

ವಿಧಾನಪರಿಷತ್ತು: ರವಿ ಅಸಹಜ ಸಾವಿನ ಪ್ರಕರಣ ಸಿಬಿಐಗೆ ವಹಿಸಿದಾಗಿನಿಂದ ಸಿಎಂ ಸಿದ್ದರಾಮಯ್ಯ ಘೋಷಿಸುತ್ತಿದ್ದಂತೆ ಮೇಲ್ಮನೆ ಯಲ್ಲಿ ಭಾರೀ ಗದ್ದಲವಾಯಿತು. ಉತ್ತರ ನೀಡಲು ಆರಂಭಿಸುತ್ತಿದ್ದಂತೆಂಯೇ ಪದೇ ಪದೇ ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ಸದಸ್ಯರು ಸರ್ಕಾರವನ್ನು ಟೀಕಿಸಿದರು. ಒಂದು ಹಂತದಲ್ಲಿ ಸಿಎಂ ಕೈ ಮುಗಿದು, ಮಾತನಾಡಲು ಅವಕಾಶ ಕೊಡಿ ಎಂದು ಸಿಟ್ಟಿನಿಂದ ಕೇಳಿದ ಸಂಗತಿಯೂ ನಡೆಯಿತು. ಇದೇ ವೇಳೆ ಸಿಎಂ ಸಿಬಿಐ ತನಿಖೆ ಘೋಷಣೆ ಮಾಡುತ್ತಿದ್ದಂತೆ ಪ್ರತಿಪಕ್ಷ ನಾಯಕ ಕೆ.ಎಸ್.
ಈಶ್ವರಪ್ಪ ಅವರು ಗೃಹ ಸಚಿವ ಜಾರ್ಜ್ ರಾಜಿನಾಮೆಗೆ ಹಾಗೂ ಪೋಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ಜಾರ್ಜ್ ಸಹ ಕೆರಳಿದಂತೆ ಕಂಡುಬಂದರು. ಉತ್ತರ ನೀಡುವ ವೇಳೆ ಸಿಎಂ ಪ್ರಸ್ತಾಪಿಸಿದ ಎರಡು ಮೂರು ಅಂಶಗಳು ಕೋಲಾಹಲಕ್ಕೆ ಕಾರಣವಾಯಿತು. ವಿರೋಧ ಪಕ್ಷಗಳು ಒಬ್ಬ ಅಧಿಕಾರಿಯ ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭಗಳಿಸಲು ಹೊರಟಿರುವುದು ದುರದೃಷ್ಟಕರ. ಈ ದುರುದ್ದೇಶದಿಂದ ಪ್ರತಿಪಕ್ಷ ನಾಯಕರು ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೃತ ಅಧಿಕಾರಿಯ ಕುಟುಂಬದ ಸದಸ್ಯರನ್ನು ಭಾವನಾತ್ಮಕವಾಗಿ ಬಳಸುತ್ತಿದ್ದಾರೆ. ದುಃಖತಪ್ತ ಹೆತ್ತವರನ್ನು ಮಗ ನ ಅಂತ್ಯಕ್ರಿಯೆ ಮರುದಿನವೇ ಬೆಂಗಳೂರಿಗೆ ಕರೆ ತಂದು ಕೂರಿಸಿ ರಾಜಕೀಯ ಮಾಡಿದ್ದಾರೆ ಎಂದರು. ಒಂದು ಹಂತದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಾಗ ಪ್ರತಿಕ್ರಿಯಿಸಿದ ಸಿಎಂ,`ಈಶ್ವರಪ್ಪನವರು ಒಂದು ಹೇಳಿಕೆ ಬರೆದು
ಕೊಡಲಿ ನಾನದನ್ನು ಓದಿಬಿಡುತ್ತೇನೆ. ಪ್ರತಿಪಕ್ಷಗಳು ಡರ್ಟಿ ಪೊಲಿಟಿಕ್ಸ್, ಚೀಪ್ ಪೊಲಿಟಿಕ್ಸ್ ಮಾಡುತ್ತಿವೆ ಎಂದರು. ಇದಕ್ಕೆ ಆಕ್ಷೇಪಿಸಿ ಗದ್ದಲ ನಡೆಸಿದಾಗ ಮಧ್ಯ ಪ್ರವೇಶಿಸಿ ಸ್ಪೀಕರ್ ಸಮಾಧಾನ ಮಾಡಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಸಿಟ್ಟಿಗೆದ್ದು ಸಭಾತ್ಯಾಗ ಮಾಡಿದರು