ರೈಲ್ವೆ ಯೋಜನೆಗೆ ಹಣಕೊಡಲ್ಲ

ಇನ್ನು ಮುಂದೆ ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಹಣ ಕೊಡಲು ಸಾಧ್ಯವಿಲ್ಲ. ಈ ಹಿಂದಿನ ರೈಲ್ವೆ...
ರೈಲ್ವೆ ಯೋಜನೆಗೆ ಹಣಕೊಡಲ್ಲ

ವಿಧಾನ ಪರಿಷತ್ತು: ಇನ್ನು ಮುಂದೆ ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಹಣ ಕೊಡಲು ಸಾಧ್ಯವಿಲ್ಲ. ಈ ಹಿಂದಿನ ರೈಲ್ವೆ ಯೋಜನೆಗಳಿಗೆ ಸುಮಾರು ರು. 10 ಸಾವಿರ ಕೋಟಿ ಕೊಡಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸದಸ್ಯರಾದ ಅಮರನಾಥ ಪಾಟೀಲ್ ಅವರು ರಾಜ್ಯದ ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿರುವ ಕುರಿತು ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ಸಿಎಂ, ನಮ್ಮ ನಿಲುವು ಸ್ಪಷ್ಟವಾಗಿದ್ದು ಮುಂದಿನ ದಿನಗಳಲ್ಲಿ ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಭೂಮಿಯನ್ನಷ್ಟೇ ಪುಕ್ಕಟೆಯಾಗಿ ನೀಡಲಾಗುತ್ತದೆ. ಪಾಲು ಕೊಡುವುದು ಅನಿವಾರ್ಯವಾದರೆ ಯೋಜನೆಯ ಮೂರನೇ ಎರಡು ಭಾಗವನ್ನು ಕೇಂದ್ರ ಭರಿಸಲಿ ಉಳಿದಿದ್ದನ್ನು ನಾವು ಕೊಡುತ್ತೇವೆ. ಈ ವಿಚಾರವನ್ನು ನೀತಿ ಆಯೋಗದ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮಂತ್ರಿಯವರಿಗೆ ತಿಳಿಸಲಾಗಿದೆ ಎಂದರು.

ಸದ್ಯ ಕಾರ್ಯಗತಗೊಳ್ಳುತ್ತಿರುವ ಯೋಜನೆಗೆ ರಾಜ್ಯದಿಂದ ಸಾಕಷ್ಟು ಹಣ ಕೊಡಬೇಕಾಗುತ್ತದೆ. ಸುಮಾರು 10 ಸಾವಿರ ಕೋಟಿ ನೀಡಬೇಕಾಗಬಹುದು. ಕಾಮಗಾರಿ ಯೋಜನೆ ನಿಗದಿತ ಸಮಯದಲ್ಲಿ ಮುಗಿಯಲಿಲ್ಲ ಎಂದಾದರೆ ಯೋಜನಾ ವೆಚ್ಚ ಹೆಚ್ಚಿ ಆಗ ಮತ್ತಷ್ಟು ಹಣ ನೀಡಬೇಕಾಗುತ್ತದೆ ಎಂದ ಅವರು, ಈಗ ನಡೆಯುತ್ತಿರುವ ಕಾಮಗಾರಿಗೆ ನಮ್ಮ ಪಾಲಿನ ಹಣ ಕೊಡಲಾಗುತ್ತದೆ, ಹೈದ್ರಾಬಾದ್ ಕರ್ನಾಟಕ ಭಾಗದವರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com