ಚಳಿಗಾಲದ ಅಧಿವೇಶನ: ಪ್ರಧಾನಿ ಮೋದಿ-ಮಾಜಿ ಪ್ರಧಾನಿ ದೇವೇಗೌಡ ಮಹತ್ವದ ಭೇಟಿ

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಮಧ್ಯೆ ಇಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವು ದೇವೇಗೌಡರ ಕೈ ಹಿಡಿದು ಕರೆತಂದು ಕುರ್ಚಿಯಲ್ಲಿ ಕೂರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ಸಹ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ದೇವೇಗೌಡರೊಂದಿಗೆ ಇರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಎಚ್​.ಡಿ.ದೇವೇಗೌಡರೂ ಕೂಡ ತಮ್ಮ ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

Updated on
ಈ ಕುರಿತು ಟ್ವೀಟ್ ಮಾಡಿರುವ ದೇವೇಗೌಡ ಅವರು, 'ನಾನಿಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದೆ. ಅವರು ನನಗಾಗಿ ಸಮಯಕೊಟ್ಟು, ಆತ್ಮೀಯವಾಗಿ ಮಾತನಾಡಿದರು ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಎಚ್​.ಡಿ.ದೇವೇಗೌಡರು, ಇದುವರೆಗೆ ನಾಲ್ಕೈದು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇನೆ. ಇದುವರೆಗೂ ನನ್ನ ಬಗ್ಗೆ ಮೋದಿಯವರು ಅಗೌರವವಾಗಿ ಮಾತನಾಡಿಲ್ಲ. ನಾನು ಅವರೆದುರು ಹೋದಾಗ ಯಾವುದೇ ಸಿಟ್ಟು, ರೋಷವನ್ನೂ ನನ್ನೆದುರು ತೋರಲಿಲ್ಲ.

ತುಂಬ ಪ್ರೀತಿಯಿಂದ ಮಾತನಾಡಿಸಿದ್ದಾರೆ.  ಎಲ್ಲ ಬಾರಿ ಭೇಟಿಯಾದಾಗಲೂ ನನ್ನನ್ನು ಚೆನ್ನಾಗಿಯೇ ಮಾತನಾಡಿಸಿದ್ದಾರೆ. ನನಗೆ ಮಂಡಿನೋವು ಇರುವುದರಿಂದ ಅವರೇ ಬಾಗಿಲವರೆಗೂ ಬಿಟ್ಟರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com