ಕೃಷ್ಣನ ಕಾಲದಿಂದ ಸಾಮಾಜಿಕ ನ್ಯಾಯ: ಸಿದ್ದರಾಮಯ್ಯ

ಪಾಂಡವರು ಮತ್ತು ಕೌರವರ ಮೇಲೆ ಶ್ರೀಕೃಷ್ಣನಿಗೆ ಸಮಾನ ಪ್ರೀತಿ ಇತ್ತಾದರೂ, ಪಾಂಡವರಿಗೆ ಅನ್ಯಾಯವಾದಾಗ ಅವರ ಪಕ್ಷಪಾತಿಯಾಗುತ್ತಿದ್ದ. ಅಂದರೆ ಸಾಮಾಜಿಕ ನ್ಯಾಯ ಅಲ್ಲಿಂದಲೇ ಪ್ರಾರಂಭವಾಗಿದೆ. ನಮ್ಮ ಸರ್ಕಾರ ಕೂಡ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಪಾಂಡವರು ಮತ್ತು ಕೌರವರ ಮೇಲೆ ಶ್ರೀಕೃಷ್ಣನಿಗೆ ಸಮಾನ ಪ್ರೀತಿ ಇತ್ತಾದರೂ, ಪಾಂಡವರಿಗೆ ಅನ್ಯಾಯವಾದಾಗ ಅವರ ಪಕ್ಷಪಾತಿಯಾಗುತ್ತಿದ್ದ. ಅಂದರೆ ಸಾಮಾಜಿಕ ನ್ಯಾಯ ಅಲ್ಲಿಂದಲೇ ಪ್ರಾರಂಭವಾಗಿದೆ. ನಮ್ಮ ಸರ್ಕಾರ ಕೂಡ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವಕಾಶ ವಂಚಿತರು, ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಸರ್ಕಾರ ಜವಾಬ್ದಾರಿ. ಸಂವಿಧಾನ ಕೂಡ ಅದ್ನ್ನೇ ಹೇಳಿದೆ.

ನಮ್ಮ ಸರ್ಕಾರ ಈ  ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ನಾವು ಅಹಿಂದ ಪರ ಎಂದು ಅನೇಕರು ಹೇಳುತ್ತಾರೆ. ಹಾಗೆಂದು ಅಹಿಂದೇ ತರರಿಗೆ ಅನ್ಯಾಯವೇನು ಮಾಡುತ್ತಿಲ್ಲ ಎಂದು ಸಮರ್ಥಿಸಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com