

ಬೆಂಗಳೂರು: ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ಹೊರಡಿಸಿರುವ ಸುಗ್ರೀವಾಜ್ಞೆ ವಿರೋಧಿಸಿ ಮಾಜಿ ಸಿಎಂ ದೇವರಾಜ ಅರಸು ಹುಟ್ಟೂರಿನಿಂದ ಬೆಂಗಳೂರಿನವ ರೆಗೂ ಪಕ್ಷಾತೀತ ವಾಗಿ, ವಿವಿಧ ಸಂಘ ಸಂಸ್ಥೆ ಗಳ ಸಹಯೋಗ ದಲ್ಲಿ ರೈತ ರಥ ಯಾತ್ರೆ ಹಮ್ಮಿಕೊಂಡಿರುವುದಾಗಿ ಮಾಜಿ ಸಂಸದ ವಿಶ್ವನಾಥ್ ಹೇಳಿದ್ದಾರೆ. ಗುರುವಾರ ಜಯ ಕರ್ನಾಟಕ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿ ಕುರಿತ ಚರ್ಚೆ ಹಾಗೂ ಭೂ ಸ್ವಾಧೀನ ಸುಗ್ರೀವಾಜ್ಞೆ ಬಗ್ಗೆ ಒಂದು ಚಿಂತನೆ'ಯಲ್ಲಿ ಮಾತನಾಡಿದ ಅವರು, ಅರಸು ಅವರು ಉಳುವವನೇ ಹೊಲದೊಡೆಯ ಎಂಬ ನೀತಿ ಜಾರಿಗೆ ತಂದರೆ, ಕೇಂದ್ರ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದೆ. ಹೀಗಾಗಿ ಜನಜಾಗೃತಿ ಮೂಡಿಸುವ ಉದ್ದೇಶವಿಂದ ಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ದೇವರಾಜ ಅರಸು ಹುಟ್ಟಿದ ಕಲ್ಲಳ್ಳಿ ಗ್ರಾಮದಿಂದ ಮಾ.11ರಂದು ಯಾತ್ರೆ ಆರಂಭಿಸುವ ಯೋ ಜನೆ ಇದೆ. ಈ ಸಂಬಂಧ ಕನ್ನಡ ಸಂಘಟನೆಗಳು, ಬೇರೆ ಬೇರೆ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಯಾತ್ರೆಯು ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆ ಗೊಳ್ಳಲಿದ್ದು, ಬಹಿರಂಗ ಸಮಾವೇಶ ಆಯೋ ಜಿಸಲಾಗಿದೆ. ಇಲ್ಲಿ ರಾಜಕೀಯ ಮುಖಂಡರು, ಹೋರಾಟಗಾರರು ಮಾತನಾಡಲಿದ್ದಾರೆ ಎಂದರು. ಉಣ್ಣುವ ಜನರೆಲ್ಲಾ ಈ ಸುಗ್ರೀವಾಜ್ಞೆ ವಿರುದ್ಧ ಸಿಡಿದೇಳಬೇಕಾಗಿದೆ ಎಂದರು.