ಮಹಾಪೌರರ ಅವಧಿ 5 ವರ್ಷ ಶಿಫಾರಸು

ನಗರ ಸ್ಥಳೀಯ ಸಂಸ್ಥೆಗಳ ಮಹಾಪೌರರು ಮತ್ತು ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ನಿಗದಿಪಡಿಸಬೇಕು ಎಂದು...
ಬಿಬಿಎಂಪಿ
ಬಿಬಿಎಂಪಿ

ವಿಧಾನಸಭೆ: ನಗರ ಸ್ಥಳೀಯ ಸಂಸ್ಥೆಗಳ ಮಹಾಪೌರರು ಮತ್ತು ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ನಿಗದಿಪಡಿಸಬೇಕು ಎಂದು ವಿಧಾನಮಂಡಲದ ಅರ್ಜಿಗಳ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವಿಧಾನಸಭೆ ಉಪಾಧ್ಯಕ್ಷ ಎಚ್.ಎನ್. ಶಿವಶಂಕರ ರೆಡ್ಡಿ ಅವರು ಅಧ್ಯಕ್ಷರಾಗಿರುವ ಅರ್ಜಿಗಳ ಸಮಿತಿ ವಿಧಾನಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಈಗ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 12
ತಿಂಗಳು ಮತ್ತು 30 ತಿಂಗಳು ಅಧಿಕಾರ ನಿಗದಿಪಡಿಸುವುದರಿಂದ ಆಡಳಿತದಲ್ಲಿ ಶಿಥಿಲತೆ ಉಂಟಾಗುತ್ತದೆ. ಹೀಗಾಗಿ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ನಿಗದಿ ಮಾಡುವಂತೆ ಶಿಫಾರಸು ಮಾಡಲಾಗಿದೆ.

ಮಹಾಪೌರರು ಮತ್ತು ಅಧ್ಯಕ್ಷರಿಗೆ ಆಯಾ ಸ್ಥಳೀಯ ಸಂಸ್ಥೆಯ ಆಯುಕ್ತರು ಮತ್ತು ಮುಖ್ಯಾಧಿಕಾರಿಗಳಿಗೆ ನೀಡುವ ವೇತನಕ್ಕಿಂತ ರು. 1,000 ಹೆಚ್ಚುವರಿ ಮಾಸಿಕ ವೇತನ, ಉಪಾಧ್ಯಕ್ಷರಿಗೆ, ಉಪಮಹಾಪೌರರಿಗೆ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸಹಾಯಕ ಪೌರಾಯುಕ್ತರ ವೇತನಕ್ಕಿಂತ ರು1,000 ಹೆಚ್ಚು, ಇತರೆ ಸದಸ್ಯರಿಗೆ ಪ್ರಥಮ ದರ್ಜೆ ಗುಮಾಸ್ತರಿಗಿಂತ ರು. 1,000 ಹೆಚ್ಚುವರಿ ವೇತನ ನಿಗದಿ ಮಾಡಬೇಕು. ಜತೆಗೆ ಸರ್ಕಾರದಿಂದ ಅಧ್ಯಕ್ಷರು, ಉಪಾಧ್ಯಕ್ಷರು, ಮಹಾಪೌರರು ಮತ್ತು ಉಪಮಹಾಪೌರರಿಗೆ ಸರ್ಕಾರಿ ವಸತಿ ಸೌಲಭ್ಯ ನೀಡಬೇಕು.

ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವ ಸದಸ್ಯರು ಕಡ್ಡಾಯವಾಗಿ 60 ವರ್ಷ ದಾಟಿದವರಾಗಿರಬೇಕು. ಜತೆಗೆ ಸರ್ಕಾರಿ ನೌಕರರಾಗಿರಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಶಿಸ್ತು ಮತ್ತು ದಕ್ಷತೆ ಮೂಡಿಸಲು ಪೌರಾಡಳಿತ ಅಧಿಕಾರಿಗಳಿಗೆ ನಿಯಮಿತವಾಗಿ ಪೊಲೀಸ್ ಅಧಿಕಾರ ನೀಡುವಂತೆ ಶಿಫಾರಸು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com