ಬಜೆಟ್ ಮರು ಮಂಡನೆ; ಮಾಜಿಗಳು ಕೆಂಡ

ಬಿಬಿಎಂಪಿಯ 2015- 16ನೇ ಸಾಲಿನ ಬಜೆಟ್ ಮರುಮಂಡಿ ಸುವ ತೀರ್ಮಾನವನ್ನು ಆಡಳಿತಾಧಿಕಾರಿ ವಿಜಯಭಾಸ್ಕರ್ ಕೈಗೊಳ್ಳುತ್ತಿದ್ದಂತೆ....
ಬಿಬಿಎಂಪಿ
ಬಿಬಿಎಂಪಿ
Updated on: 

ಬೆಂಗಳೂರು: ಬಿಬಿಎಂಪಿಯ 2015- 16ನೇ ಸಾಲಿನ ಬಜೆಟ್ ಮರುಮಂಡಿ ಸುವ ತೀರ್ಮಾನವನ್ನು ಆಡಳಿತಾಧಿಕಾರಿ ವಿಜಯಭಾಸ್ಕರ್ ಕೈಗೊಳ್ಳುತ್ತಿದ್ದಂತೆ,
ಬಿಜೆಪಿ ಮಾಜಿ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಗೆ ಶುಕ್ರವಾರ ಭೇಟಿ ನೀಟಿದ 30ಕ್ಕೂ ಅಧಿಕ ಬಿಜೆಪಿ ಮಾಜಿ ಸದಸ್ಯರು, ಬಜೆಟ್ ಮರುಮಂಡಿಸದಂತೆ ಆಡಳಿತಾಧಿಕಾರಿಗೆ ಒತ್ತಾ ಯಿಸಿದ್ದಾರೆ. ಅವೈಜ್ಞಾನಿಕ ಬಜೆಟ್ ಎಂದು ಕರೆದಿದ್ದು, ಸರ್ಕಾರ ತಿರಸ್ಕರಿಸುವ ಮುನ್ನವೇ ಮರುಮಂಡಿಸುವುದು ಸರಿ ಯಲ್ಲ. ಯಾ ವುದೇ ಹೊಸ ಘೋಷಣೆ ಗಳಿಲ್ಲದೆ ಬಿಜೆಪಿ ಆಡಳಿತ ಬಜೆಟ್ ರೂಪಿಸಿದ್ದು, ಇದರಲ್ಲಿ ಅವೈಜ್ಞಾನಿಕ ಅಂಶ ಗಳಿಲ್ಲ. ಹೀಗಾಗಿ ಬಜೆಟ್ ಮರು ಮಂಡಿಸುವ ಪ್ರಸ್ತಾಪವನ್ನು ಕೈ ಬಿಡಬಾರದೆಂದು ಎನ್.ಆರ್.ರಮೇಶ್ ನೇತ್ರತ್ವದಲ್ಲಿ ದಲ್ಲಿ ಮಾಜಿ ಸದಸ್ಯರು ಆಗ್ರಹಿಸಿದರು. ಈಗಾಗಲೇ ಮಂಡಿಸಿರುವ ಬಜೆಟ್ ಅನ್ನೇ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಬೇಕು. ವಿಭಜನೆ, ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳು ಹೈಕೋರ್ಟ್‍ನಲ್ಲಿರುವಾಗಲೇ ಬಜೆಟ್ ಮರು ಮಂಡಿಸುವುದು ನ್ಯಾಯಾಂಗ ನಿಂದನೆ ಯಾಗುತ್ತದೆ. ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳೂ  ರಾಜ
ಕಾರಣ ಮಾಡದೆ ಆಡಳಿತ ನಡೆಸ ಬೇಕು. ಬಜೆಟ್‍ನಲ್ಲಿ ಅವಾಸ್ತವ ಅಂಶಗಳು ಯಾವುದು ಎಂದು ಮೊದಲು ಸ್ಪಷ್ಟಪಡಿಸಿನಂತರ ಮರುಮಂಡನೆ ಮÁಡಬೇಕು.
ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಲ್ ಬಾಕಿ: ಮಾಜಿ ಸದಸ್ಯರ ಅಹವಾಲು ಆಲಿಸಿ ಮಾತನಾಡಿದ ವಿಜಯಭಾಸ್ಕರ್, ಬಜೆಟ್ ಅವಾಸ್ತವ ಎಂದುಹೇಳಿದ್ದೇನೆಯೇ ಹೊರತು ಅವೈಜ್ಞಾನಿಕ ಎಂದಿಲ್ಲ. ಬಿಬಿಎಂಪಿಯಲ್ಲಿ ಒಟ್ಟು 1,800 ಕೋಟಿ ಬಿಲ್ ಬಾಕಿಯಿದೆ. ಪೌರ ಕಾರ್ಮಿಕರಿಗೆ 3-6 ತಿಂಗಳ ವೇತನ ನೀಡಬೇಕಿದ್ದು, ಈ ಎಲ್ಲ ಬಿಲ್‍ಗಳನ್ನು ಪಾವತಿಸದಿದ್ದರೆ, ಅಧಿಕಾರಿಗಳ ವೇತನ ಕಡಿತಗೊಳಿಸಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ. ಮಳೆಗಾಲ ಹತ್ತಿರವಾಗಿದ್ದು,
ವೇತನ ನೀಡದಿ ರುವುದರಿಂದ ಕೆಲವು ನಿಯಂತ್ರಣ ಕೊಠಡಿಗಳು ಸ್ಥಗಿತವಾಗಿವೆ.ಈ ಎಲ್ಲ ಬಾಕಿ ಪಾವತಿಸಲು ಬಜೆಟ್ ಬದಲಿಸಬೇಕಿದೆ ಎಂದರು.

ತಂಡ ರಚನೆ
ಬಿಜೆಪಿ ಆಡಳಿತದ ಕೊನೆಯ ಬಜೆಟ್ `ವಾಸ್ತವ' ಎಂದೇ ಹೇಳಲಾಗಿದ್ದು, ಯಾವುದೇ ಹೊಸ ಯೋ ಜನೆಗಳಿಲ್ಲದೆ ಮಂಡಿಸ ಲಾಗಿತ್ತು. ಬಿಲ್ ಬಾಕಿ ಪಾವತಿಸ ಬೇಕಿರುವುದರಿಂದ
ಹಾಗೂ ಮಂಡಿಸಿರುವ ಬಜೆಟ್ ಅವಾಸ್ತವ ವಾಗಿರುವುದರಿಂದ, ಬಜೆಟ್‍ನಲ್ಲಿ ಬದಲಾವಣೆ ತಂದು ಮರು ಮಂಡಿಸಲು ಆಡಳಿತಾ„ಕಾರಿ ವಿಜಯ
ಭಾಸ್ಕರ್ ಸಿದ್ಧತೆ ನಡೆಸಿ ದ್ದಾರೆ. ಮರುಮಂಡಿಸುವ ಮುನ್ನ ಚರ್ಚಿಸಿ ವರದಿ ನೀಡಲು ರಚಿಸಿ ರುವ ಅಧಿಕಾರಿಗಳ ತಂಡ ವಾರ
ವೊಂದರಲ್ಲಿ ವರದಿ ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com