ಪೋಲೀಸ್ ಆಯುಕ್ತರ ವಿರುದ್ಧ ಆಕ್ರೋಶ

ತನಿಖೆ ಆಗುವುದಕ್ಕೆ ಮುನ್ನವೇ ಡಿ.ಕೆ. ರವಿ ನಿಗೂಢ ಸಾವನ್ನು ಆತ್ಮಹತ್ಯೆ ಎಂದು ಹೇಳಿಕೆನೀಡಿದ ಬೆಂಗಳೂರು ಪೊಲೀಸ್ ಆಯುಕ್ತ...
ವಿಧಾನಸಭೆ
ವಿಧಾನಸಭೆ

ವಿಧಾನಸಭೆ: ತನಿಖೆ ಆಗುವುದಕ್ಕೆ ಮುನ್ನವೇ ಡಿ.ಕೆ. ರವಿ ನಿಗೂಢ ಸಾವನ್ನು ಆತ್ಮಹತ್ಯೆ ಎಂದು ಹೇಳಿಕೆನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ವಿರುದ್ಧ  ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಈ ವಿಚಾರ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್,
ಬೆಂಗಳೂರು ಪೋಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರ ಹೇಳಿಕೆಯೇ  ಇದನ್ನು ಧ್ವನಿಸುತ್ತದೆ. ತನಿಖೆ ಪೂರ್ಣಗೊಂಡು ವರದಿ ಸಲ್ಲಿಕೆಯಾಗುವುದಕ್ಕೂ ಮುನ್ನವೇ ಅವರು ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು. ತನಿಖೆಗೆ ಮೊದಲೇ ಮಧ್ಯಂತರ ವರದಿ ನೀಡುವಂತೆ ವರ್ತಿಸಿದ್ದು ಮಾತ್ರವಲ್ಲ, ಬೆಳಗ್ಗೆ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ಕ್ಷಣದಿಂದ ಇದುವರೆಗಿನ
ಎಲ್ಲ ಬೆಳವಣಿಗೆಗಳು ಸರ್ಕಾರದ ನಡೆಯ ಮೇಲೆ ಅನುಮಾನ ಮೂಡಿಸುತ್ತಿದೆ ಎಂದರು.
ಆಂಟಿಸಿಪೇಟರಿ ಜಡ್ಜ್‍ಮೆಂಟ್: ಮಾಜಿ ಕಾನೂನು ಸಚಿವ ಸುರೇಶ್‍ಕುಮಾರ್ ಮಾತನಾಡಿ, ಆರೋಪಿಗಳು ಎಂಟಿಸಿಪೇಟರಿ ಬೇಲ್ ತೆಗೆದು ಕೊಳ್ಳುವ ರೀತಿ ಬೆಂಗಳೂರು ಪೊಲೀಸ್ ಆಯುಕ್ತರು ಆಂಟಿಸಿಪೇಟರಿ ಜಡ್ಜ್‍ಮೆಂಟ್ ಕೊಟ್ಟಿದ್ದಾರೆ. ಉತ್ತರ ಭಾರತದಲ್ಲಿ ಮಾತ್ರ ನಡೆಯುತ್ತಿದ್ದ ಈ ಪ್ರಕರಣ ಈಗ ಕರ್ನಾಟಕದಲ್ಲಿ ನಡೆಯುತ್ತಿದೆ. ಕೆಲ
ರಾಜಕಾರಣಿಗಳ ಹೆಸರೂ ಇದರಲ್ಲಿ ಥಳುಕು ಹಾಕಿಕೊಂಡಿದೆ. ಇಂಥ ಸಂದರ್ಭ ದಲ್ಲಿ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕಾ ಗುತ್ತದೆ. ಆದರೆ, ಪೊಲೀಸ್ ಆಯುಕ್ತರ ವರ್ತನೆ ಅನುಮಾನಕ್ಕೆ ಕಾರಣವಾಗಿದೆ. ಈ ಹಂತದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ನಾವೆಲ್ಲರೂ ಪಶ್ಚಾತಾಪ ಪಡಬೇಕಾಗುತ್ತದೆ ಎಂದರು. ತನಿಖೆಗೂ ಮುನ್ನವೇ ಮಧ್ಯಂತರ ವರದಿ: ಮಾಜಿ ಗೃಹ ಸಚಿವ ಆರ್.ಅಶೋಕ ಮಾತನಾಡಿ, ಪೋಲೀಸ್ ಆಯುಕ್ತರು ತನಿಖೆಗೆ ಮುನ್ನ ಮಧ್ಯಂತರ ವರದಿ ನೀಡಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದರೆ ಒಳನೋಟ ಏನು ಎಂಬುದು ಬಹಿರಂಗವಾಗಬೇಕು. ಆಯುಕ್ತರು ಇಂಥ ಹೇಳಿಕೆ ನೀಡುವ ಅಗತ್ಯವಾದರೂ ಏನಿತ್ತು? ಪೊಲೀಸ್ ಆಯುಕ್ತರು ಇದೊಂದು ಆತ್ಮಹತ್ಯೆ ಎಂಬ ಅಭಿಪ್ರಾಯಕ್ಕೆ ಬಂದರೆ ಇನ್ನು ಕಿರಿಯ ಅಧಿಕಾರಿಗಳು ಹೇಗೆ ಕರ್ತವ್ಯ ನಿರ್ವಹಣೆ ಮಾಡುವುದಕ್ಕೆ ಸಾಧ್ಯ? ಈ ಪ್ರಕರಣದಲ್ಲಿ ಹಲವು ಸಂಶಯದ ಭೂತ ಜನರನ್ನು ಕಾಡುತ್ತಿದೆ ಎಂದರು.ತನಿಖೆ ಆರಂಭಕ್ಕೆ ಮುನ್ನವೇ ರವಿ ಸಾವು ಆತ್ಮಹತ್ಯೆ ಎಂಬ ಹೇಳಿಕೆಗೆ ಶಾಸಕರ ಖಂಡನೀಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com