ಹೈಸ್ಕೂಲ್ ನಲ್ಲಿ ಏರ್ಪಡಿಸಿರುವ ಕೇಕ್ ಪ್ರದರ್ಶನದಲ್ಲಿ ಮಾಜಿ ರಾಷ್ಟ್ರಮಾತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂರ 50 ಕೆಜಿ ತೂಕದ ಕೇಕ್ ಗಮನ ಸೆಳೆಯಿತು.
<b>ಗೂಳಿ ಕಾಳಗ... </b>ಕೊಲಂಬಿಯಾದ ಕಾಲಿ ನಗರದಲ್ಲಿ ನಡೆಯುತ್ತಿರುವ 58ನೇ ಕಾಲಿ ಉತ್ಸವ ದಲ್ಲಿನ ಗೂಳಿ ಕಾಳಗದ ಬೆಚ್ಚಿ ಬೀಳಿಸುವ ದೃಶ್ಯವಿದು. ಬುಲ್ ಫೈಟರ್ ಸೆಬಾಸ್ಟಿಯನ್ ರಿಟ್ಟರ್ ಅವರನ್ನು ಗೂಳಿಯೊಂದು ನೆಲಕ್ಕುರುಳಿಸುತ್ತಿದೆ. ಈ ಉತ್ಸವವು ಕಾಲಿಯಲ್ಲಿ ನಡೆಯುವ ಅತ್ಯಂತ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದ
ಗೂಳಿ ಕಾಳಗ... ಕೊಲಂಬಿಯಾದ ಕಾಲಿ ನಗರದಲ್ಲಿ ನಡೆಯುತ್ತಿರುವ 58ನೇ ಕಾಲಿ ಉತ್ಸವ ದಲ್ಲಿನ ಗೂಳಿ ಕಾಳಗದ ಬೆಚ್ಚಿ ಬೀಳಿಸುವ ದೃಶ್ಯವಿದು. ಬುಲ್ ಫೈಟರ್ ಸೆಬಾಸ್ಟಿಯನ್ ರಿಟ್ಟರ್ ಅವರನ್ನು ಗೂಳಿಯೊಂದು ನೆಲಕ್ಕುರುಳಿಸುತ್ತಿದೆ. ಈ ಉತ್ಸವವು ಕಾಲಿಯಲ್ಲಿ ನಡೆಯುವ ಅತ್ಯಂತ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದ
<b>ಆಫ್ಘಾನಿಸ್ತಾನ ಸಂಸತ್ ಬ್ಲಾಕ್ ಕಟ್ಟಕ್ಕೆ ಅಟಲ್ ಹೆಸರು...</b> ಆಫ್ಘಾನಿಸ್ತಾನದ ಕಾಬೂಲ್​ನಲ್ಲಿ ಭಾರತ ನಿರ್ಮಿಸಿರುವ ನೂತನ ಸಂಸತ್ ಕಟ್ಟಡದ ಅಟಲ್ ಬ್ಲಾಕ್​ನ್ನು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಆಫ್ಘಾನಿಸ್ತಾನ ಸಂಸತ್ ಬ್ಲಾಕ್ ಕಟ್ಟಕ್ಕೆ ಅಟಲ್ ಹೆಸರು... ಆಫ್ಘಾನಿಸ್ತಾನದ ಕಾಬೂಲ್​ನಲ್ಲಿ ಭಾರತ ನಿರ್ಮಿಸಿರುವ ನೂತನ ಸಂಸತ್ ಕಟ್ಟಡದ ಅಟಲ್ ಬ್ಲಾಕ್​ನ್ನು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
<b>ಪ್ರವೀಣ್ ಗೋಡ್ಕಿಂಡಿ ರಾಗ ರಂಗೋಲಿ...</b> ಮೂಡಬಿದಿರೆ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ 2015 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಡಾ. ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್, ಪ್ರವೀಣ್ ಗೋಡ್ಕಿಂಡಿ ರಾಗರಂಗೋಲಿ ಕಾರ್ಯಕ್ರಮ ನಡೆ
ಪ್ರವೀಣ್ ಗೋಡ್ಕಿಂಡಿ ರಾಗ ರಂಗೋಲಿ... ಮೂಡಬಿದಿರೆ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ 2015 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಡಾ. ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್, ಪ್ರವೀಣ್ ಗೋಡ್ಕಿಂಡಿ ರಾಗರಂಗೋಲಿ ಕಾರ್ಯಕ್ರಮ ನಡೆ
ವಿಶ್ವ ಶಾಂತಿಗಾಗಿ... ಕ್ರಿಸ್ ಮಸ್ ಅಂಗವಾಗಿ ಪುರಿ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಬೀಚ್ ನಲ್ಲಿ 45 ಅಡಿ ಎತ್ತರದ ಸಂತಾ ಕ್ಲಾಸ್ ಅನ್ನು ನಿರ್ಮಿಸಿ, ವಿಶ್ವ ಶಾಂತಿ ಎಂಬ ಸಂದೇಶ ಬರೆದಿದ್ದಾರೆ.
ವಿಶ್ವ ಶಾಂತಿಗಾಗಿ... ಕ್ರಿಸ್ ಮಸ್ ಅಂಗವಾಗಿ ಪುರಿ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಬೀಚ್ ನಲ್ಲಿ 45 ಅಡಿ ಎತ್ತರದ ಸಂತಾ ಕ್ಲಾಸ್ ಅನ್ನು ನಿರ್ಮಿಸಿ, ವಿಶ್ವ ಶಾಂತಿ ಎಂಬ ಸಂದೇಶ ಬರೆದಿದ್ದಾರೆ.
<b>ಎಂಜಿಆರ್‌ಗೆ ಪುಷ್ಪ ನಮನ...</b> ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ 28ನೇ ಪುಣ್ಯತಿಥಿ ಅಂಗವಾಗಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಗುರುವಾರ ಚೆನ್ನೈನಲ್ಲಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಎಂಜಿಆರ್‌ಗೆ ಪುಷ್ಪ ನಮನ... ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ 28ನೇ ಪುಣ್ಯತಿಥಿ ಅಂಗವಾಗಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಗುರುವಾರ ಚೆನ್ನೈನಲ್ಲಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
<b>ಸಾಂತಾ ಕ್ಲಾಸ್ ವೇಷಧಾರಿ...</b> ದಕ್ಷಿಣ ಆಫ್ರಿಕಾದ ದರ್ಬನ್ ನಲ್ಲಿರುವ ಸಾಗರ ಜೈವಿಕ ಉದ್ಯಾನವ ಡೈವರ್ ಮಂಗಳವಾರ ಸಾಂತಾ ಕ್ಲಾಸ್ ವೇಷ ಧರಿಸಿ, ಜಲಚರಗಳಿಗೆ ಆಹಾರ ನೀಡುತ್ತಿರುವುದು.
ಸಾಂತಾ ಕ್ಲಾಸ್ ವೇಷಧಾರಿ... ದಕ್ಷಿಣ ಆಫ್ರಿಕಾದ ದರ್ಬನ್ ನಲ್ಲಿರುವ ಸಾಗರ ಜೈವಿಕ ಉದ್ಯಾನವ ಡೈವರ್ ಮಂಗಳವಾರ ಸಾಂತಾ ಕ್ಲಾಸ್ ವೇಷ ಧರಿಸಿ, ಜಲಚರಗಳಿಗೆ ಆಹಾರ ನೀಡುತ್ತಿರುವುದು.
<b>ಬಿಜೆಪಿ ಸಂಸದನ ವಿಕಟ ನೋಟ...</b> ಸಂಸತ್ತಿನ ಮುಂದೆ ಮಾಧ್ಯಮಗಳ ಜತೆ ಬಿಜೆಪಿ ಸಂಸದ ಕೀರ್ತಿ ಆಜಾದ್ ಪ್ರತಿಕ್ರಿಯಿಸಿದ್ದು ಹೀಗೆ...
ಬಿಜೆಪಿ ಸಂಸದನ ವಿಕಟ ನೋಟ... ಸಂಸತ್ತಿನ ಮುಂದೆ ಮಾಧ್ಯಮಗಳ ಜತೆ ಬಿಜೆಪಿ ಸಂಸದ ಕೀರ್ತಿ ಆಜಾದ್ ಪ್ರತಿಕ್ರಿಯಿಸಿದ್ದು ಹೀಗೆ...
<b>ಚೆಲುವೆಯರ ವಯ್ಯಾರ... </b>ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ 43 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಸುಂದರಿಯರು. ಸ್ವಿಮ್ ಸೂಟ್ ಹಾಗೂ ಆಲ್ಕೋಹಾಲ್ ಮುಕ್ತ ಸ್ಪರ್ಧೆಯಲ್ಲಿ ಇವರು ರ್ಯಾಂಪ್ ಮೇಲೆ ಹೆಜ್ಜೆಹಾಕಿದ್ದು ಹೀಗೆ.
ಚೆಲುವೆಯರ ವಯ್ಯಾರ... ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ 43 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಸುಂದರಿಯರು. ಸ್ವಿಮ್ ಸೂಟ್ ಹಾಗೂ ಆಲ್ಕೋಹಾಲ್ ಮುಕ್ತ ಸ್ಪರ್ಧೆಯಲ್ಲಿ ಇವರು ರ್ಯಾಂಪ್ ಮೇಲೆ ಹೆಜ್ಜೆಹಾಕಿದ್ದು ಹೀಗೆ.
ಕ್ರಿಸ್ ಮಸ್ ಗೆ ರೆಡಿ...6 ತಿಂಗಳ ಲಿಟ್ಲ್ ಪ್ರಿನ್ಸೆಸ್ ಚಾರ್ಲೆಟ್‍ಗೆ ಇದು ಮೊದಲನೇ ಕ್ರಿಸ್‍ಮಸ್. ಇಂಗ್ಲೆಂಡಿನ ಪ್ರಿನ್ಸ್ ವಿಲಿಯಂ ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡ ಫೋಟೋವನ್ನು ಇನ್‍ಸ್ಟಗ್ರಾಮ್ನಲ್ಲಿ ಹಾಕ್ಕೊಂಡಿದ್ದಾರೆ.
ಕ್ರಿಸ್ ಮಸ್ ಗೆ ರೆಡಿ...6 ತಿಂಗಳ ಲಿಟ್ಲ್ ಪ್ರಿನ್ಸೆಸ್ ಚಾರ್ಲೆಟ್‍ಗೆ ಇದು ಮೊದಲನೇ ಕ್ರಿಸ್‍ಮಸ್. ಇಂಗ್ಲೆಂಡಿನ ಪ್ರಿನ್ಸ್ ವಿಲಿಯಂ ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡ ಫೋಟೋವನ್ನು ಇನ್‍ಸ್ಟಗ್ರಾಮ್ನಲ್ಲಿ ಹಾಕ್ಕೊಂಡಿದ್ದಾರೆ.
<b>ಕೇರಳದಲ್ಲಿ ಜಟಾಯುವಿನ ಪಾರ್ಕ್...</b> ರಾಮಾಯಣದಲ್ಲಿ ರಾವಣನ ದಾಳಿಗೆ ಸಿಲುಕಿದ ಜಟಾಯು ಪಕ್ಷಿ ಮೃತಪಟ್ಟ ಸ್ಥಳ ಎನ್ನಲಾದ ಜಾಗದಲ್ಲೇ ಕೇರಳ ಸರ್ಕಾರ ಬೃಹತ್‌ ಪ್ರವಾಸಿ ಕೇಂದ್ರವೊಂದನ್ನು ನಿರ್ಮಿಸುತ್ತಿದ್ದು ಅದಕ್ಕೆ ಜಟಾಯು ಪಾರ್ಕ್ ಎಂದು ಹೆಸರಿಡಲಾಗಿದೆ.
ಕೇರಳದಲ್ಲಿ ಜಟಾಯುವಿನ ಪಾರ್ಕ್... ರಾಮಾಯಣದಲ್ಲಿ ರಾವಣನ ದಾಳಿಗೆ ಸಿಲುಕಿದ ಜಟಾಯು ಪಕ್ಷಿ ಮೃತಪಟ್ಟ ಸ್ಥಳ ಎನ್ನಲಾದ ಜಾಗದಲ್ಲೇ ಕೇರಳ ಸರ್ಕಾರ ಬೃಹತ್‌ ಪ್ರವಾಸಿ ಕೇಂದ್ರವೊಂದನ್ನು ನಿರ್ಮಿಸುತ್ತಿದ್ದು ಅದಕ್ಕೆ ಜಟಾಯು ಪಾರ್ಕ್ ಎಂದು ಹೆಸರಿಡಲಾಗಿದೆ.
<b>ಎಲ್ಲಾ ಸರಿ ಹೋಗುತ್ತೆ ಬಿಡಿ...</b> ಅರುಣಾಚಲ ಪ್ರದೇಶದ ವಿವಾದ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಬಳಿಕ ರಾಷ್ಟ್ರಪತಿ ಭವನದಿಂದ ಹೊರಬರುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ಕಾಂಗ
ಎಲ್ಲಾ ಸರಿ ಹೋಗುತ್ತೆ ಬಿಡಿ... ಅರುಣಾಚಲ ಪ್ರದೇಶದ ವಿವಾದ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಬಳಿಕ ರಾಷ್ಟ್ರಪತಿ ಭವನದಿಂದ ಹೊರಬರುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ಕಾಂಗ
ದೆಹಲಿಯಲ್ಲಿ ಈಗ ವಾಯು ಮಾಲಿನ್ಯ ನಿಯಂತ್ರಣದ್ದೇ ಸದ್ದು. ಈ ಸದ್ದುಗದ್ದಲದ ನಡುವೆಯೇ ರಾಜ್ಯಸಭಾ ಸದಸ್ಯ ಕೆಟಿಎಸ್ ತುಳಸಿ ಅವರು ಮಂಗಳವಾರ ಸಂಸತ್ ಕಲಾಪಕ್ಕೆ ಬಂದದ್ದು ಸೈಕಲ್ ನಲ್ಲಿ. ಇದಿಷ್ಟೇ ಅಲ್ಲ. ದಿನವೂ ಅವರು ಸೈಕಲ್ ನಲ್ಲೇ ಬರುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ದೆಹಲಿಯಲ್ಲಿ ಈಗ ವಾಯು ಮಾಲಿನ್ಯ ನಿಯಂತ್ರಣದ್ದೇ ಸದ್ದು. ಈ ಸದ್ದುಗದ್ದಲದ ನಡುವೆಯೇ ರಾಜ್ಯಸಭಾ ಸದಸ್ಯ ಕೆಟಿಎಸ್ ತುಳಸಿ ಅವರು ಮಂಗಳವಾರ ಸಂಸತ್ ಕಲಾಪಕ್ಕೆ ಬಂದದ್ದು ಸೈಕಲ್ ನಲ್ಲಿ. ಇದಿಷ್ಟೇ ಅಲ್ಲ. ದಿನವೂ ಅವರು ಸೈಕಲ್ ನಲ್ಲೇ ಬರುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
<b>ಸಂಸತ್ ನಲ್ಲಿ ಅಶ್ರುವಾಯು...</b>ಇದು ಸಂಸದರ ಪುಂಡಾಟಕ್ಕೆ ಮತ್ತೊಂದು ನಿದರ್ಶನ. ಕೊಸೊವೋ ರಾಜಧಾನಿ ಪ್ರಿಸ್ಟೀನಾದಲ್ಲಿ ಸೋಮವಾರ ಸಂಸತ್ ಭವನದೊಳಗೆ ಪ್ರತಿಪಕ್ಷ ಸಂಸದರು ಅಶ್ರುವಾಯು ಪ್ರಯೋಗಿಸಿದ ಪರಿಯಿದು. ಸೆರ್ಬಿಯಾ ಮತ್ತು ಮಾಂಟೆನೆಗ್ರೋ ಜತೆಗಿನ ಒಪ್ಪಂದಗಳನ್ನು ಕೈಬಿಡಬೇಕು ಎನ್ನುವುದು ಪ್ರತಿಪಕ್ಷಗಳು ಆಗ್ರಹ
ಸಂಸತ್ ನಲ್ಲಿ ಅಶ್ರುವಾಯು...ಇದು ಸಂಸದರ ಪುಂಡಾಟಕ್ಕೆ ಮತ್ತೊಂದು ನಿದರ್ಶನ. ಕೊಸೊವೋ ರಾಜಧಾನಿ ಪ್ರಿಸ್ಟೀನಾದಲ್ಲಿ ಸೋಮವಾರ ಸಂಸತ್ ಭವನದೊಳಗೆ ಪ್ರತಿಪಕ್ಷ ಸಂಸದರು ಅಶ್ರುವಾಯು ಪ್ರಯೋಗಿಸಿದ ಪರಿಯಿದು. ಸೆರ್ಬಿಯಾ ಮತ್ತು ಮಾಂಟೆನೆಗ್ರೋ ಜತೆಗಿನ ಒಪ್ಪಂದಗಳನ್ನು ಕೈಬಿಡಬೇಕು ಎನ್ನುವುದು ಪ್ರತಿಪಕ್ಷಗಳು ಆಗ್ರಹ
<b>ಪ್ರೀತಿಯ ಮುತ್ತು... </b>ಬಾಲಿವುಡ್ ನಟ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಅವರ ನಿವಾಸದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ, ಪ್ರೀತಿಯಿಂದ ತಲೆಗೆ ಮುತ್ತಿಟ್ಟಿದ್ದು ಹೀಗೆ.
ಪ್ರೀತಿಯ ಮುತ್ತು... ಬಾಲಿವುಡ್ ನಟ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಅವರ ನಿವಾಸದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ, ಪ್ರೀತಿಯಿಂದ ತಲೆಗೆ ಮುತ್ತಿಟ್ಟಿದ್ದು ಹೀಗೆ.
<b>ಹದ್ದಿನ ಸಾಲು...</b> ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಮಾಂಸದಂಗಡಿಯೊಂದರ ಮುಂದೆ ಆಹಾರಕ್ಕಾಗಿ ಸಾಲುಗಟ್ಟಿ ಕುಳಿತಿದ್ದ ಹದ್ದುಗಳು. <br>
ಹದ್ದಿನ ಸಾಲು... ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಮಾಂಸದಂಗಡಿಯೊಂದರ ಮುಂದೆ ಆಹಾರಕ್ಕಾಗಿ ಸಾಲುಗಟ್ಟಿ ಕುಳಿತಿದ್ದ ಹದ್ದುಗಳು.
<b>ಹುಟ್ಟು ಹಬ್ಬದ ಶುಭಾಶಯ...</b> ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ತಮ್ಮ 80ನೇ ಜನ್ಮದಿನ ಆಚರಿಸಿಕೊಂಡ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಶುಭಾಶಯ ಕೋರಿದರು.
ಹುಟ್ಟು ಹಬ್ಬದ ಶುಭಾಶಯ... ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ತಮ್ಮ 80ನೇ ಜನ್ಮದಿನ ಆಚರಿಸಿಕೊಂಡ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಶುಭಾಶಯ ಕೋರಿದರು.
ತಾಪಮಾನ ಶೃಂಗದಲ್ಲಿ ಎನ್ ಜಿಒಗಳ ಕಾರ್ಯಕರ್ತರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಅಮೆರಿಕ ಅಧ್ಯಕ್ಷ ಒಬಾಮ, ಫ್ರಾನ್ಸ್ ಅಧ್ಯಕ್ಷ ಫ್ರಾನ್ಸ್ ನ ಒಲಾಂದ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿಕೊಂಡು ಪ್ರತಿಭಟಿಸಿದರು.
ತಾಪಮಾನ ಶೃಂಗದಲ್ಲಿ ಎನ್ ಜಿಒಗಳ ಕಾರ್ಯಕರ್ತರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಅಮೆರಿಕ ಅಧ್ಯಕ್ಷ ಒಬಾಮ, ಫ್ರಾನ್ಸ್ ಅಧ್ಯಕ್ಷ ಫ್ರಾನ್ಸ್ ನ ಒಲಾಂದ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿಕೊಂಡು ಪ್ರತಿಭಟಿಸಿದರು.
<b>ಸೂಪರ್ ಸ್ಟಂಟ್...</b>ಆರ್ವಿು ಸರ್ವಿಸ್ ಕೋರ್​ನ 255ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ಯೋಧರೊಬ್ಬರು ಬೈಕ್ ನಿಂದ ಟ್ಯೂಬ್ ಲೈಟ್​ಗಳನ್ನು ಪುಡಿ ಪುಡಿ ಮಾಡಿ ಸಾಹಸ ಮೆರೆದರು.
ಸೂಪರ್ ಸ್ಟಂಟ್...ಆರ್ವಿು ಸರ್ವಿಸ್ ಕೋರ್​ನ 255ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ಯೋಧರೊಬ್ಬರು ಬೈಕ್ ನಿಂದ ಟ್ಯೂಬ್ ಲೈಟ್​ಗಳನ್ನು ಪುಡಿ ಪುಡಿ ಮಾಡಿ ಸಾಹಸ ಮೆರೆದರು.
<b>ಜೋತು ಪ್ರಯಾಣ...</b> ಹಿರಿಯೂರು ತಾಲೂಕಿನ ಗೌನಹಳ್ಳಿ, ಗುಡಿಹಳ್ಳಿ ಮಾರ್ಗದಲ್ಲಿ ಏಳೆಂಟು ಜನ ಪ್ರಯಾಣಿಸುವಂಥ ಕ್ಯಾಬ್ ನಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಇತರೆ ಪ್ರಯಾಣಿಕರು ಜೋತು ಬಿದ್ದು ಪ್ರಯಾಣಿಸುತ್ತಿರುವುದು.
ಜೋತು ಪ್ರಯಾಣ... ಹಿರಿಯೂರು ತಾಲೂಕಿನ ಗೌನಹಳ್ಳಿ, ಗುಡಿಹಳ್ಳಿ ಮಾರ್ಗದಲ್ಲಿ ಏಳೆಂಟು ಜನ ಪ್ರಯಾಣಿಸುವಂಥ ಕ್ಯಾಬ್ ನಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಇತರೆ ಪ್ರಯಾಣಿಕರು ಜೋತು ಬಿದ್ದು ಪ್ರಯಾಣಿಸುತ್ತಿರುವುದು.
<b>ಗಜ ರೋಷ... </b>ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ತಾರಳ ಜಲಾಶಯದ ಪಕ್ಕದಲ್ಲಿ 4 ಆನೆಗಳು ಬೀಡು ಬಿಟ್ಟಿವೆ. ಆನೆ ಹಿಂಡನ್ನು ಓಡಿಸುವ ವೇಳೆ ಎರಡು ಬೈಕ್ ಮತ್ತು ಆಟೋವನ್ನು ಎತ್ತಿ ಬಿಸಾಡಿ ಅವು ಮುಂದೆ ಸಾಗಿದವು.
ಗಜ ರೋಷ... ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ತಾರಳ ಜಲಾಶಯದ ಪಕ್ಕದಲ್ಲಿ 4 ಆನೆಗಳು ಬೀಡು ಬಿಟ್ಟಿವೆ. ಆನೆ ಹಿಂಡನ್ನು ಓಡಿಸುವ ವೇಳೆ ಎರಡು ಬೈಕ್ ಮತ್ತು ಆಟೋವನ್ನು ಎತ್ತಿ ಬಿಸಾಡಿ ಅವು ಮುಂದೆ ಸಾಗಿದವು.
<b>ಪುಷ್ಪ ನಮನ...</b> ವಿಧಾನಸೌಧದಲ್ಲಿ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಆಂಜನೇಯ ಇದ್ದರು.
ಪುಷ್ಪ ನಮನ... ವಿಧಾನಸೌಧದಲ್ಲಿ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಆಂಜನೇಯ ಇದ್ದರು.
ರಿಯಾಲಿಟಿ ಶೋವೊಂದರಲ್ಲಿ ಖ್ಯಾತ ಬಾಲಿವುಡ್ ನಟರಾದ ಧರ್ಮೇಂದ್ರ ಮತ್ತು ಅಮಿತಾಬ್ ಬಚ್ಚನ್ ಜತೆಯಾಗಿ ಕಾಣಿಸಿಕೊಂಡದ ಪರಿ.
ರಿಯಾಲಿಟಿ ಶೋವೊಂದರಲ್ಲಿ ಖ್ಯಾತ ಬಾಲಿವುಡ್ ನಟರಾದ ಧರ್ಮೇಂದ್ರ ಮತ್ತು ಅಮಿತಾಬ್ ಬಚ್ಚನ್ ಜತೆಯಾಗಿ ಕಾಣಿಸಿಕೊಂಡದ ಪರಿ.
<b>ಸಂಭ್ರಮದ ಕ್ಷಣ... </b>ವಾಷಿಂಗ್ಟನ್ ನಲ್ಲಿ ನಡೆದ ರಾಷ್ಟ್ರೀಯ ಕ್ರಿಸ್ ಮಸ್ ಟ್ರೀ ವಿದ್ಯುದಲಂಕಾರ ಸಂಭ್ರಮದಲ್ಲಿ ಪುತ್ರಿ ಸಾಷಾ ಹಾಗೂ ಮಿಶೆಲ್ ರ ತಾಯಿ ಮಾರಿಯನ್ ರಾಬಿನ್ಸನ್ ಜೊತೆ ಹರಟೆಯಲ್ಲಿ ನಿರತರಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ.
ಸಂಭ್ರಮದ ಕ್ಷಣ... ವಾಷಿಂಗ್ಟನ್ ನಲ್ಲಿ ನಡೆದ ರಾಷ್ಟ್ರೀಯ ಕ್ರಿಸ್ ಮಸ್ ಟ್ರೀ ವಿದ್ಯುದಲಂಕಾರ ಸಂಭ್ರಮದಲ್ಲಿ ಪುತ್ರಿ ಸಾಷಾ ಹಾಗೂ ಮಿಶೆಲ್ ರ ತಾಯಿ ಮಾರಿಯನ್ ರಾಬಿನ್ಸನ್ ಜೊತೆ ಹರಟೆಯಲ್ಲಿ ನಿರತರಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ.
<b>ನಮ್ಮದು ಸುಖಿ ಸಂಸಾರ...! </b>ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬಂದ ಕೋಟಿ ಕುಟುಂಬ. ಚಿತ್ರ-ಅನುರಾಗ ಬಸರಾಜ್ <br>
ನಮ್ಮದು ಸುಖಿ ಸಂಸಾರ...! ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬಂದ ಕೋಟಿ ಕುಟುಂಬ. ಚಿತ್ರ-ಅನುರಾಗ ಬಸರಾಜ್
<b>ನೀರಲ್ಲಿ ಕೊಚ್ಚಿ ಹೋದ ವಿಮಾನ...</b> ಚೆನ್ನೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿದ್ದ ವಿಮಾನವೊಂದು ಕೊಚ್ಚಿ ಹೋಗಿ, ಮರಕ್ಕೆ ಅಪ್ಪಳಿಸಿರುವ ದೃಶ್ಯ ಪ್ರವಾಹದ ತೀವ್ರತೆಯನ್ನು ಬಿಂಬಿಸುತ್ತಿದೆ.
ನೀರಲ್ಲಿ ಕೊಚ್ಚಿ ಹೋದ ವಿಮಾನ... ಚೆನ್ನೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿದ್ದ ವಿಮಾನವೊಂದು ಕೊಚ್ಚಿ ಹೋಗಿ, ಮರಕ್ಕೆ ಅಪ್ಪಳಿಸಿರುವ ದೃಶ್ಯ ಪ್ರವಾಹದ ತೀವ್ರತೆಯನ್ನು ಬಿಂಬಿಸುತ್ತಿದೆ.
<b>ನದಿಯಂತಾದ ಚೆನ್ನೈ...</b> ಚೆನ್ನೈನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ನದಿಯಂತಾದ ಚೆನ್ನೈ... ಚೆನ್ನೈನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
<b>ಕೆಂಡ ತುಳಿದು ಭಕ್ತಿ ಮೆರೆದರು...</b> ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಬಳಿಯ ಹಲಕರ್ಟಿ ವೀರಭದ್ರೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಭಾನುವಾರ ಮಧ್ಯರಾತ್ರಿ ಭಕ್ತರು ಅಗ್ನಿ ತುಳಿದು ತಮ್ಮ ಭಕ್ತಿ ಸೇವೆ ಸಮರ್ಪಿಸಿದರು.
ಕೆಂಡ ತುಳಿದು ಭಕ್ತಿ ಮೆರೆದರು... ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಬಳಿಯ ಹಲಕರ್ಟಿ ವೀರಭದ್ರೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಭಾನುವಾರ ಮಧ್ಯರಾತ್ರಿ ಭಕ್ತರು ಅಗ್ನಿ ತುಳಿದು ತಮ್ಮ ಭಕ್ತಿ ಸೇವೆ ಸಮರ್ಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com