ಬಿಬಿಎಂಪಿ ಲೆಕ್ಕಾಚಾರ; ಯಾರದ್ದು ವ್ಯವಹಾರ?

ಬಿಬಿಎಂಪಿಯಲ್ಲಿ ತಾಳಮೇಳವೇ ಇಲ್ಲ ಎಂದು ಸಿಎಂ ಹೀಯಾಳಿಸಿದ್ದರೂ, ಅದರ ಆರ್ಥಿಕ ಲೆಕ್ಕಾಚಾರದಲ್ಲಿ ಯಾರ್ಯಾರು ಮೂಗು ತೋರಿಸುತ್ತಾರೆ ಗೊತ್ತಾ?...
ಬಿಬಿಎಂಪಿ
ಬಿಬಿಎಂಪಿ
Updated on: 

ಬೆಂಗಳೂರು: ಬಿಬಿಎಂಪಿಯಲ್ಲಿ ತಾಳಮೇಳವೇ ಇಲ್ಲ ಎಂದು ಸಿಎಂ ಹೀಯಾಳಿಸಿದ್ದರೂ, ಅದರ ಆರ್ಥಿಕ ಲೆಕ್ಕಾಚಾರದಲ್ಲಿ ಯಾರ್ಯಾರು ಮೂಗು ತೋರಿಸುತ್ತಾರೆ ಗೊತ್ತಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ, ಸಚಿವ ರಾಮಲಿಂಗಾರೆಡ್ಡಿ ಆಪ್ತ ಸಹಾಯಕ ಮಲ್ಲಿಕಾರ್ಜುನ, ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಆಪ್ತ ಸಹಾಯಕ, ಶಾಸಕರಾದಜಮೀರ್ ಅಹ್ಮದ್, ಪ್ರಿಯ ಕೃಷ್ಣ...!
- ಬುಧವಾರ ಬಿಬಿಎಂಪಿ ಸಭೆಯಲ್ಲಿ ಸತ್ಯ ಬಹಿರಂಗಗೊಂಡಿದೆ. ಗುತ್ತಿಗೆದಾರರಿಗೆ ವಿಶೇಷ ಎಲ್‍ಒಸಿ ಕೊಡಿಸಲು ಅಧಿಕಾರಿಗಳ ಮೇಲೆ ಈ ವ್ಯಕ್ತಿಗಳು ಪ್ರಭಾವ ಬೀರಿದ್ದಾರೆ ಎಂದು ಮುಖ್ಯ ಲೆಕ್ಕಾಧಿಕಾರಿ ಕನಕರಾಜು ಸಭೆಯಲ್ಲಿ ತಿಳಿಸಿದರು. ಸಭೆಯ ಆರಂಭದಲ್ಲಿ ಕಾಂಗ್ರೆಸ್ ಸದಸ್ಯರ ಧರಣಿಯಿಂದ ಶುರುವಾದ ಎಲ್‍ಒಸಿ ಚರ್ಚೆ, ಶಿಫಾರಸು ಮಾಡಿದವರ ಹೆಸರು ಬಹಿರಂಗಗೊಳ್ಳುವುದರಲ್ಲಿ ಅಂತ್ಯ ಕಂಡಿತು. ಮೇಲಿನ ಗಣ್ಯರು ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳೂ ಬಹಿರಂಗವಾಯಿತು. ಇದರಿಂದ ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರೇ ಕಕ್ಕಾಬಿಕ್ಕಿಯಾದರು.ಆದರೆ ಮುಖ್ಯಮಂತ್ರಿ, ಸಚಿವರ ಆಪ್ತ ಸಹಾಯಕರು ಕೂಡಾ ಎಲ್‍ಒಸಿ ನೀಡಲು ಪ್ರಭಾವ ಬೀರಿದ್ದಾರೆ ಎಂಬ ಅಂಶ ಬಹಿರಂಗವಾಗಿದ್ದು, ಸದಸ್ಯರಿಗೆ ಇರುಸುಮುರುಸಾಯಿತು. ಸಭೆ ಆರಂಭವಾದಾಗ ಇದೇ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಂಜುನಾಥ ರೆಡ್ಡಿ, ರಿಜ್ವಾನ್, ಗುಣಶೇಖರ್,
ಮೇಯರ್ ಪೀಠದ ಮುಂಭಾಗ ಬಂದು ಧರಣಿ ನಡೆಸಿದರು. ಮಧ್ಯಾಹ್ನದ ವೇಳೆಗೆ ಮಾಹಿತಿ ಕೊಡಿಸಲಾಗುವುದು ಎಂದು ಮೇಯರ್ ಶಾಂತಕುಮಾರಿ ಭರವಸೆ ನೀಡುತ್ತಿದ್ದಂತೆ, ಕೋಪಗೊಂಡ ಮಂಜುನಾಥ ರೆಡ್ಡಿ ಧಿಕ್ಕಾರ ಕೂಗಿ ಧರಣಿ ಕುಳಿತರು. ಹೀಗಾಗಿ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಮಧ್ಯಾಹ್ನ ಸಭೆಯಲ್ಲಿ ನಿರ್ಣಯಗಳ ಅನುಮೋದನೆ ನಂತರ ಮಾಹಿತಿಯನ್ನು ಸದಸ್ಯರಿಗೆ ನೀಡಲಾಯಿತು. ವಾರ್ಡ್‍ವಾರು
ಮಾಹಿತಿ ನೀಡಬೇಕು ಹಾಗೂ ಎಲ್‍ಒಸಿಗೆ ಶಿಫಾ ರಸು ಮಾಡಿದವರ ಹೆಸರು ಹೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಹೀಗಾಗಿ ಮುಖ್ಯ ಲೆಕ್ಕಾಧಿಕಾರಿ ಕನಕರಾಜು ಎಲ್‍ಒಸಿ ಪಡೆಯಲು ಕಾರಣರಾದ ಪ್ರಭಾವಿಗಳ ಹೆಸರನ್ನು ಬಹಿರಂಗಪಡಿಸಿದರು. ಜನವರಿಯಿಂದ ಆರಂಭವಾಗಿ ಮಾರ್ಚ್‍ವರೆಗೆ ವಿಶೇಷ ಎಲ್‍ಒಸಿ ನೀಡಲು ಪ್ರಭಾವ ಬೀರಿದ ವ್ಯಕ್ತಿಗಳ ಹೆಸರನ್ನು ಸಭೆಯಲ್ಲೇ ಓದಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com