ಬಿಜೆಪಿ ಸೇರ್ಪಡೆ ನನ್ನ ಪ್ರತಿಷ್ಠೆ ಹೆಚ್ಚಿಸಿದೆ: ಶ್ರೀನಿವಾಸ್ ಪ್ರಸಾದ್

ಸಾರ್ವಜನಿಕರ ಸೇವೆ ಮುಂದುವರಿಸಲು ನಾನು ಬಿಜೆಪಿ ಸೇರಿದೆ,ಇದರಿಂದ ನನ್ನ ಪ್ರತಿಷ್ಠೆ ಹೆಚ್ಚಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ...
ಬಿಜೆಪಿ ಸೇರಿದ ಶ್ರೀನಿವಾಸ್ ಪ್ರಸಾದ್
ಬಿಜೆಪಿ ಸೇರಿದ ಶ್ರೀನಿವಾಸ್ ಪ್ರಸಾದ್

ಬೆಂಗಳೂರು: ಸಾರ್ವಜನಿಕರ ಸೇವೆ ಮುಂದುವರಿಸಲು ನಾನು ಬಿಜೆಪಿ ಸೇರಿದೆ,ಇದರಿಂದ ನನ್ನ ಪ್ರತಿಷ್ಠೆ ಹೆಚ್ಚಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರಿದ ನಂತರ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನನ್ನನ್ನು ಸಂಪುಟದಿಂದ ಕೈಬಿಟ್ಟದ್ದರಿಂದ ನನ್ನ ಪ್ರತಿಷ್ಠೆಗೆ ಪೆಟ್ಟು ಬಿತ್ತು  ಎಂದು ಆರೋಪಿಸಿದರು. ನಾನು ಆರಂಭದಿಂದಲೂ ನನ್ನ ಆತ್ಮ ಗೌರವಕ್ಕೆ ಧಕ್ಕೆ ಯಾಗದಂತೆ, ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಗೌರವವಯುತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ,  ಆದರೆ ಸಿದ್ದರಾಮಯ್ಯ ನನ್ನ ಆತ್ಮಗೌರವಕ್ಕೆ ಮತ್ತು ಪ್ರತಿಷ್ಠೆಗೆ ಧಕ್ಕೆ ತಂದರು, ಅದನ್ನು ನನಗೆ ಸಹಿಸಿಕೊಳ್ಳಲಾಗಲಿಲ್ಲ, ಹೀಗಾಗಿ ನಾನು ಕಾಂಗ್ರೆಸ್ ತೊರೆದೆ ಎಂದು ತಿಳಿಸಿದರು.

ತಾವು ಬಿಜೆಪಿ ಸೇರಿದ್ದನ್ನು ಸಮರ್ಥಿಸಿಕೊಂಡ ಶ್ರೀನಿವಾಸ್ ಪ್ರಸಾದ್ ಬಿಜೆಪಿ ದಲಿತ ವಿರೋಧಿ ಪಕ್ಷವಲ್ಲ, ದೇಶದ ಜನರ ಆದೇಶಾಜ್ಞೆಯಂತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಇದಕ್ಕೂ ಮೊದಲು ರಾಜ್ಯದಲ್ಲೂ ಬಿಜೆಪಿ ಜನಾದೇಶ ಪಡೆದು ಸರ್ಕಾರ ರಚಿಸಿತ್ತು, ದಲಿತರು ಹಾಗೂ ಹಿಂದುಳಿದ ವರ್ಗದವರ ಸಹಾಯವಿಲ್ಲದೇ ಸರ್ಕಾರ ರಚಿಸಲು ಸಾಧ್ಯವಿಲ್ಲ, ಮೋದಿ ಅವರ ಸರ್ಕಾರದ ಕಾರ್ಯವೈಖರಿ, ಸಾಮಾಜಿಕ ಬದ್ಧತೆ ನನಗೆ ಬಿಜೆಪಿ ಸೇರಲು ಪ್ರೇರಣೆ ನೀಡಿತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com