ಬಿಎಸ್'ವೈ ಸಂಧಾನ ಸಭೆಗೆ ಅತೃಪ್ತರು ಗೈರು: ಪ್ರತಿಭಟನೆಯ ಸೂಚನೆ ನೀಡಿದ ರಾಯಣ್ಣ ಬ್ರಿಗೇಡ್

ರಾಜ್ಯದ ಬಿಜೆಪಿಯಲ್ಲಿನ ಆಸಮಾಧಾನ ಮತ್ತಷ್ಟು ಹೆಚ್ಚಾಗಿದ್ದು ಪಕ್ಷದಲ್ಲಿನ ಗೊಂದಗಳ ಬಗ್ಗೆ ಚರ್ಚಿಸಲು ಸಭೆ ಕರೆದು ಮಾತನಾಡುವಂತೆ ಒತ್ತಾಯಿಸಿದ್ದ ಅತೃಪ್ತ ನಾಯಕರೇ ಕೊನೆಯ ಕ್ಷಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲು...
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್

ಬೆಂಗಳೂರು: ರಾಜ್ಯದ ಬಿಜೆಪಿಯಲ್ಲಿನ ಆಸಮಾಧಾನ ಮತ್ತಷ್ಟು ಹೆಚ್ಚಾಗಿದ್ದು ಪಕ್ಷದಲ್ಲಿನ ಗೊಂದಗಳ ಬಗ್ಗೆ ಚರ್ಚಿಸಲು ಸಭೆ ಕರೆದು ಮಾತನಾಡುವಂತೆ ಒತ್ತಾಯಿಸಿದ್ದ ಅತೃಪ್ತ ನಾಯಕರೇ ಕೊನೆಯ ಕ್ಷಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲು ಹಿಂದೇಟು ಹಾಕುವ ಮೂಲಕ ಮತ್ತೊಮ್ಮೆ ಸಡ್ಡು ಹೊಡೆದಿದ್ದಾರೆ.

ಪಕ್ಷದಲ್ಲಿ ಉಂಟಾಗಿರುವ ಒಡಕು ಹಿನ್ನಲೆಯಲ್ಲಿ ನಾಯಕರೊಂದಿಗೆ ಸಂಧಾನ ಸಭೆ ನಡೆಸಿ ಬಿಕ್ಕಟ್ಟನ್ನು ಸರಿಪಡಿಸಲು ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದರು. ಇದರಂತೆ ನಿನ್ನೆ ಅತೃಪ್ತ ಮುಖಂಡರನ್ನು ಮಾತುಕತೆ ಆಹ್ವಾನಿಸಿದ್ದರು. ಆದರೆ, ಈ ಸಭೆ ಹಾಜರಾದ ಅತೃಪ್ತ ಮುಖಂಡರು ಮಾತುಕತೆಗೆ ಬದಲಾಗಿ ಹಲವು ಷರತ್ತುಗಳನ್ನು ವಿಧಿಸಿ ಮತ್ತೊಂದು ಪತ್ರವನ್ನು ರವಾನಿಸಿದ್ದರು. ಅತೃಪ್ತ ಈ ನಡೆ ಯಡಿಯೂರಪ್ಪ ಅವರಿಗೆ ತುಸು ಹಿನ್ನಡೆಯುಂಟಾಗುವಂತೆ ಮಾಡಿದೆ.

ಬಿಕ್ಕಟ್ಟು ಕುರಿತಂತೆ ಮಾತನಾಡಿರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಯವರು, ಬಿಜೆಪಿ ವಿರುದ್ಧ ರಾಯಣ್ಣ ಬಿಗ್ರೇಡ್ ನ್ನು ನಡೆಸಲಾಗುತ್ತಿದ್ದು, ಹಲವು ಬಾರಿ ಸಂಧಾನ ಸಭೆಗೆ ಆಹ್ವಾನ ನೀಡಿದ್ದರೂ ಮುಖಂಡರು ಮಾತ್ರ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಮುಖಂಡರು ತಮ್ಮ ಈ ನಡೆಯನ್ನು ನಿಲ್ಲಿಸಿದಿದ್ದರೆ ಕೇಂದ್ರ ನಿರ್ದೇಶನದಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖಂಡರು ನೀಡಿದ್ದ ಸಲಹೆ ಹಾಗೂ ಅಪೇಕ್ಷೆಯಂತೆಯೇ ಗೊಂದಲ ನಿವಾರಣೆಗಾಗಿ ಚರ್ಚೆ ನಡೆಸಲು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸಮಯ ನೀಡಿದ್ದರು. ಪಕ್ಷದ ಕಚೇರಿಗೆ ಪತ್ರ ಬರೆಯದಿದ್ದರೂ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಪತ್ರವನ್ನೇ ಅಧಿಕೃತವೆಂದು ಪರಿಗಣಿಸಿ ಈ ಸಭೆಯನ್ನು ಕರೆಯಲಾಗಿತ್ತು. ಬಿಎಸ್ ವೈ ಅವರ ನಡೆ ಆಕ್ಷೇಪಿಸಿ 24 ಜನರು ಪತ್ರವನ್ನು ಬರೆದಿದ್ದರು. ವಿರೋಧಿ ಅಲೆಗೆ ತೀವ್ರತೆ ಸಿಗುವುದನ್ನು ಕಂಡ ಯಡಿಯೂರಪ್ಪ ಅವರು ಪತ್ರ ಬರೆದಿದ್ದವರ 24 ಜನರ ಪೈಕಿ 12 ಜನರನ್ನು ಸಭೆಗೆ ಕರೆದಿದ್ದರು. ಆದರೆ, ಸಭೆಗೆ ರಾಜ್ಯಾಧ್ಯಕ್ಷರೇ ಉಪಸ್ಥಿತರಿದ್ದರೂ, ಸಲಹೆ ನೀಡಿದ್ದ ಮುಖಂಡರೇ ಮಾತುಕತೆಗೆ ಬರಲಿಲ್ಲ ಎಂದು ಹೇಳಿದರು.

ಮುಖಂಡರ ಕುಂದುಕೊರತೆಗಳಿಗಿಗೆ ಅವಕಾಶಗಳನ್ನು ನೀಡಬೇಕೆಂದು ನಾವು ಅವರಿಗೆ ಅವಕಾಶವನ್ನು ನೀಡಿದ್ದೆವು. ಆದರೆ, ಸಭೆಗೆ ಹಾಜರಾಗದ ಮೂಲಕ ಪಕ್ಷದಲ್ಲಿ ಏಕತೆಯನ್ನು ಸೃಷ್ಟಿಸಲು ಅವರಿಗೆ ಆಸಕ್ತಿಯಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಇದೀಗ ಶಾಸಕ ಶಿವಣ್ಣ ಹಾಗೂ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಇತರೆ ನಾಯಕ ವಿರುದ್ಧ ಜಾರಿ ಮಾಡಿದ್ದ ಶೋಕಾಸ್ ನೋಟಿಸ್ ನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಆದರೆ, ಬದಲಾವಣೆಗಳ ಆಗ್ರಹವನ್ನು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com