ನಗರಸಭೆ ಸದಸ್ಯನ ಮೇಲೆ ಅಂಬಿ ಬೆಂಬಲಿಗರ ಹಲ್ಲೆ

ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷೆ ಚಂದ್ರಕಲಾ ಬೆಂಬಲಿಗ ಸದಸ್ಯ ಅನಿಲ್‍ಕುಮಾರ್ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಬೆಂಬಲಿಗರು ಹಲ್ಲೆ ನಡೆಸಿರುವ...
ವಸತಿ ಸಚಿವ ಅಂಬರೀಶ್
ವಸತಿ ಸಚಿವ ಅಂಬರೀಶ್
Updated on: 

ಮಂಡ್ಯ: ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷೆ ಚಂದ್ರಕಲಾ ಬೆಂಬಲಿಗ ಸದಸ್ಯ ಅನಿಲ್‍ಕುಮಾರ್ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

ನಗರದ ಚಾಮುಂಡೇಶ್ವರಿ ನಗರ ಬಡಾವಣೆಯಲ್ಲಿರುವ ಸಚಿವ ಅಂಬರೀಷ್ ನಿವಾಸದಲ್ಲಿ ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷೆ ಚಂದ್ರಕಲಾ ವಿರುದ್ಧ ಅವಿಶ್ವಾಸ ಮಂಡಿಸುವ ಕುರಿತಂತೆ ಕಾಂಗ್ರೆಸ್ ವೀಕ್ಷಕ ನಾರಾಯಣಪ್ಪ ಸದಸ್ಯರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಘಟನೆ ಜರುಗಿದೆ.

ಅಧ್ಯಕ್ಷ ಸಿದ್ದರಾಜು ಬೆಂಬಲಿಗರಾದ ಕಾಂಗ್ರೆಸ್ ಸದಸ್ಯ ಅನಿಲ್‍ಕುಮಾರ್ ಸಭೆಗೆ ಆಗಮಿಸಿದರು. ವೀಕ್ಷಕ ನಾರಾಯಣಪ್ಪ ಬಳಿ ಬಂದ ಅನಿಲ್‍ಕುಮಾರ್, `ಇವತ್ತು ಕಾಂಗ್ರೆಸ್ ಸಭೆ ಇದೆ ಅಂತ ನಮಗೆ ವಿಷಯ ತಿಳಿಸಲಿಲ್ಲ ಎಂದರು. ಆಗ ಮಾತಿಗೆ ಮಾತು ಬೆಳೆದು ವಾಗ್ವಾದ ಉಂಟಾಯಿತು. ಒಂದು ಹಂತದಲ್ಲಿ ಅನಿಲ್‍ಕುಮಾರ್ ಮೇಲೆ ಹಲ್ಲೆ ನಡೆಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com