ಶಾಲೆ
ಶಾಲೆ

ಅನಧಿಕೃತ ಖಾಸಗಿ ಶಿಕ್ಷಣ ಸಂಸ್ಥೆ ರದ್ದುಗೊಳಿಸಿ

ನಗರದಲ್ಲಿರುವ ಅನಧಿಕೃತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಫೆಡರೇಷನ್ ಆಫ್ ...

ಬೆಂಗಳೂರು: ನಗರದಲ್ಲಿರುವ ಅನಧಿಕೃತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಫೆಡರೇಷನ್ ಆಫ್ ಇಂಡಿಪೆಂಡೆಂಟ್ ಸ್ಕೂಲ್ಸ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್.ಆರ್ ಶಿವರಾಮೇಗೌಡ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಇಟೆಕ್, ಆರ್ಕಿಡ್, ಕೇಂಬ್ರಿಡ್ಜ್ ಮುಂತಾದ ಹೊರರಾಜ್ಯದಿಂದ ಬಂದು ಬಿಟ್ಟಿರುವ ಸಿಬಿಎಸ್‌ಇ/ ಐಸಿಎಸ್‌ಇ ಅನಧಿಕೃತ ಶಾಲೆಗಳನ್ನು ತಕ್ಷಣವೇ ಮುಚ್ಚಬೇಕು. ನಾರಾಯಣ ಇಟೆಕ್ ರಾಜ್ಯದಲ್ಲಿ ಸುಮಾರು 19 ಶಾಲೆಗಳು, 10 ಪ.ಪೂ ಕಾಲೇಜುಗಳು ಸೇರಿ ಒಟ್ಟು 25 ಸಂಸ್ಥೆಗಳನ್ನು ಹೊಂದಿದ್ದು, ಅದರಲ್ಲಿ ಕೇವಲ 4 ಮಾತ್ರ ಪರವಾನಗಿ ಹೊಂದಿವೆ ಎಂದರು.

ಆರ್ಕಿಡ್, ವಿಬ್‌ಗ್ಯೋರ್ , ಕೇಂಬ್ರಿಡ್ಜ್ ನಂತಹ ಶಾಲೆಗಳಲ್ಲಿ ಅತ್ಯಾಚಾರ ಪ್ರಕರಣಗಳು ನಡೆದಾಗ ತನಿಖೆ ನಡೆಸಿ ಇದು ಅನಧಿಕೃತ ಶಾಲೆ ಎಂದು ಘೋಷಿಸಲಾಯಿತು. ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಯಿತು. ಇದೀಗ ಪೋಷಕರ ಒತ್ತಾಯದ ಮೇರೆಗೆ ಶಾಲೆಗಳು ಪುನಾರಂಭಗೊಳ್ಳುತ್ತಿವೆ. ಇದಕ್ಕೆ ಆಸ್ಪದ ಕೊಡದೇ ಮೊದಲೇ ಹೊರ ರಾಜ್ಯಗಳ ಶಾಲೆಗಳು ಮಾತ್ರವಲ್ಲದೆ ನಮ್ಮ ರಾಜ್ಯದ ಅನಧಿಕೃತ ಶಾಲೆಗಳನ್ನೂ ಮುಚ್ಚಿದ ನಂತರ ಪೋಷಕರು ಚಿಂತಿಸಬೇಕಾಗಿಲ್ಲ. ಅಂತಹ ಪೋಷಕರು ಚಿಂತಿಸಬೇಕಾಗಿಲ್ಲ. ಅಂತಹ ಮಕ್ಕಳನ್ನು ಅಧಿಕೃತ ಶಾಲೆಗಳಿಗೆ ಸೇರಿಸಿಕೊಳ್ಳಲು ರಾಜ್ಯ ಶಿಕ್ಷಣ ಸಂಸ್ಥೆಗಳು ಸಿದ್ಧವಾಗಿವೆ ಎಂದ ಅವರು, ಅನಧಿಕೃತ ಶಾಲೆಗಳನ್ನು ತೆರೆದಿರುವ ಇ ಟೆಕ್ನೋ, ಆರ್ಕಿಡ್ , ಕ್ರಿಸಾಲಿಸ್ ಶಾಲೆಗಳನ್ನು ಮುಚ್ಚಿಸುವಂತೆ ಆಗ್ರಹಿಸಿದರು.

Related Stories

No stories found.

Advertisement

X
Kannada Prabha
www.kannadaprabha.com