ಬಿಹಾರ ವಿಧಾನಸಭೆ ಸ್ಪೀಕರ್ ಆಗಿ ನಿತೀಶ್ ಕುಮಾರ್ ನಂಬಿಕಸ್ಥ ವಿಜಯ್ ಚೌಧರಿ ಆಯ್ಕೆ

ಜೆಡಿಯು ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಂಬಿಗಸ್ಥರಾಗಿರುವ ವಿಜಯ್‌ ಚೌಧರಿ ಅವರನ್ನು,ಬಿಹಾರ ವಿಧಾನಸಭೆಯ ಸ್ಪೀಕರ್‌ ಆಗಿ ...
ವಿಜಯ್ ಚೌಧರಿ
ವಿಜಯ್ ಚೌಧರಿ
Updated on: 

ಪಾಟ್ನಾ: ಜೆಡಿಯು ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಂಬಿಗಸ್ಥರಾಗಿರುವ ವಿಜಯ್‌ ಚೌಧರಿ ಅವರನ್ನು,ಬಿಹಾರ ವಿಧಾನಸಭೆಯ ಸ್ಪೀಕರ್‌ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ ಮಾತ್ರವಲ್ಲದೆ ವಿರೋಧ ಪಕ್ಷಗಳಾದ ಬಿಜೆಪಿ, ಹಿಂದುಸ್ಥಾನಿ ಆವಾಮ್‌ ಮೋರ್ಚಾ ಮತ್ತು ಎಲ್‌ಜೆಪಿ ಸಹಿತವಾಗಿ ಎಲ್ಲ ಪಕ್ಷಗಳ ಸದಸ್ಯರು ಚೌಧರಿ ಅವರ ಹೆಸರನ್ನು ಸ್ಪೀಕರ್‌ ಹುದ್ದೆಗೆ ಪ್ರಸ್ತಾವಿಸಿ ಅವಿರೋಧವಾಗಿ ಆಯ್ಕೆಗೆ ಸಮ್ಮತಿಸಿದರು.

16ನೇ ಬಿಹಾರ ವಿಧಾನಸಭೆಯ ಸ್ಪೀಕರ್‌ ಹುದ್ದೆಗೆ ನಡೆದ ಚುನಾವಣೆಯ ವೇಳೆ ಸಿಪಿಐ-ಎಂಎಲ್‌ ನ ಮೂವರು ಸದಸ್ಯರು ಸದನದಲ್ಲಿ ಗೈರಾಗಿದ್ದರು.

58 ವರ್ಷದ ವಿಜಯ್ ಚೌಧರಿ ಸತತವಾಗಿ 5ನೇ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. 1982 ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ವಿಜಯ್ ಚೌಧರಿ ನಂತರ ಜೆಡಿಯು ಸೇರ್ಪಡೆಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com