2002ರ ಗುಜರಾತ್ ಹಿಂಸಾಚಾರದ ಚಿತ್ರಗಳು

ಅದು 2002, ಫೆಬ್ರವರಿ 28ನೇ ತಾರೀಖು. ಮುಸಲ್ಮಾನರ ಸಂಖ್ಯೆ ಅಧಿಕವಾಗಿರುವ ಗೋಧ್ರಾ ರೈಲು ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರನ್ನು ಹೊತ್ತು ಚಲಿಸುತ್ತಿದ್ದ ಸಬರ್ಮತಿ ರೈಲಿನ ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ 57 ಜನರು ಸಾವನ್ನಪ್ಪಿದ್ದರು.

Updated on
ಅಹಮದಾಬಾದ್ ಹೈಕೋರ್ಟ್ ಇಂದು ಅಂತಿಮ ತೀರ್ಪು ನೀಡಿ 24 ಮಂದಿ ಅಪರಾಧಿಗಳೆಂದು ತೀರ್ಪು ನೀಡಿದೆ. 11 ಜನರ ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ.

ಆಶಿಶ್ ಕೇತನ್ ಎಂಬ ಪತ್ರಕರ್ತರೊಬ್ಬರು ನಡೆಸಿದ ರಹಸ್ಯ ಕಾರ್ಯಾಚರಣೆ ಮೂಲಕ ಬಲಪಂಥೀಯ ಹಿಂದೂ ಕಾರ್ಯಕರ್ತರು ಮುಸಲ್ಮಾನರನ್ನು ಸಾಮೂಹಿಕವಾಗಿ ಕೊಂದು ಹಾಕಿದ್ದರು ಎಂದು ತಿಳಿಸಿದ್ದರು. ಆದರೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಕುಟುಕು ಕಾರ್ಯಾಚರಣೆಯೂ ನೆರವಾಗಲಿಲ್ಲ.

ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಆರ್.ಬಿ.ಶ್ರೀಕುಮಾರ್ 172 ಪುಟಗಳ ಸ್ಫೋಟಕ ಪುರಾವೆಗಳನ್ನು ನೀಡಿ, ಅಂದಿನ ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ಸರ್ಕಾರದ ಪ್ರಚೋದನೆಯಿಂದ ಗೋಧ್ರಾ ಹತ್ಯಾಕಾಂಡದ ನಂತರ ಮುಸ್ಲಿಂ ವಿರೋಧಿ ದಂಗೆಯನ್ನು ನಡೆಸಲಾಯಿತು ಎಂದು 2004 ಆಗಸ್ಟ್ 18ರಂದು ಹೇಳಿದ್ದರು.

ಗುಜರಾತ್ ಗಲಭೆ ಕುರಿತಂತೆ ಸಂಸತ್ತಿನಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷಗಳ ನಡುವೆ ಸತತ 16 ಗಂಟೆಗಳ ಕಾಲ ಚರ್ಚೆ, ವಾಗ್ವಾದಗಳು ನಡೆದವು. ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಹಮದಾಬಾದ್ ನ ಗಲಭೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂದರ್ಭ.

ಆಗ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದೂ ಸಮುದಾಯದವರು ಮರು ಜಾಗೃತಿ ಹೆಮ್ಮೆ ಎಂಬ ಹೆಸರಿನಲ್ಲಿ ಮೆರವಣಿಗೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದರು.

ಕೋಮು ಗಲಭೆಯಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಅಹಮದಾಬಾದ್ ನಲ್ಲಿ ಶಿಬಿರವೊಂದರಲ್ಲಿ ತಾತ್ಕಾಲಿಕ ನೆಲೆ ಕಂಡಿರುವುದು.

ಘರ್ಷಣೆಯಲ್ಲಿ ಗಾಯಗೊಂಡು ಅಹಮದಾಬಾದ್ ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನಿಗೆ ಆಹಾರ ತಿನ್ನಿಸುತ್ತಿರುವ ಅವನ ಮನೆಯವರು. ಶಾರೂಕ್ ಎಂಬ ಮುಸಲ್ಮಾನ ಬಾಲಕನ ಮನೆಯನ್ನು ಪೆಟ್ರೋಲ್ ಹಚ್ಚಿ ಸುಟ್ಟು ಹಾಕಲಾಗಿತ್ತು.

ಗಲಭೆಯಿಂದ ಬಚಾವಾಗಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಅಲ್ಪಸ್ವಲ್ಪ ವಸ್ತುಗಳನ್ನು ಕಟ್ಟಿಕೊಂಡು ಬೇರೆಡೆಗೆ ತೆರಳುತ್ತಿರುವ ವ್ಯಕ್ತಿ.

ಗಲಭೆ ಸಂದರ್ಭದಲ್ಲಿ ತಮ್ಮ ರಕ್ಷಣೆಗೆ ಕ್ಷಿಪ್ರ ಕಾರ್ಯ ಪಡೆಯ ಸದಸ್ಯರನ್ನು ಮನವಿ ಮಾಡಿಕೊಳ್ಳುತ್ತಿರುವ ಅಹಮದಾಬಾದ್ ನ ಬಾಪುನಗರ ನಾಗರಿಕರು.

ಮಾರ್ಚ್ 7, 2002ರಂದು ಅಹಮದಾಬಾದ್ ನಲ್ಲಿ ತನ್ನ ಮನೆಯ ಭಗ್ನಾವಶೇಷದ ಎದುರು ಉಳಿದಿದ್ದ ವಸ್ತುಗಳನ್ನು ಸರಿಪಡಿಸುತ್ತಿರುವ ಮಹಿಳೆ.

ಜನವಸತಿ ಪ್ರದೇಶದಲ್ಲಿ ನಡೆಯುತ್ತಿದ್ದ ಗುಂಪಿನ ಘರ್ಷಣೆ ಚದುರಿಸಲು ಕಟ್ಟಡದ ಮೇಲಿಂದ ಗುಂಡು ಹಾರಿಸುತ್ತಿರುವ ಪೊಲೀಸರು.

ಅಹಮದಾಬಾದ್ ನ ಮಿಲ್ಲತ್ ನಗರ್ ಜಿಲ್ಲೆಯಲ್ಲಿ ಕಣ್ಣಿಗೆ ಕಾಣಿಸದ ಗುಂಪಿನ ಮೇಲೆ ಗನ್ ತೋರಿಸುತ್ತಿರುವ ಪೊಲೀಸರು.

ಗೋಧ್ರಾ ಹತ್ಯಾಕಾಂಡದ ನಂತರದ ಕೋಮು ಘರ್ಷಣೆಯಲ್ಲಿ ಹಾನಿಗೀಡಾದ, ಬೆಂಕಿಗಾಹುತಿಯಾದ ಅಂಗಡಿ-ಮುಂಗಟ್ಟುಗಳ ಮುಂದೆ ನಿಂತಿರುವ ಪೊಲೀಸ್ ಸಿಬ್ಬಂದಿ.

ಚಿತ್ರದಲ್ಲಿ ಅಹಮದಾಬಾದ್ ನ ಬಾಪುನಗರದಲ್ಲಿ ಮಾರ್ಚ್ 1ರಂದು ಮುಸಲ್ಮಾನರು ಗುಂಪು ಘರ್ಷಣೆ ವೇಳೆ ಕಲ್ಲು ಎಸೆಯುತ್ತಿರುವುದನ್ನು ಕಾಣಬಹುದು.

ಗುಜರಾತ್ ನಲ್ಲಿ ಮಾರ್ಚ್ 1, 2002ರಲ್ಲಿ ಭಾರೀ ಕೋಮು ಘರ್ಷಣೆ ಉಂಟಾಯಿತು. ಈ ಕೆಳಗಿನ ಚಿತ್ರಗಳೆಲ್ಲ ಗಲಭೆಯ ಚಿತ್ರಣವನ್ನು ನಿಮಗೆ ಕಟ್ಟಿಕೊಡುತ್ತದೆ. ಅಹಮದಾಬಾದ್ ನಲ್ಲಿ ನಡೆದ ಕೋಮು ಗಲಭೆಯಲ್ಲಿ ಹಿಂದೂ ಗುಂಪಿನವರು ಮುಸ್ಲಿಂ ಗುಂಪಿನ ವಿರುದ್ಧ ಕತ್ತಿ ಝಳಪಿಸುತ್ತಿರುವುದನ್ನು ನೋಡಬಹುದು.

ಈ ಘಟನೆಯಲ್ಲಿ ರೈಲಿನ ಎಸ್-6 ಬೋಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಗೋಧ್ರಾ ಇರುವುದು ಅಹಮದಾಬಾದ್ ನಿಂದ 142 ಕಿಲೋ ಮೀಟರ್ ದೂರ ದಕ್ಷಿಣ ದಿಕ್ಕಿನಲ್ಲಿ. ಇದು ಗುಜರಾತ್ ರಾಜ್ಯದಲ್ಲಿ ಹಿಂದೂ-ಮುಸಲ್ಮಾನರ ನಡುವೆ ವ್ಯಾಪಕ ಕೋಮು ಘರ್ಷಣೆಗೆ ನಾಂದಿ ಹಾಡಿತು. ಸುಮಾರು 600 ಮಂದಿ ಸಾವನ್ನಪ್ಪಿದರು.

ಗುಜರಾತ್ ನ ಜನಾಂಗೀಯ ಗಲಭೆ ಸಂದರ್ಭದಲ್ಲಿ ಹಲವು ಮಹಿಳೆಯರ ವಿರುದ್ಧ ಅತ್ಯಾಚಾರವೆಸಗಿದ ಆರೋಪವೂ ಕೇಳಿಬಂದಿತ್ತು. ಕೋಮು ಗಲಭೆಯನ್ನು ಖಂಡಿಸಿ, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಮಹಿಳೆಯರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com