ಆರ್‌ವಿ ದೇವರಾಜ್ ಸೇರಿ 8 ಮಂದಿ ವಿರುದ್ಧ ದೂರು ದಾಖಲು

ಸಿದ್ದಯ್ಯ ರಸ್ತೆ ಸಮೀಪ ಭೂಕಬಳಿಕೆ ಮಾಡಿದ ಆರೋಪದನ್ವಯ ಶಾಸಕ ಆರ್‌ವಿ ದೇವರಾಜ್, ಅವರ ಪತ್ನಿ...
ಚಿಕ್ಕಪೇಟೆ ಶಾಸಕ ಆರ್‌ವಿ ದೇವರಾಜ್ (ಸಂಗ್ರಹ ಚಿತ್ರ)
ಚಿಕ್ಕಪೇಟೆ ಶಾಸಕ ಆರ್‌ವಿ ದೇವರಾಜ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಸಿದ್ದಯ್ಯ ರಸ್ತೆ ಸಮೀಪ ಭೂಕಬಳಿಕೆ ಮಾಡಿದ ಆರೋಪದನ್ವಯ ಶಾಸಕ ಆರ್‌ವಿ ದೇವರಾಜ್, ಅವರ ಪತ್ನಿ ಸೇರಿದಂತೆ 8 ಮಂದಿ ವಿರುದ್ಧ ಕಲಾಸಿಪಾಳ್ಯ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕೃಂಬಿಗಲ್ ರಸ್ತೆ ಹಾಗೂ ಸಿದ್ದಯ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಗೆ ಸೇರಿದ ಹಾಗೂ ಆ ಜಾಗದ ಪಕ್ಕದ ನಿವೇಶನವನ್ನು ಇವರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು.

2 ಸ್ಥಳ ಬಿಬಿಎಂಪಿಗೆ ಸೇರಿದ್ದು, ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌ಆರ್ ರಮೇಶ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 8 ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದ್ದರು. ತನಿಖೆ ನಡೆಸಿದ ಕಲಾಸಿ ಪಾಳ್ಯ ಠಾಣೆ ಪೊಲೀಸರು ಶಾಸಕ ಆರ್‌ವಿ ದೇವರಾಜು, ಮಮತಾ ರಾಜ್, ಟಿವಿ ಪ್ರಭು, ಜ್ಯೋತಿರಾಣಿ, ಜೋಗಿಂದರ್ ಸಿಂಗ್ ಸಬರ್‌ವಾಲ್, ಕೆಕೆ ಸಬರ್ ವಾಲ್, ಗುರುಪ್ರೀತ್ ಸಿಂಗ್, ಎಚ್‌ಎ ಕೃಷ್ಣಮೂರ್ತಿ ಅವರ ವಿರುದ್ಧ ನಕಲಿ ದಾಖಲೆ ತಯಾರಿಕೆ, ವಂಚನೆ, ಅಧಿಕಾರ ದುರುಪಯೋಗ, ಸರ್ಕಾರಿ ಭೂಮಿ ಕಬಳಿಕೆ ಆರೋಪದಡಿ ಶನಿವಾರ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com