ಮದ್ದೂರು ಜನ ಸೋಲಿಸಿದರೆ ಎರಡು ವರ್ಷ ಆದ ಮೇಲೆ ಪ್ರಮೋಷನ್ ಸಿಗುತ್ತದೆ. ನನ್ನನ್ನು ಸೋಲಿಸಿದಾಗಲೆಲ್ಲಾ ಹೊಸ ಅವಕಾಶ ಸಿಕ್ಕಿದೆ. ತನ್ನಿಂದ ತಾನೇ ನನಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. 1967ರಲ್ಲೂ ಸಹ ನನಗೆ ಹಾಗೇಯೇ ಆಯಿತು. ಆದರೆ ಅನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ಗೆದ್ದೆ. ಆವಾಗ ಇಂದಿರಾ ಗಾಂಧಿ ಅವರ ಪರಿಚಯ ಆಯಿತು. ಸೋತಾಗಲೆಲ್ಲಾ ಬೇರೆ ಬೇರೆ ತಿರುವು ಸಿಗುತ್ತದೆ ಎಂದ ಅವರು, ರಾಜಕಾರಣದಲ್ಲಿ ವಿರೋಧಿಗಳ ವಿರುದ್ಧ ಮತ್ಸರ ಇರಬಾರದು ಎಂದು ತಿಳಿಸಿದ್ದಾರೆ.