ಕೋವಿನ್ ಪೋರ್ಟಲ್ ನಲ್ಲಿ ಲಸಿಕೆಗಾಗಿ ನೋಂದಣಿ ಮಾಡುವುದು ಹೇಗೆ: 6 ಸರಳ ಹಂತಗಳ ಮಾಹಿತಿ ಇಲ್ಲಿದೆ!

ಕೋವಿಡ್-19 ಲಸಿಕೆಯನ್ನು ಜನಸಾಮಾನ್ಯರಿಗೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಕೋವಿನ್ ಪೋರ್ಟಲ್ ನಲ್ಲಿ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 
http://www.cowin.gov.in ಪೋರ್ಟಲ್ ನಲ್ಲಿ ಲಾಗ್ ಇನ್ ಆಗಿ ನೋಂದಣಿ ಮಾಡಿಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಿ

Updated on
ಮೊಬೈಲ್ ನಂಬರ್ ನೋಂದಾಯಿಸಿ, ಮೊಬೈಲ್ ಗೆ ಬರುವ ಒನ್ ಟೈಮ್ ಪಾಸ್ವರ್ಡ್ ನ್ನು ನಮೂದಿಸಿ, ವೆರಿಫೈ ಆಯ್ಕೆಯನ್ನು ಕ್ಲಿಕ್ ಮಾಡಿ.

ಈ ಪ್ರಕ್ರಿಯೆ ಬಳಿಕ ನೋಂದಣಿ ಪುಟ ತೆರೆದುಕೊಳ್ಳಲಿದೆ. ಈ ಪುಟದಲ್ಲಿ ವೈಯಕ್ತಿಕ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್ ನಂತಹ ಗುರುತಿನ ಚೀಟಿಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಅವುಗಳಲ್ಲಿ ನಮೂದಿಸಿರುವಂತೆಯೇ ಹೆಸರನ್ನು ಪೋರ್ಟಲ್ ನಲ್ಲಿ ನಮೂದಿಸಬೇಕಾಗುತ್ತದೆ.

ನೋಂದಾಯಿತ ಹೆಸರಿನ ಜೊತೆಗೆ ಆಕ್ಷನ್ ಎಂಬ ಕಾಲಮ್ ನಲ್ಲಿ ಕ್ಯಾಲೆಂಡರ್ ಹಾಗೂ ಬಿನ್ ಎಂಬ ಆಯ್ಕೆಗಳು ಲಭ್ಯವಿರಲಿದ್ದು ಒಂದೇ ನಂಬರ್ ನಿಂದ ಒಬ್ಬರಿಗಿಂತ ಹೆಚ್ಚು ಫಲಾನುಭವಿಗಳ ಹೆಸರನ್ನು ಸೇರಿಸಬಹುದಾಗಿದೆ.

ಕ್ಯಾಲೆಂಡರ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಲಸಿಕೆಗಾಗಿ ಸಮಯವನ್ನು ಕಾಯ್ದಿರಿಸಿ ಎಂಬ ಪೇಜ್ ಗೆ ರಿಡೈರೆಕ್ಟ್ ಆಗಲಿದೆ. ಇದರಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶ, ಜಿಲ್ಲೆ, ಬ್ಲಾಕ್ ನ್ನು ನಮೂದಿಸಿ.

http://www.cowin.gov.in ಮೂಲಕವೂ ಸ್ಥಳೀಯ ಲಸಿಕೆ ಕೇಂದ್ರಗಳನ್ನು ಹುಡುಕಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com