

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಾತ್ಮಗಾಂಧಿ ಹಾಗೂ ಲಾಲ್ ಬಹ ದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸುವ ವೇದಿಕೆಯಾಗಿ ಪರಿಣಮಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ.ಹರಿಪ್ರಸಾದ್ ಗಾಂಧಿ ಸ್ಮರಣೆಯ ಜತೆಗೆ ಮೋದಿ ನಿಂದಿಸಿದರು.
ಸಿಎಂ ಹೇಳಿದ್ದೇನು?: ಸಿಎಂ ಸಿದ್ದ ರಾಮಯ್ಯ ಮಾತನಾಡಿ, ನಾಥೂರಾಂ ಗೋಡ್ಸೆ ಎಂಬ ದುರುಳ ಕೋಮುವಾ ದಿಯು ಮಹಾತ್ಮ ಗಾಂಧಿ ಅವರನ್ನು ಗುಂಡಿಟ್ಟು ಕೊಂದ. ಇಂದು ದೇಶದಲ್ಲಿ ಕೋಮುವಾದಿ ಶಕ್ತಿಗಳು ಪ್ರಬಲವಾಗು ತ್ತಿವೆ. ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸಿದ ಗಾಂಧೀಜಿ ಹುಟ್ಟಿದ ಗುಜರಾತ್ ರಾಜ್ಯದಲ್ಲಿ ಮೋದಿ ಹುಟ್ಟಿದ್ದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟರು.
ಧೈರ್ಯವಿದ್ದರೆ ಇಲ್ಲಿ ಮಾತನಾಡಲಿ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳಿದಾಗ ಮಾತ್ರ ದೇಶದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಅನ್ನು ನಿಂದಿಸುತ್ತಾರೆ. ಅಮೆರಿಕ, ಆಸ್ಟ್ರೇಲಿಯಾ, ರಷ್ಯಾದಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಮಾತ ನಾಡುತ್ತಾರೆ.
ಧೈರ್ಯವಿದ್ದರೆ ಸಂಸತ್ ನಲ್ಲಿ ಮಾತಾಡಲಿ, ದೇಶದೊಳಗೆ ಮಾತಾ ಡಲಿ. ಆಗ ನಾವು ಸೂಕ್ತ ಉತ್ತರ ನೀಡು ತ್ತೇವೆ ಎಂದು ಸವಾಲು ಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿ, ಮಹಾತ್ಮ ಗಾಂಧಿ ಅವರು ಹುಟ್ಟಿದ ನಾಡಿನಲ್ಲಿ ದೇಶವನ್ನು ವಿಭಜನೆ ಮಾಡಿದ ಮಹ್ಮದ್ ಅಲಿ ಜಿನ್ನಾ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟಿದ್ದು ವಿಪರ್ಯಾಸ. ಮೋದಿ ಅವರು ಯಾವುದೇ ದೇಶಕ್ಕೆ ಹೋದರೂ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ.
ನಮ್ಮ ಮನೆ ಸಮಸ್ಯೆಯನ್ನು ಯಾರಾದರೂ ಬೇರೆಯವರ ಮನೆಗೆ ಹೋಗಿ ಚರ್ಚೆ ನಡೆಸುತ್ತಾ ರೆಯೇ ಎಂದು ವ್ಯಂಗ್ಯವಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ.ಹರಿಪ್ರಸಾದ್ ಮಾತನಾಡಿ, ಅಹಿಂಸೆ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗಿಲ್ಲ. ಅವರ ಮೊಸಳೆ ಕಣ್ಣೀರಿನ ಅಗತ್ಯವಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ ಎಂದರು.