ಸಂಪುಟ ಕಾರ್ಯದರ್ಶಿಗಳಿಗಿಂತ ಒಂದು ರುಪಾಯಿ ಹೆಚ್ಚು ವೇತನ ನಿಗದಿಪಡಿಸಿ: ಸಂಸದನ ಆಗ್ರಹ

ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಮಾತ್ರ ಸರ್ಕಾರಕ್ಕೆ ಭಿನ್ನ ಸಲಹೆ ನೀಡಿದ್ದು ಸಂಸದರ ವೇತನವನ್ನು ಸಂಪುಟ ಕಾರ್ಯದರ್ಶಿಗಳಿಗಿಂತ ಒಂದು ರೂಪಾಯಿ ಹೆಚ್ಚಿಗೆ ನಿಗದಿಪಡಿಸಬೇಕೆಂದು ಹೇಳಿದ್ದಾರೆ.
ಸಂಸದ ನರೇಶ್ ಅಗರ್ವಾಲ್
ಸಂಸದ ನರೇಶ್ ಅಗರ್ವಾಲ್

ನವದೆಹಲಿ: ರಾಜ್ಯಸಭಾ ಸದಸ್ಯರು ತಮ್ಮ ವೇತನವನ್ನು ನಿಗದಿಪಡಿಸಲು ಪಾರದರ್ಶಕ ಕಾರ್ಯವಿಧಾನ ಪಾಲನೆಗೆ ಆಗ್ರಹಿಸಿದ್ದಾರೆ. ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಮಾತ್ರ ಸರ್ಕಾರಕ್ಕೆ ಭಿನ್ನ ಸಲಹೆ ನೀಡಿದ್ದು ಸಂಸದರ ವೇತನವನ್ನು ಸಂಪುಟ ಕಾರ್ಯದರ್ಶಿಗಳಿಗಿಂತ ಒಂದು ರುಪಾಯಿ ಹೆಚ್ಚು ನಿಗದಿಪಡಿಸಬೇಕೆಂದು ಹೇಳಿದ್ದಾರೆ.
ಸಂಸದರ ವೇತನದ ಬಗ್ಗೆ ಸಂಸದರ ವೇತನ ಸಮಿತಿ ವರದಿ ನೀಡಿದೆ. ಈ ಬಗ್ಗೆ ಮಾಧ್ಯಮಗಳು ಅತಿಯಾದ ಪ್ರಚಾರ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಸೂಪರ್ ಸಮಿತಿ ರಚಿಸುವುದಾಗಿ ಹೇಳಿದೆ.  ಆದರೆ ಸರ್ಕಾರ ಈ ಸಮಿತಿಯನ್ನು ರಚಿಸಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾದ ವೇತನ ಆಯೋಗ ಸಂಪುಟ ಕಾರ್ಯದರ್ಶಿಗಳಿಗೆ 2 .5 ಲಕ್ಷ ವೇತನವನ್ನು ನಿಗದಿಪಡಿಸಿದೆ. ಸಂಸದರ ವೇತನ ನಿಗದಿಯಲ್ಲೂ ಪಾರದರ್ಶಕತೆ ಇರಬೇಕು, ನಮಗೂ ಬೆಲೆ ಏರಿಕೆ ತಟ್ಟುತ್ತದೆ. ಆದ್ದರಿಂದ ಸಂಪುಟ ಕಾರ್ಯದರ್ಶಿಗಳಿಗಿಂತ ಕನಿಷ್ಠ ಒಂದು ರುಪಾಯಿ ಹೆಚ್ಚು ವೇತವನ್ನು ಸಂಸದರಿಗೆ ನೀಡಬೇಕು ಎಂದು ನರೇಶ್ ಅಗರ್ ವಾಲ್ ಅಭಿಪ್ರಾಯಪಟ್ಟಿದ್ದಾರೆ.
7 ನೇ ವೇತನ ಆಯೋಗದ ವರದಿ ಪ್ರಕಾರ ಕನಿಷ್ಠ ಸರ್ಕಾರಿ ವೇತನ 18 ,000 ಇರಬೇಕು, ಅತ್ಯುನ್ನತ ಮಟ್ಟದ ವೇತನ 2 .25 ಲಕ್ಷ ರೂಪಾಯಿ ಇರಬೇಕು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com