ಈಗಲೂ ಮೂಢನಂಬಿಕೆಗಳ ವೈಭವೀಕರಣ

ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿ ಕಂಡಿದೆ. ಮಂಗಳನ ಅಂಗಳಕ್ಕೆ ಹೋಗುವಂತಹ ಸಾಧನೆಗೆ ಭಾರತವೇ ಸಾಕ್ಷಿಯಾಗಿದೆ...
ಬಾಹ್ಯಾಕಾಶ ವಿಜ್ಞಾನಿ ಪ್ರೊಯು.ಆರ್. ರಾವ್ (ಸಂಗ್ರಹ ಚಿತ್ರ)
ಬಾಹ್ಯಾಕಾಶ ವಿಜ್ಞಾನಿ ಪ್ರೊಯು.ಆರ್. ರಾವ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿ ಕಂಡಿದೆ. ಮಂಗಳನ ಅಂಗಳಕ್ಕೆ ಹೋಗುವಂತಹ ಸಾಧನೆಗೆ ಭಾರತವೇ ಸಾಕ್ಷಿಯಾಗಿದೆ.

ಇಷ್ಟಾಗಿಯೂ ಸಮಾಜದಲ್ಲಿ ಮೂಢನಂಬಿಕೆಗಳ ವೈಭವೀಕರಣ ನಡೆಯುತ್ತಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಬಾಹ್ಯಾಕಾಶ ವಿಜ್ಞಾನಿ ಪ್ರೊಯು.ಆರ್. ರಾವ್ ಆತಂಕ ವ್ಯಕ್ತಪಡಿಸಿದರು.

ನಗರದ ಜವಾಹರಲಾಲ್ ನೆಹರು ತಾರಾಲಯದಲ್ಲಿ ಶನಿವಾರದಿಂದ ಪ್ರಾರಂಭವಾಗಿರುವ ಜೀವವಿಕಾಸವಾದದ `ನೈಸರ್ಗಿಕ ಆಯ್ಕೆ'ಎಂಬ ವಿನೂತನ ಮಿರರ್ ಡೋಂ ಪ್ರದರ್ಶನದ ಉದ್ಘಾಟನೆ ನಂತರ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇವಲ ಭಾರತ ಮಾತ್ರವಲ್ಲ, ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೂ ಮೂಢನಂಬಿಕೆಗಳು ಆಚರಣೆಯಲಿವೆ.

ಇದು ನಿಜಕ್ಕೂ ಆತಂಕಕಾರಿ ಸಂಗತಿ ಇಂದು ಮಕ್ಕ-ಳಿಗೆ ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿ ಮೂಡಿಸುವುದನ್ನು ಬಿಟ್ಟು,ದಿನ ಬೆಳಗಾದರೆ ದೃಶ್ಯ ವಾಹಿನಿಗಳಲ್ಲಿ ಜ್ಯೋತಿಷ್ಯ, ರಾಶಿ ಭವಿಷ್ಯದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಇದು ಮುಂದಿನ ಪೀಳಿ-ಗೆಯನ್ನು ಮತ್ತಷ್ಟು ಹಾದಿ ತಪ್ಪಿ-ಸುವ ಕೆಲಸವಾಗಿದೆ ಎಂದು ವಿಷಾದಿಸಿದರು.

ಹಳ್ಳಿಗಾಡಿನ ಪರಿಸರದಲ್ಲಿ ಅದ್ಭುತ ವಿಜ್ಞಾನ ಅಡ-ಗಿದೆ. ಇಂತಹ ವಿಷಯಗಳನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸುವ ಕೆಲಸವಾಗಬೇಕು. ಆದರೆ, ಇಂದು ಶಾಲಾ-ಕಾಲೇಜುಗಳಲ್ಲಿ ಪಠ್ಯದ ನೋಟ್ಸ್ ಕೊಟ್ಟು ಅವರ ಕಲಿಕೆಯನ್ನು ಕುಂಠಿತಗೊಳಿಸಲಾಗುತ್ತಿದೆ. ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ ,ಶಾಲಾಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು ಮಾಡಬೇಕು. ಅವುಗಳನ್ನು ಗ್ರಾಮೀಣ ಭಾಗಗಳಿಗೂ ಕೊಂಡೊಯ್ಯುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಪ್ರೊ ಕೆ.ಎನ್.ಗಣೇಶ ಯ್ಯ, `ನೈಸರ್ಗಿಕ ಆಯ್ಕೆ' ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಚಾಲ್ರ್ಸ್ ಡಾರ್ವಿನ್‍ರ ವಿಕಾಸವಾದದ ಸಿದ್ಧಾಂತದಿಂದ ವೈಜ್ಞಾನಿಕ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ. ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ಹಲವಾರು ಅಭಿಪ್ರಾಯಗಳಲ್ಲಿ ಬದಲಾವಣೆಗಳು ಕಂಡುಬಂದವು ಎಂದು ಅಭಿಪ್ರಾಯಪಟ್ಟರು. ವೈಜ್ಞಾನಿಕ ಪ್ರಗತಿಯಿಂದ ಹೊಸ ಗ್ರಹದ ಶೋಧನೆಯೂ ಯಶಸ್ಸುಕಾಣಬಹುದು. ಆದರೆ, ಅಲ್ಲಿಯೂ ಜೀವ ವಿಕಾಸವಾದದ ತಿಳವಳಿಕೆಗೆ ಡಾರ್ವಿನ್ ವಿಕಾಸವಾದ ಅತೀ ಮುಖ್ಯವಾಗುತ್ತದೆ.

ವಿಕಾಸವಾದ ಬೆಳಕಿಗೆ ಬರದಿದ್ದರೆ, ಜೀವ ಜಗತ್ತಿನ ನಿಗೂಢತೆ ಇನ್ನು ಹಾಗೆಯೇ ಉಳಿದಿರುತ್ತಿತ್ತು. ಪ್ರಸ್ತುತ ಇದು ನೆಹರು ತಾರಾಲಯದಲ್ಲಿ ಕನ್ನಡದಅವತರಣಿಕೆಯ ರೂಪದಲ್ಲಿ ಪ್ರದರ್ಶನ ಗೊಳ್ಳುತ್ತಿರುವುದು ಮಕ್ಕಳ ವಿಕಾಸಕ್ಕೆ ಹೆಚ್ಚು ಉಪಯೋಗವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜವಾಹರ್ಲಾಲ್ ನೆಹರು ತಾರಾಲಯದ ನಿರ್ದೇಶಕಿ ಬಿ.ಎಸ್. ಶೈಲಜಾ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿ ಭಾನುವಾರವೂ ಪ್ರದರ್ಶನ ಜವಾಹರಲಾಲ್ ನೆಹರು ತಾರಾ-ಲ-ಯದಲ್ಲೀಗ `ನೈಸರ್ಗಿಕ ಆಯ್ಕೆ' ಪ್ರದರ್ಶನ ಶುರುವಾಗಿದೆ. ಖ್ಯಾತ ಸಂಶೋಧಕ ಚಾಲ್ರ್ಸ್ ಡಾರ್ವಿನ್ ಪ್ರತಿಪಾದಿಸಿದ ಜೀವವಿಕಾಸವಾದದ ದೃಶ್ಯ ಚಿತ್ರಣವಿದು. 40 ನಿಮಿಷಗಳ ಈ ದೃಕ್ ಶ್ರವಣಕಾರ್ಯಕ್ರಮವೂ ಗಲಾಸಗಾಸ್ ದ್ವೀಪಗಳಿಗೆ ಡಾರ್ವಿನ್‍ರ ಭೇಟಿ, ಅಲ್ಲಿನ ಜೀವವೈವಿಧ್ಯ ಹಾಗೂ ಅವರು ನಡೆಸಿದ ಸೂಕ್ಷ್ಮವೀಕ್ಷಣೆಗಳ ಸರಳ, ಪರಿಪೂರ್ಣ ಪ್ರಕ್ರಿಯೆಯನ್ನು ತೆರೆಯಲ್ಲಿ ಕಟ್ಟಿ ಕೊಡುತ್ತದೆ.

ಮಿರಾಜ್ 3ಡಿ ಸಂಸ್ಥೆಯ ನಿರ್ಮಾಣದ `ನೈಸರ್ಗಿಕ ಆಯ್ಕೆ' ಮಿರರ್ ಡೋಂ ಪ್ರದರ್ಶನವಾಗಿದೆ. ತಾರಾಲಯದಲ್ಲಿ ಪ್ರತಿದಿನ `ನಮ್ಮ ಸೌರವ್ಯೂಹ' ಹಾಗೂ `ಕೆಂಪು ಗ್ರಹ-ಮಂಗಳ' ಕುರಿತು ಮಧ್ಯಾಹ್ನ ಮತ್ತು ಸಂಜೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪ್ರದರ್ಶನಗಳು ನಡೆಯುತ್ತವೆ. ಈಗ ಹೊಸದಾಗಿ `ನೈಸರ್ಗಿಕ ಆಯ್ಕೆ' ಪ್ರದರ್ಶನವು ಸೇರ್ಪಡೆಗೊಂಡಿದ್ದು, ಇದು ಪ್ರತಿ ಭಾನುವಾರ ಬೆಳಗ್ಗೆ 11.30ಕ್ಕೆ ಕನ್ನ-ಡ-ದಲ್ಲಿ ಮಧ್ಯಾಹ್ನ 1.30ಕ್ಕೆ ಆಂಗ್ಲ ಮಾಧ್ಯಮದಲ್ಲಿ ಪ್ರದರ್ಶನಗೊಳ್ಳಲಿದೆ.

ಸಚಿವರೂ ಮೊರೆ
ಮೌಢ್ಯ ಅಥವಾ ವಾಸ್ತುವಿನ ನಂಬಿಕೆ ಕೇವಲ ಸಾಮಾನ್ಯ ಜನರಲ್ಲಿ ಮಾತ್ರವಲ್ಲ, ರಾಜಕಾರಣಿಗಳಲ್ಲೂ ಇದೆ. ರಾಜ್ಯವನ್ನು ಸುಸ್ಥಿತಿಯತ್ತ ಕೊಂಡೊಯ್ಯಬೇಕಿರುವ ಸಚಿವರು ಕೂಡ ವಾಸ್ತು, ಜ್ಯೋತಿಷ್ಯ ನೋಡಿ ಮನೆ ಪ್ರವೇಶ ನಡೆಸುತ್ತಾರೆ. ಅಧಿಕಾರ ಸ್ವೀಕರಿಸುತ್ತಾರೆ. ಸಾರ್ವಜನಿಕರ ಹಣ ವನ್ನು ಹೀಗೂ ವ್ಯರ್ಥ ಮಾಡುತ್ತಿದ್ದಾರೆ.
-ಪ್ರೊ. ಯು.ಆರ್. ರಾವ್, ಹಿರಿಯ ವಿಜ್ಞಾನಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com