ಪಾಕಿಸ್ತಾನ ಪರ ರಮ್ಯಾ ಹೇಳಿಕೆ: ರಾಜ್ಯ ಬಿಜೆಪಿಯಿಂದ ಓವರ್ ರಿಯಾಕ್ಷನ್?

ಪಾಕ್ ನರಕವಲ್ಲ ಎಂದು ಹೇಳಿದ ಮಾಜಿ ಸಂಸದೆ ಹಾಗೂ ನಟಿ ರಮ್ಯ ವಿಷಯದಲ್ಲಿ ರಾಜ್ಯ ಬಿಜೆಪಿ ಘಟಕ ತುಸು ಹೆಚ್ಚಾಗಿಯೇ ಪ್ರತಿಕ್ರಿಯೆ ನೀಡಿದೆ. ಅಗತ್ಯಕ್ಕಿಂತ ...
ರಮ್ಯಾ
ರಮ್ಯಾ

ಮಂಗಳೂರು: ಪಾಕ್ ನರಕವಲ್ಲ ಎಂದು ಹೇಳಿದ ಮಾಜಿ ಸಂಸದೆ ಹಾಗೂ ನಟಿ ರಮ್ಯ ವಿಷಯದಲ್ಲಿ ರಾಜ್ಯ ಬಿಜೆಪಿ ಘಟಕ ತುಸು ಹೆಚ್ಚಾಗಿಯೇ ಪ್ರತಿಕ್ರಿಯೆ ನೀಡಿದೆ. ಅಗತ್ಯಕ್ಕಿಂತ ಹೆಚ್ಚಾಗಿ ರಮ್ಯಾ ಗೆ ಪ್ರಚಾರ ನೀಡಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರಮ್ಯಾ ಹೇಳಿಕೆ ವಿವಾದದಲ್ಲಿ ಬಿಜೆಪಿ ತೋರಿದ ಪ್ರತಿಕ್ರಿಯೆಗೆ ಪಕ್ಷದ ಹಿರಿಯ ಮುಖಂಡರೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಆಕೆಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಆಕೆಯನ್ನ ನಾವೇ ಹಿರೋ ಮಾಡಿದಂತಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಆಕೆಯ ಹೇಳಿಕೆಯನ್ನು ನಿರ್ಲಕ್ಷಿಸಬೇಕಾಗಿತ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ಯುವ ಸಮ್ಮೇಳನಕ್ಕೆ ರಮ್ಯಾ ಹೋಗುವ ಅವಶ್ಯಕತೆ ಏನಿತ್ತು. ಆಕೆ ಜನರ ಪ್ರತಿನಿಧಿಯಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ರಮ್ಯಾಗೆ ರಾಜಕೀಯದಲ್ಲಿ ಯಾವುದೇ ಮಹತ್ವವಿಲ್ಲ. ಆಕೆಯ ಹೇಳಿಕೆಗಳ ಬಗ್ಗೆ ಹೆಚ್ಚಿನ ಹಮನ ನೀಡುವುದರಲ್ಲಿ ಅರ್ಥವಿಲ್ಲ ಎಂದು, ಕೇರಳದಲ್ಲಿ ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ಸಿದ್ಧತೆ ನಡೆಸುತ್ತಿರುವ ಮತ್ತೊಬ್ಬ ಸಂಸದ ನವೀನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ರಮ್ಯಾ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಆಕೆಯ ಕಾರಿಗೆ ಮೊಟ್ಟೆ ಟಮೊಟೊ ಎಸೆದು ಮುತ್ತಿಗೆ ಹಾಕಲಾಯಿತು. ರಮ್ಯಾ ಇದರ ಬಗ್ಗೆ ಬೇಸರಿಸಿಕೊಳ್ಳದೇ ಅಲ್ಲಿದ್ದ 4 ಗಂಟೆಯೂ ನಗು ನಗುತ್ತಲೇ ಇದ್ದರು ಎಂದುಯುವ ಕಾಂಗ್ರೆಸ್ ಮುಖಂಡ ತಿಳಿಸಿದ್ದಾರೆ.

ಇನ್ನೂ ಮಂಡ್ಯದಲ್ಲಿ ರಮ್ಯಾ ಹೇಳಿಕ ವಿರುದ್ದ ನೂರಾರು ಕಾರ್ಯಕರ್ತರು ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.ಪಾಕಿಸ್ತಾನಕ್ಕೆ ಹೋಗಿ ಬಂದ ಮೇಲೆ ರಮ್ಯ ತಮ್ಮ ಮಾನಸಿಕ ಸ್ಥಿಮಿಕ ಕಳೆದು ಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com