ಗಿಫ್ಟ್ ಸಹ ಕಿಕ್ ಬ್ಯಾಕ್ ಇದ್ದಂತೆ, ಆ ವಾಚ್ ಯಾರು ಕೊಟ್ಟಿದ್ದು ಅಂತ ಸಿಎಂ ಹೇಳಲಿ:ಎಚ್ ಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲಕ್ಷಾಂತರ ರುಪಾಯಿ ಬೆಲೆ ಬಾಳುವ ವಾಚ್ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗಿಫ್ಟ್ ಸಹ ಕಿಕ್...
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲಕ್ಷಾಂತರ ರುಪಾಯಿ ಬೆಲೆ ಬಾಳುವ ವಾಚ್ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗಿಫ್ಟ್ ಸಹ ಕಿಕ್ ಬ್ಯಾಕ್ ಇದ್ದಂತೆ. ಹೀಗಾಗಿ ಆ ವಾಚ್ ಯಾರು ಗಿಫ್ಟ್ ಕೊಟ್ಟಿದ್ದು ಅಂತ ಸಿಎಂ ಹೇಳಲಿ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಡೈಮಂಡ್ ಲೇಪಿತ ಹ್ಯೂಬ್ಲೊಟ್ ಕಂಪನಿಯ ವಾಚ್ ಧರಿಸುತ್ತಿದ್ದು, ಅದರ ಬೆಲೆ ಅಂದಾಜು 50 ಲಕ್ಷದಿಂದ 70 ಲಕ್ಷ ರುಪಾಯಿ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಅದು ಗಿಫ್ಟ್ ಕೊಟ್ಟಿದ್ದು ಎಂದು ಹೇಳಿದ್ದರು. ಅಲ್ಲದೆ ಈ ಸಂಬಂಧ ಕುಮಾರಸ್ವಾಮಿ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಸಿಎಂ, ಕುಮಾರಸ್ವಾಮಿ ಅವರು ತಮ್ಮ ಮಗನಿಗೆ 5 ಕೋಟಿ ರುಪಾಯಿ ಕಾರು ಕೊಡಿಸಿದ್ದಾರೆ. ಈ ದುಡ್ಡು ಎಲ್ಲಿಂತ ಬಂತು ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ನನ್ನ ಮಗ ನಿಖಿಲ್ ಗೌಡ ಖಾಸಗಿ ಕಂಪನಿಯೊಂದರ ಉಪ ನಿರ್ದೇಶಕ, ಆತ ತನ್ನ ಸಂಪಾದನೆಯಲ್ಲಿ ಕಾರು ಖರೀದಿಸಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರು ತಮಗೆ ದುಬಾರಿ ವಾಚ್ ಗಿಫ್ಟ್ ನೀಡಿದವರ ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದೊಂದು ದಿನ ತಾನೇ ಆ ವಾಚ್ ನೀಡಿದವರು ಹೆಸರು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com